Skip to main content
www.kallianpur.com | Email : kallianpur7@gmail.com | Mob : 9741001849

*ಕಾರ್ಕಳ ಕ್ರಿಯೇಟಿವ್‌ ಕಾಲೇಜಿನ ಎನ್.ಎಸ್.ಎಸ್‌ ಶಿಬಿರದ ಪೂರ್ವಭಾವಿ ಸಭೆ*

By October 4, 2023Kannada News
kallianpurdotcom: 04/10/23

ಉಡುಪಿ : ಕಾರ್ಕಳದ ಮೂರೂರಿನಲ್ಲಿ ದಿನಾಂಕ : 12/10/2023 ರಿಂದ 18/10/2023 ರ ವರೆಗೆ ಬಿ. ಎಂ. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ರಿಯೇಟಿವ್‌ ಕಾಲೇಜಿನ ಎನ್‌.ಎಸ್‌.ಎಸ್‌ ಶಿಬಿರವು ನಡೆಯಲಿದೆ. ದಿನಾಂಕ : 30/09/2023 ರಂದು ಊರಿನ ಹಿರಿಯರು ಹಾಗೂ ಗಣ್ಯರ ಮಾರ್ಗದರ್ಶನದಲ್ಲಿ ಶಿಬಿರದ ಪೂರ್ವಭಾವಿ ಸಭೆ ನಡೆಯಿತು. ಕ್ರಿಯೇಟಿವ್‌ ವಿದ್ಯಾ ಸಂಸ್ಥೆಯ ಸಹ ಸಂಸ್ಥಾಪಕರಾದ ಡಾ. ಗಣನಾಥ ಶೆಟ್ಟಿ ಯವರು ಶಿಬಿರದ ಆಯೋಜನೆಯ ಉದ್ದೇಶ ಮತ್ತು ನಾಗರಿಕ ಸಮುದಾಯಗಳ ಪ್ರಗತಿ, ಊರಿನವರ ಸಹಕಾರ ಕುರಿತು ಪ್ರಾಸ್ತಾವಿಕ ವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಊರಿನ ಗಣ್ಯರಲ್ಲಿ ಶಿಬಿರದ ಎಲ್ಲ ಕೆಲಸ ಕಾರ್ಯಗಳಲ್ಲಿ ತನು-ಮನ-ಧನ ಸಹಾಯ ಮತ್ತು ಸಹಕಾರ ಕೋರಿದರು.

ಶಿಬಿರದ ಸಂಯೋಜಕರಾದ ಉಪನ್ಯಾಸಕ ಉಮೇಶ್‌ ರವರು ಪೂರ್ವ ತಯಾರಿ ಮತ್ತು ಶಿಬಿರದಲ್ಲಿ ಅಗತ್ಯತೆ ಮತ್ತು ಖರ್ಚು ವೆಚ್ಚಗಳ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಗಣ್ಯರಾದ ಪಂಚಾಯತ್‌ ಮಾಜಿ ಅಧ್ಯಕ್ಷರಾದ ಸಂತೋಷ ಶೆಟ್ಟಿ, ಉದ್ಯಮಿ-ಚೇತನ್‌ ಶೆಟ್ಟಿ, ಸರ್ವತ್ತೋಮ, ಕಡಂಬ ವಾಸು ಶೆಟ್ಟಿ, ಹರಿಶ್ಚಂದ್ರ ಕುಲಾಲ್‌, ಚಂದ್ರಶೇಖರ ಹೆಗ್ಡೆ, ಶಾಂತರಾಮ ಹೆಗ್ಡೆ, ಮಹಾವೀರ ಕಡಂಬ ಹಾಗೂ ವಿವಿಧ ಸಂಘ ಸಂಸ್ಥೆಗಳ ಗಣ್ಯರು ಸಮಾಜದ ಇನ್ನೂ ಅನೇಕರು ಉಪಸ್ಥಿತರಿದ್ದು ಸಂಪೂರ್ಣ ಸಹಕಾರದ ಭರವಸೆ ನೀಡಿದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.