Skip to main content
www.kallianpur.com | Email : kallianpur7@gmail.com | Mob : 9741001849

ಮಿಲಾಗ್ರಿಸ್ ಪ್ರೌಢಶಾಲೆ, ಕಲ್ಯಾಣಪುರದಲ್ಲಿ 75ನೇ ಗಣರಾಜ್ಯೋತ್ಸವ ಆಚರಣೆ.

By January 27, 2024Kannada News
kallianpurdotcom: 9741001849

ಉಡುಪಿ : ಮಿಲಾಗ್ರಿಸ್ ಪ್ರೌಢಶಾಲೆ, ಕಲ್ಯಾಣಪುರದಲ್ಲಿ 75ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.  ಶಾಲಾ ಸಂಚಾಲಕರಾದ ಅತೀ ವಂದನೀಯ ವಲೇರಿಯನ್ ಮೆಂಡೋನ್ಸರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಧ್ವಜಾರೋಹಣ ಮಾಡಿ, ಈ ದಿನದ ಸಂದೇಶವನ್ನು ನೀಡಿದರು. ವೇದಿಕೆಯಲ್ಲಿ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಮೇಲ್ವಿನ್ ಸಿಕ್ವೇರಾ,  ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಅನಿತಾ ಡಿ’ಸೋಜ ಉಪಸ್ಥಿತರಿದ್ದರು.  ಅತಿಥಿಗಳು ಶಾಲಾ ನಾಯಕ ಮನೀಶ್ ಹಾಗೂ ಉಪನಾಯಕಿ ಫಾತಿಮತ್ ಜೈಫಾ ಜೊತೆಗೂಡಿ ಸಂವಿಧಾನ ಶಿಲ್ಪಿ ಡಾ| ಬಿ. ಆರ್. ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪನಮನ ಮಾಡಿ ಗೌರವ ಸಲ್ಲಿಸಿದರು.

ಶಾಲಾ ವಿದ್ಯಾರ್ಥಿಗಳಾದ ಸುಮಿತ್ ಸ್ವಾಗತಿಸಿ, ಶ್ರಾವ್ಯ ಗಣರಾಜ್ಯೋತ್ಸವ ದಿನದ ಮಹತ್ವದ ಬಗ್ಗೆ ಭಾಷಣ ಮಾಡಿದರು. ವೀಕ್ಷಣಾ ರೈ ವಂದಿಸಿ, ಮಹಮ್ಮದ್ ಸಿಯಾನ್ ಕಾರ್ಯಕ್ರಮ ನಿರೂಪಿಸಿದನು. ಶಾಲಾ ಸಂಗೀತ ತಂಡದವರು ಪ್ರಾರ್ಥನೆ ಹಾಗೂ ಧ್ವಜಗೀತೆಯನ್ನು ಹಾಡಿದರು. ಶಾಲಾ ಬ್ಯಾಂಡ್ ತಂಡದವರು ಉತ್ತಮ ದೇಶಭಕ್ತಿ ಗೀತೆಯ ಮೂಲಕ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಲು ಸಹಕರಿಸಿದರು. ಶಾಲಾ ಸಹ ಶಿಕ್ಷಕರು, ಚರ್ಚ್ ಪಾಲನಾ ಮಂಡಳಿಯ ಸದಸ್ಯರು, ಸಾರ್ವಜನಿಕರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ನೆರೆದ ಸರ್ವರಿಗೂ ಸಿಹಿತಿಂಡಿಯ ವ್ಯವಸ್ಥೆ ಮಾಡಲಾಗಿತ್ತು. ಶಾಲಾ NCC ವಿದ್ಯಾರ್ಥಿಗಳು ಹಾಗೂ ಗೈಡ್ಸ್ ವಿದ್ಯಾರ್ಥಿಗಳು ಸಮವಸ್ತ್ರದಲ್ಲಿ  ಭಾಗವಹಿಸಿ ಕಾರ್ಯಕ್ರಮದ ಅಂದವನ್ನು ಹೆಚ್ಚಿಸಿದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.