(ವರದಿ : ತಾರ ರೋನ್ಸ್ ಬಂಟ್ವಾಳ್)
ಮುಂಬಯಿ, ಮಾ.೦೬: ಕರ್ನಾಟಕ ಕರಾವಳಿಯ ಮಂಗಳೂರು ಗಾಂಧಿನಗರ ಅಲ್ಲಿನ ಪ್ರತಿಷ್ಠಿತ ಗೋಕರ್ಣನಾಥೇಶ್ವರ ಕಾಲೇಜ್‌ನ ನೂತನ ಪ್ರಾಂಶುಪಾಲೆಯಾಗಿ ಡಾ| ಆಶಾಲತಾ ಎಸ್.ಸುವರ್ಣ ಸಾರಥ್ಯ ವಹಿಸಲಿದ್ದಾರೆ ಎಂದು ಕಾಲೇಜು ಮಂಡಳಿ ತಿಳಿಸಿದೆೆ.
ಕಳೆದ ಸುಮಾರು ಮೂರುವರೆ ದಶಕಗಳ ಅವಿರತ, ದೀರ್ಘ ಕಾಲದ ಸೇವಾನುಭವವನ್ನು ಹೊಂದಿರುವ ಡಾ| ಆಶಾಲತಾ ದ ಗ್ರಾನರಿ ಆಫ್ ತುಳು ಹೆರಿಟೇಜ್, ಸಿರಿ ಕಂಡ, ಬೌತಿಕ ಶೋಧೆ ಮುಂತಾದ ಕೃತಿಗಳನ್ನು ರಚಿಸಿ ಹಿರಿಯ ಪ್ರಸಿದ್ಧ ಲೇಖಕರಾಗಿ ಗುರುತಿಸಿ ಕೊಂಡಿರುವರು. ಪಠ್ಯ ಪುಸ್ತಕ ಬರಹಗಾರರೂ ಆಗಿರುವ ಇವರ ಲೇಖನಗಳು ರಾಷ್ಟ್ರ, ಅಂತಾರಾಷ್ಟ್ರೀಯ ಜರ್ನಲ್‌ಗಳಲ್ಲಿ ಪ್ರಕಟಗೊಂಡಿದೆ.
.
ಶ್ರೀ ಗೋಕರ್ಣನಾಥೇಶ್ವರ ಕಾಲೇಜ್‌ನ ವಾಣಿಜ್ಯ ವಿಭಾಗದ ಪ್ರಾಧ್ಯಾಪಕಿ ಆಗಿದ್ದ ಡಾ| ಆಶಾಲತಾ ಸುವರ್ಣ ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯವು ಗ್ರಾಮೀಣ ಪ್ರದೇಶಗಳಲ್ಲಿ ಕುಟುಂಬ ಯೋಜನೆ ಮತ್ತು ಶಿಶು ಆರೋಗ್ಯ ಕಾರ್ಯಕ್ರಮಗಳ ಮಾರ್ಕೆಟಿಂಗ್: ದಕ್ಷಿಣ ಕನ್ನಡ ಜಿಲ್ಲೆ ಅಧ್ಯಯನದ ಕುರಿತು ಮಂಗಳೂರು ವಿಶ್ವವಿದ್ಯಾನಿಲಯದ ಪ್ರಸಕ್ತ ಉಪಕುಲಪತಿ ಡಾ| ಪಿ.ಎಸ್ ಯಡಪಡಿತ್ತಾಯ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ಪ್ರಬಂಧಕ್ಕಾಗಿ ಪಿಎಚ್‌ಡಿ ಗೌರವಕ್ಕೆ ಪಾತ್ರರಾಗಿದ್ದಾರೆ.
ಡಾ| ಆಶಾಲತಾ ಅವರು ಅಂತರರಾಷ್ಟ್ರೀಯ, ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಸಮ್ಮೇಳನಗಳಲ್ಲಿ ಪ್ರಬಂಧಗಳನ್ನು ಮಂಡಿಸಿ ರುವರು. ಂಟ್ವಾಳ ಇತಿಹಾಸ ದರ್ಶನ, ಸಂಗಮ ಮತ್ತು ಸಂಚಿ ಪುಸ್ತಕಗಳನ್ನು ಸಂಪಾದಿಸಿದ್ದಾರೆ ಮತ್ತು ಸಂಪಾದಿತ ಸಂಪುಟಗಳು ಮತ್ತು ಪತ್ರಿಕೆಗಳಲ್ಲಿ ಸಾಮಾನ್ಯ ಲೇಖನಗಳನ್ನು ಪ್ರಕಟಿಸಿದ್ದಾರೆ. ಅಂತೆಯೇ ಅನೇಕ ಲೇಖನಗಳನ್ನೂ ಪ್ರಕಟಿಸಿದ್ದಾರೆ. ೨೦೦೯ರಲ್ಲಿ ಅಣ್ಣಾಮಲೈ ವಿಶ್ವವಿದ್ಯಾನಿಲಯದಲ್ಲಿ ನಡೆದ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಅತ್ಯುತ್ತಮ ಪ್ರಬಂಧ ಪ್ರಸ್ತುತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇವರು ತುಳು ಸಂಸ್ಕöತಿ ಪರಂಪರೆ, ತುಳು ಭಾಷೆ ಮತ್ತು ಸಾಹಿತ್ಯ ಮತ್ತು ಇತಿಹಾಸದ ಸಂರಕ್ಷಣಾ ಕೊಡುಗೆಗಾಗಿ ಬಂಟ್ವಾಳ ಸಂಚಯಗಿರಿ ಅಲ್ಲಿನ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತು ಸಂಗ್ರಹಾಲಯ ಕೇಂದ್ರದ ಅಧ್ಯಕ್ಷ ಪ್ರೊ| ಡಾ|ತುಕಾರಾಮ ಪೂಜಾರಿ ಇವರ ಧರ್ಮಪತ್ನಿ ಯಾಗಿದ್ದು ಅಧ್ಯಯನ ಕೇಂದ್ರದ ಕಾರ್ಯದರ್ಶಿ ಆಗಿಯೂ ಸೇವಾ ನಿರತರಾಗಿದ್ದಾರೆ.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.