Skip to main content
www.kallianpur.com | Email : kallianpur7@gmail.com | Mob : 9741001849

ಮಿಲಾಗ್ರಿಸ್ ಪ್ರೌಢಶಾಲೆ ಕಲ್ಯಾಣಪುರದಲ್ಲಿ ಉಚಿತ ದಂತ ವೈದ್ಯಕೀಯ ತಪಾಸಣೆ ಹಾಗೂ ಮಾಹಿತಿ ಕಾರ್ಯಕ್ರಮ.

By September 15, 2023Kannada News
kallianpurdotcom: 15/09/23

ಉಡುಪಿ : ದಿನಾಂಕ14-09-2023ನೇ ಗುರುವಾರದಂದು ಮಿಲಾಗ್ರಿಸ್ ಪ್ರೌಢಶಾಲೆ ಕಲ್ಯಾಣಪುರ ಇಲ್ಲಿ ರೋಟರಿ ಕ್ಲಬ್ ಕಲ್ಯಾಣಪುರ, ದಂತ ವೈದ್ಯಕೀಯ ವಿಭಾಗ ಮಣಿಪಾಲ ಹಾಗೂ ಇಂಟರಾಕ್ಟ್ ಕ್ಲಬ್ ಮಿಲಾಗ್ರಿಸ್ ಪ್ರೌಢಶಾಲೆ ಕಲ್ಯಾಣಪುರ ಇವರ ಸಹಯೋಗದಲ್ಲಿ ಶಾಲೆಯ ಎಲ್ಲಾ ಮಕ್ಕಳಿಗೆ ಉಚಿತ ದಂತ ವೈದ್ಯಕೀಯ ತಪಾಸಣೆ ಹಾಗೂ ಮಾಹಿತಿ ಶಿಬಿರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ರೋಟರಿ ಕ್ಲಬ್ ಕಲ್ಯಾಣಪುರದ ಅಧ್ಯಕ್ಷರಾದ ರೋಟೆರಿಯನ್ ದಿವಾಕರ್ ಪಿ ರವರು ಅಧ್ಯಕ್ಷತೆಯನ್ನು ವಹಿಸಿಕೊಂಡು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು ಸಂಪನ್ಮೂಲ ವ್ಯಕ್ತಿಯಾಗಿ ದಂತ ವೈದ್ಯಕೀಯ ವಿಭಾಗ ಮಣಿಪಾಲದ ಡಾಕ್ಟರ್ ಕಾರ್ತಿಕ್ ರವರು ಹಲ್ಲುಗಳ ಆರೈಕೆ ಹಾಗೂ ಶುಚಿತ್ವದ ಬಗ್ಗೆ ಮಕ್ಕಳಿಗೆ ಅಗತ್ಯ ಮಾಹಿತಿಯನ್ನು ನೀಡಿದರು.

ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಅನಿತಾ ಡಿಸೋಜ ರವರು ಉಪಸ್ಥಿತರಿದ್ದ ಸರ್ವರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ಇಂಟರಾಕ್ಟ್ ಕ್ಲಬ್ಬಿನ ಅಧ್ಯಕ್ಷೆ ಇಂಟರಾಕ್ಟರ್ ಫಾತಿಮತ್ ಜೈಫಾ ಹಾಗೂ ಕಾರ್ಯದರ್ಶಿ ಇಂಟರಾಕ್ಟರ್ ಪೂರ್ಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾಕ್ಟರ್ ಕಾರ್ತಿಕ್ ಹಾಗೂ ಅವರ ತಂಡದ ಸುಮಾರು 15 ಮಂದಿ ಸಿಬ್ಬಂದಿಗಳು ಶಾಲೆಯ ಎಲ್ಲಾ ಮಕ್ಕಳ ದಂತ ತಪಾಸಣೆ ಮಾಡಿ ಚಿಕಿತ್ಸೆಯ ಅಗತ್ಯವಿರುವ  ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡಿದರು ಹಾಗೂ ಕೆಲವು ಮಕ್ಕಳಿಗೆ ಉಚಿತವಾಗಿ ಚಿಕಿತ್ಸೆಯನ್ನು ನೀಡಿದರು. ರೋಟರಿ ಕ್ಲಬ್ ಕಲ್ಯಾಣಪುರದ ಸದಸ್ಯರು ಹಾಗೂ ಶಾಲಾ ಅಧ್ಯಾಪಕ ವೃoದದವರು ಸಹಕಾರ ನೀಡಿದರು. ಶಾಲಾ ಇಂಟರಾಕ್ಟ್ ಕೋ-ಆರ್ಡಿನೇಟರ್ ರೊಟೇರಿಯನ್ ಸಿಪ್ರಿಯನ್ ಕ್ರಾಸ್ತಾರವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.