Skip to main content
www.kallianpur.com | Email : kallianpur7@gmail.com | Mob : 9741001849

ಲಕ್ನೋದಲ್ಲಿ ಮೊಳಗಿದ ೧೯ನೇ ರಾಷ್ಟ್ರೀಯ ಕನ್ನಡ ಸಂಸ್ಕ್ರತಿ ಸಮ್ಮೇಳನ-೨೦೨೪.

By March 1, 2024Mumbai News
kallianpurdotcom: 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್

ಮುಂಬಯಿ (ಆರ್‌ಬಿಐ), ಫೆ.೨೯: ಲಕ್ನೋ ಕನ್ನಡ ಅಸೋಸಿ ಯೇಶನ್ ಮತ್ತು ಹೃದಯವಾಹಿನಿ ಕರ್ನಾಟಕ ಮಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಬೆಂಗಳೂರು ಇವರ ಸಹಕಾರ ದೊಂದಿಗೆ ಉತ್ತರ ಪ್ರದೇಶದ ಲಕ್ನೋ ಇಲ್ಲಿನ ಉತ್ತರ ಪ್ರದೇಶ್ ಸಂಸ್ಕ್ರತ್ ಸಂಸ್ಥಾನ್ ಸಭಾಗಂಣದಲ್ಲಿ ರಚಿಸಿದ ದಿ.ಸಾಹಿತಿ ಚನ್ನವೀರ ಕಣವಿ ವೇದಿಕೆಯಲ್ಲಿ ಕಳೆದ ಭಾನುವಾರ (ಫೆ.೨೫) ೧೯ನೇ ರಾಷ್ಟ್ರೀಯ ಕನ್ನಡ ಸಂಸ್ಕ್ರತಿ ಸಮ್ಮೇಳನವು ನಡೆಸಲ್ಪಟ್ಟಿತು.

ಲಕ್ನೋ ಕನ್ನಡ ಅಸೋಸಿಯೇಶನ್ ಅಧ್ಯಕ್ಷ ಹಾಗೂ ರಿಸರ್ವ್ ಬ್ಯಾಂಕ್‌ನ ಪ್ರಾದೇಶಿಕ ನಿರ್ದೇಶಕ ಬಾಲು ಕೆಂಚಪ್ಪ ಜ್ಯೋತಿ ಬೆಳಗಿಸಿ ಸಮ್ಮೇಳನ ಉದ್ಘಾಟಿಸಿದ್ದು ಗೌರವ ಅತಿಥಿಗಳಾಗಿ ನಿವೃತ್ತ ಮೈಸೂರು ಜಿಲ್ಲಾಧಿಕಾರಿ ಡಾ| ಡಿ.ಎಸ್ ವಿಶ್ವನಾಥ್ (ಐಎಎಸ್), ಮುಂಬಯಿಯ ಸಾಹಿತಿ ಮತ್ತು ಸಮಾಜ ಸೇವಕಿ ಪ್ರಭಾ ಎನ್.ಪಿ ಸುವರ್ಣ ಮತ್ತು ಸಾಹಿತಿ ಸಿದ್ದರಾಮಯ್ಯ ಹೊನ್ಕಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬಾಲು ಕೆಂಚಪ್ಪ ಮಾತನಾಡಿ ಉತ್ತರ ಪ್ರದೇಶದಲ್ಲಿ ಕನ್ನಡಿಗರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಆದರೆ ಲಕ್ನೋ ನಗರ ದಲ್ಲಿ ಕನ್ನಡಿಗರ ಸಂಖ್ಯೆ ಕಡಿಮೆ ಇದ್ದರೂ ೪೦ ವರ್ಷಗಳ ಹಿಂದೆ ಕರ್ನಾಟಕದಿಂದ ಇಲ್ಲಿಗೆ ಬಂದ ಬ್ಯಾಂಕ್ ಉದ್ಯೋಗಿ ಗಳು ಲಕ್ನೋದಲ್ಲಿ ಕನ್ನಡ ಸಂಘವನ್ನು ಕಟ್ಟಿ ಬೆಳೆಸಿದ್ದಾರೆ. ನಾವು ವರ್ಷಂ ಪ್ರತಿ ಎರಡು ಮೂರು ಕನ್ನಡ ಕಾರ್ಯಕ್ರಮ ಗಳನ್ನು ಆಯೋಜಿಸುತ್ತಿದ್ದೇವೆ. ಇಂದಿನ ಸಮ್ಮೇಳನ ಲಕ್ನೋ ಕನ್ನಡಿಗರಿಗೆ ಹೊಸ ಹುಮ್ಮಸ್ಸು ನೀಡಿದೆ ಎಂದರು.

ಸಮ್ಮೇಳನಾಧ್ಯಕ್ಷ ಸಂಗಮೇಶ ಬಾದವಾಡಗಿ ಮಾತನಾಡಿ ಬೆಂಗಳೂರಿನಲ್ಲಿ ಕನ್ನಡಿಗರೇ ಕನ್ನಡೇತರರಿಗೆ ಕನ್ನಡ ಕಲಿಯುವ ಅವಕಾಶ  ನೀಡುತ್ತಿಲ್ಲ. ಇವರೇ ಅವರ ಬಾಷೆಯಲ್ಲಿ ಮಾತ ನಾಡಲು ಮುಂದಾಗುತ್ತಾರೆ. ಹಾಗಾಗಿ ನಾವು ಕನ್ನಡೇ ತರರನ್ನು ದೂಷಿಸುವುದರಲ್ಲಿ ಅರ್ಥವಿಲ್ಲವೆಂದರು. ಕನ್ನಡ ಆಸೋಶಿ ಯೇಶನ್ ಲಕ್ನೋ ಕಾರ್ಯದರ್ಶಿ ಸಂಜೀವ ನಾಯಕ ಸ್ವಾಗತ ಭಾಷಣಗೈದು ಕರ್ನಾಟಕದಿಂದ ಇಲ್ಲಿಗೆ ೫೦ಕ್ಕೂ ಹೆಚ್ಚು ಜನ ಕಲಾವಿದರು ಆಗಮಿಸಿ ರುವುದು ಇದೇ ಮೊದಲು ಎಂದರು.

ರಾಷ್ಟ್ರೀಯ ಕನ್ನಡ ಸಂಸ್ಕ್ರತಿ ಸಮ್ಮೇಳನ ಸಮಿತಿ ಅಧ್ಯಕ್ಷ ಇಂ| ಕೆ.ಪಿ ಮಂಜುನಾಥ್ ಸಾಗರ್ ಪ್ರಾಸ್ತಾವಿಕ ನುಡಿಗಳ ನ್ನಾಡಿ ದೇಶದ ವಿವಿಧ ರಾಜ್ಯಗಳಲ್ಲಿ ಈ ವರಿಗೆ ಒಟ್ಟು ೧೮ ಸಮ್ಮೇಳನಗಳನ್ನು ಆಯೋಜಿಸಿದ್ದೇವೆ. ಉತ್ತರ ಪ್ರದೇಶ ದಲ್ಲಿ ಇದು ಪ್ರಪ್ರಥಮ ಸಮ್ಮೇಳನವಾಗಿದೆ ಎಂದರು.

ವೀರೇಶ್ ಬಂಗಾರ ಶೆಟ್ಟಿ, ಬಿಂಡಿಗನವಿಲೆ ಭಗವಾನ್ ಮತ್ತು ಪ್ರಭಾ ಸುವರ್ಣ ಸ್ವರಚಿತ ಕವನಗಳನ್ನು ಮತ್ತು ಸಾಂಸ್ಕ್ರ ತಿಕ ಕಾರ್ಯಕ್ರಮದ ಅಂಗವಾಗಿ ಅಂತರಾಷ್ಟ್ರೀಯ ಜಾನಪದ ಗಾಯಕ ಗೋನಾಸ್ವಾಮಿ, ಪುಷ್ಪ ಆರಾಧ್ಯ ಇವರು ಜಾನಪದ ಗೀತೆಗಳು ಮತ್ತು ಭಕ್ತಿ ಮಂಜರಿ ಪ್ರಸ್ತುತ ಪಡಿಸಿದರು.

ಹೊಂಗಿರಣ ಸೂತ್ರದಗೊಂಬೆ ಆಟ ಕಲಾತಂಡ ಹಳಿಯಾಳ ಉತ್ತರ ಕನ್ನಡ ಜಿಲ್ಲೆ ತಂಡವು ಸಿದ್ದಪ್ಪ ಬಿರಾದಾರ ನಿರ್ದೇಶನದಲ್ಲಿ ಶ್ರೀ ರಾಮನ ಪಟ್ಟಾಭಿಷೇಕ ಪ್ರಸಂಗ ಸಾದರ ಪಡಿಸಿದ್ದು, ಕಮಲಾಕ್ಷ ಪ್ರಭು ಸಂಚಾಲಕತ್ವದ ಬಾಲ ಮಿತ್ರ ಯಕ್ಷ ಶಿಕ್ಷಣ ಪ್ರತಿಷ್ಠಾನ ಸರಳೇಬೆಟ್ಟು ಉಡುಪಿ  ಇವರಿಂದ ಶರಸೇತು ಬಂಧನ, ರಾಮಕ್ಷತ್ರಿಯ ಕಲಾತಂಡ ಕೋಟೆಗಾರ್ ವಿದ್ಯಾವರ್ಧಕ ಸಂಘ ಹೊಸನಗರ ಇವರಿಂದ ಮಹಿಳಾ ಡೊಳ್ಳು ಕುಣಿತ, ಹನ್ಶಿತ್ ಆಳ್ವ, ಬಾಕ್ರಬೈಲ್ ಕಾಸರಗೋಡು ಭರತ ನಾಟ್ಯ, ನೃತ್ಯಾಂಜಲಿ ಕಲಾನಿಕೇತನ ಭರತನಾಟ್ಯ ಶಿಕ್ಷಣ ಸಂಸ್ಥೆ ಚನ್ನರಾಯಪಟ್ಟಣ ಇವರು ವಿದುಷಿ ಶೈಲಜಾ ಬಿ.ವಿ.ನಿರ್ದೇಶನದಲ್ಲಿ ನೃತ್ಯರೂಪಕ, ಮಂಜುನಾಥ್ ಮತ್ತು ತಂಡ ಕೋಲಾಟ ಕೋಲಾರ, ವಿಜಯ ಮತ್ತು ತಂಡ ಜಾನಪದ ನೃತ್ಯ ಬೆಂಗಳೂರು, ವರ್ಷಿತ ಮತ್ತು ತಂಡ ಸಮೂಹ ನೃತ್ಯ ಮಾಲೂರು, ವರುಣ್ ಮತ್ತು ತಂಡ ನೃತ್ಯ ರೂಪಕ ಬೆಂಗಳೂರು, ಶರತ್ ಮತ್ತು ತಂಡ ಜಾನಪದ ನೃತ್ಯ ಆನೇಕಲ್ ಕಲಾ ಪ್ರದರ್ಶನಗಳು ಸಾಂಸ್ಕ್ರ ತಿಕ ಕಾರ್ಯಕ್ರಮ ಗಳನ್ನು ನೀಡಿದ್ದು ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿ ಯಾದವು. ಪೂನಂ ನಾಯಕ ಮತ್ತು ತನಿಶಿ ನಾಯಕ ಕಾರ್ಯಕ್ರಮದ ವ್ಯವಸ್ಥಾಪನೆಗೆ ಯೋಗದಾನ ನೀಡಿದ್ದು ಅಭಿಷೇಕ್ ಭಟ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.