kallianpurdotcom: 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ (ಆರ್ಬಿಐ), ಮೇ.೧೭: ಅಂತರ್ಜಾಲ ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ಬಹಳಷ್ಟು ಹೆಸರು ಮಾಡಿದ ಮಾತ್ರವಲ್ಲ, ಸಹಸ್ರಾರು ಬಂಟರ ಸಾಧನೆಗಳನ್ನು ಸಮಾಜಕ್ಕೆ ಪರಿಚಯಿಸಿದ `ಬಂಟ್ಸ್ ನೌ’ ಅಂತರ್ಜಾಲ ಸುದ್ದಿ ಮಾಧ್ಯಮ ಸಂಸ್ಥೆಯ ಅನು ಬಂಧ-೨೦೨೪ ಕಾರ್ಯಕ್ರಮ ಇದೇ ಬರುವ ಭಾನುವಾರ (ಮೇ.೧೯) ಮಂಗಳೂರು ಪುರಭವನದಲ್ಲಿ ಅಪರಾಹ್ನ ೩:೦೦ ಗಂಟೆಯಿಂದ ರಾತ್ರಿ ೧೦:೦೦ ತನಕ ನಡೆಸಲಿದೆ.
ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟ ಅಧ್ಯಕ್ಷತೆಯಲ್ಲಿ ನಡೆಯಲಿರುವ ಅರ್ಥಪೂರ್ಣ, ಸಮಾಜ ಹಿತ ಕಾರ್ಯಕ್ರಮವನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಕೆ.ಅಜಿತ್ ಕುಮಾರ್ ರೈ ಮಾಲಾಡಿ, ಶ್ರೀದೇವಿ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷ ಡಾ| ಎ.ಸದಾನಂದ ಶೆಟ್ಟಿ, ಹಿರಿಯ ಉದ್ಯಮಿ ಅರಿಯಡ್ಕ ಚಿಕ್ಕಪ್ಪ ನಾಯ್ಕ, ಮಾಜಿ ಶಾಸಕ ಬನ್ನೂರು ಅಪ್ಪಣ್ಣ ಹೆಗ್ಡೆ ಅವರು ಸಾಂಕೇತಿಕವಾಗಿ ತುಳುನಾಡಿನ ಸಂಪ್ರ ದಾಯದಂತೆ ವಿವಿಧ ಆಕರ್ಷಕ ಶೈಲಿಗಳಲ್ಲಿ ಉದ್ಘಾಟಿಸಲಿದ್ದಾರೆ.
ಈ ಸಂಭ್ರಮದಲ್ಲಿ ಗೌರವ ಅತಿಥಿಗಳಾಗಿ ಜಸ್ಟಿಸ್ ಸಂತೋಷ್ ಹೆಗ್ಡೆ, ಡಾ| ಹೆಚ್.ಎಸ್ ಬಲ್ಲಾಳ್, ಡಾ| ಎ.ಜೆ. ಶೆಟ್ಟಿ, ಕರ್ನಿರೆ ವಿಶ್ವನಾಥ್ ಶೆಟ್ಟಿ, ಇಂದ್ರಾಳಿ ಜಯಕರ ಶೆಟ್ಟಿ, ವಿಜಯ್ ಶೆಟ್ಟಿ ಕಾರ್ಕಳ, ಅಜಿತ್ ಹೆಗ್ಡೆ ಶಾನಾಡಿ, ಶಾಸಕರುಗ ಳಾದ ಸುರೇಶ್ ಶೆಟ್ಟಿ ಗುರ್ಮೆ, ಗುರುರಾಜ್ ಶೆಟ್ಟಿ ಗಂಟಿಹೊಳೆ, ಮಾಜಿ ಶಾಸಕಿ ಶಕುಂತಳಾ ಕೆ.ಶೆಟ್ಟಿ ಪುತ್ತೂರು, ಮಧುಕರ ಶೆಟ್ಟಿ ಬೆಂಗಳೂರು, ವಸಂತ್ ಶೆಟ್ಟಿ ಬೆಳ್ಳಾರೆ (ದೆಹಲಿ), ಹರಿಪ್ರಸಾದ್ ರೈ, ಚಂದ್ರಹಾಸ್ ಶೆಟ್ಟಿ ರಂಗೋಲಿ, ಜಗನ್ನಾಥ ಶೆಟ್ಟಿ ಬಾಳ, ರಮೇಶ್ ಶೆಟ್ಟಿ ಸಿದ್ಧಕಟ್ಟೆ, ಚೇತನ್ ಶೆಟ್ಟಿ ಬೆಳಗಾವಿ, ಗಣೇಶ್ ಶೆಟ್ಟಿ ಡೊಂಬಿವಲಿ, ಜಯ ರಾಮ್ ಶೆಟ್ಟಿ ಬೆಳ್ತಂಗಡಿ, ಲೋಕಯ್ಯ ಶೆಟ್ಟಿ ಮುಂಚೂರು, ಭವ್ಯ ಎ.ಶೆಟ್ಟಿಸುರತ್ಕಲ್ ಆಗಮಿಸಲಿದ್ದಾರೆ.
ಈ ವಿಶೇಷ ಅದ್ಧೂರಿಯ ಸಮಾರಂಭದಲ್ಲಿ ಡಾ| ಎಂ.ಮೋಹನ್ ಆಳ್ವ, ಕರುಣಾಕರ ಎಂ.ಶೆಟ್ಟಿ (ಮೆಕೋಯ್), ಡಾ| ಆರ್.ಕೆ ಶೆಟ್ಟಿ, ಕಿಶೋರ್ ಹೆಗ್ಡೆ ಮೊಳಹಳ್ಳಿ, ಮಿತ್ರಂಪಾಡಿ ಜಯರಾಮ ರೈ, ಸೀತಾರಾಮ್ ರೈ, ಪ್ರವೀಣ್ ಶೆಟ್ಟಿ ಪುತ್ತೂರು ಮತ್ತು ಕರ್ನಲ್ ಜಗಜೀವನ್ ಭಂಡಾರಿ ಇವರಿಗೆ `ಬಂಟ ರತ್ನ-೨೦೨೪ ಪ್ರಶಸ್ತಿ’ ಪ್ರದಾನಿಸಿ ಗೌರವಿಸಲಾ ಗುವುದು.
ಅಂತೆಯೇ ರಾಜೇಂದ್ರ ವಿ.ಶೆಟ್ಟಿ, ಮುರಳಿ ಮೋಹನ್ ಶೆಟ್ಟಿ ಗೋವಾ, ರಾಕೇಶ್ ಶೆಟ್ಟಿ ಬೆಳ್ಳಾರೆ, ಎಂ.ಬಿ ಉಮೇಶ್ ಶೆಟ್ಟಿ, ವಿಶು ಶೆಟ್ಟಿ ಅಂಬಲಪಾಡಿ ಮತ್ತು ಪ್ರಭಾಕರ್ ವಿ.ಶೆಟ್ಟಿ ಇವರಿಗೆ `ಬಂಟ ವಿಭೂಷಣ-೨೦೨೪’ ಪ್ರಶಸ್ತಿ ಹಾಗೂ ಯುವ ಉದ್ಯಮಿ ಆದರ್ಶ್ ಶೆಟ್ಟಿ ಹಾಲಾಡಿ, ಮಂದರ ಶೆಟ್ಟಿ ಹೊನ್ನಾಳ, ಹೆಚ್.ಪ್ರಸನ್ನಚಂದ್ರ ಶೆಟ್ಟಿ, ಡಾ| ಹರ್ಷ ಕುಮಾರ್ ರೈ ಮಾಡಾವು ಇವರಿಗೆ `ಯುವ ಬಂಟ ರತ್ನ ಪ್ರಶಸ್ತಿ-೨೦೨೪’ ನೀಡಿ ಗೌರವಿಸಲಾಗುವುದು.
ಮಕ್ಕಳ ಆರೋಗ್ಯ ಮತ್ತು ಜೀವನ ಶೈಲಿಯ ಬಗ್ಗೆ ಬಂಟರ ಸಂಘ ಆಂದ್ರಪ್ರದೇಶ ಇದರ ಮಾಜಿ ಅಧ್ಯಕ್ಷ ರತ್ನಾಕರ ರೈ ದಿಕ್ಸೂಚಿ ಭಾಷಣ ನೀಡಲಿದ್ದಾರೆ. ರಕ್ಷಣ್ ಶೆಟ್ಟಿ ಮಾಡೂರು ಮತ್ತು ಬಳಗದವರಿಂದ ಸಂಗೀತ ರಸಸಂಜೆ, ಯಕ್ಷ ಯುವರತ್ನ ಧೀರಜ್ ರೈ ಸಂಪಾಜೆ ಇವರ ಭಾಗವತಿಕೆಯಲ್ಲಿ ಕಡಬ ದಿನೇಶ್ ರೈ ಸಾರಥ್ಯದ ಯಕ್ಷಗಾನ ನಾಟ್ಯ – ಹಾಸ್ಯ ವೈಭವ ಮತ್ತು ಶಾರದಾ ಆರ್ಟ್್ಸ ತಂಡವು ಕಲ್ಪಿಗದ ಮಾಯ್ಕಾರೆ ಪಂಜುರ್ಲಿ ತುಳು ಪೌರಾಣಿಕ ಭಕ್ತಿಪ್ರಧಾನ ಸಾಮಾಜಿಕ ನಾಟಕ ಇತ್ಯಾದಿ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಲಿದೆ.
ಈ ಅರ್ಥಪೂರ್ಣ, ಸಮಾಜ ಹಿತ ಕಾರ್ಯಕ್ರಮದಲ್ಲಿ ಸಮಾಜ ಬಾಂಧವರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯ ಕ್ರಮದ ಯಶಸ್ಸಿಗೆ ಸಹಕರಿಸಲು ಬಂಟ್ಸ್ ನೌ ಸಂಸ್ಥೆಯ ಗೌರವ ಸಂಪಾದಕ ಅರುಣ್ ಶೆಟ್ಟಿ ಎರ್ಮಾಳ್, ಸ್ಥಾಪಕ ರಂಜಿತ್ ಶೆಟ್ಟಿ, ಸ್ವಾಗತ ಸಮಿತಿ ಸಂಚಾಲಕ ದಿವಾಕರ ಸಾಮಾನಿ, ಪ್ರಚಾರ ಸಮಿತಿ ಸಂಚಾಲಕ ಸಂಕಬೈಲು ಮಂಜುನಾಥ ಅಡಪ ವಿನಂತಿಸಿದ್ದಾರೆ.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.