Skip to main content
www.kallianpur.com | Email : kallianpur7@gmail.com | Mob : 9741001849

ಥಾಣೆ ವಾಘ್‌ಬಿಲ್‌ನ ಶ್ರೀ ಸಾಯಿ ಆನೇಕ್ಸ್ ಬಾಂಕ್ವೇಟ್‌ನಲ್ಲಿ ಮಿಲಾಗ್ರಿಸ್ ಕಾಲೇಜ್ ಕಲ್ಯಾಣ್ಪುರ್ ಹಳೆ ವಿದ್ಯಾರ್ಥಿಗಳ ಸ್ನೇಹಮಿಲನ.

By November 28, 2022November 30th, 2022Kannada News

ವರದಿ : ರೋನ್ಸ್ ಬಂಟ್ವಾಳ್ ( ಮುಂಬಯಿ )

ಮುಂಬಯಿ, ನ.೨೬: ಮಿಲಾಗ್ರಿಸ್ ಕಾಲೇಜ್ ಕಲ್ಯಾಣ್ಪುರ್ ಅಲ್ಯೂಮ್ನಿ ಅಸೋಸಿಯೇಶನ್ (ರಿ.) ಎಂಸಿಕೆಎಎ ಇದೇ ಬರುವ ಡಿ.೦೪ನೇ ಭಾನುವಾರ ಬೆಳಿಗ್ಗೆ ಥಾಣೆ ಘೋಡ್‌ಬಂದರ್ ರೋಡ್‌ನ ವಾಘ್‌ಬಿಲ್ ಇಲ್ಲಿನ ವಿಜಯ ನಗರಿ ಸೊಸೈಟಿಯ ಶ್ರೀ ಸಾಯಿ ಆನೇಕ್ಸ್ ಬಾಂಕ್ವೇಟ್ ಹಾಲ್‌ನಲ್ಲಿ ಮುಂಬಯಿವಾಸಿ ಹಳೆ ವಿದ್ಯಾರ್ಥಿಗಳ ಸ್ನೇಹಮಿಲನ (ಮಿಲಾಗ್ರಿಸ್ ಅಲ್ಯೂಮ್ನಿ ಮೀಟ್) ಕಾರ್ಯಕ್ರಮ ಆಯೋಜಿಸಿದೆ. ಎಂಸಿಕೆಎಎ ಅಧ್ಯಕ್ಷ ಶೇಖರ ಗುಜ್ಜರಬೆಟ್ಟು ಅಧ್ಯಕ್ಷತೆಯಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಮಿಲಾಗ್ರಿಸ್ ಕಾಲೇಜ್ ಕಲ್ಯಾಣ್ಪುರ್ ಪ್ರಾಂಶುಪಾಲ   ಡಾ| ವಿನ್ಸೆಂಟ್ ಆಳ್ವ ಅತಿಥಿ ಅಭ್ಯಾಗತರಾಗಿ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿರುವರು. ಆ ನಿಮಿತ್ತ ಎಂಸಿಕೆ ಹಳೆ ವಿದ್ಯಾರ್ಥಿಗಳು ಹಾಗೂ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಎಂಸಿಕೆಎಎ ಸಾರ್ವಜನಿಕ ಸಂಪರ್ಕ ಅಧಿಕಾರಿ ರವಿನಂದನ್ ಭಟ್ (೯೮೪೪೨೧೨೧೦೪) ತಿಳಿಸಿದ್ದಾರೆ.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.