Skip to main content
www.kallianpur.com | Email : kallianpur7@gmail.com | Mob : 9741001849

ಮುಂಬಯಿ, ೬೩ನೇ ನಾಡಹಬ್ಬ ಸಂಭ್ರಮಿಸಿದ ಗೋರೆಗಾಂವ್ ಕರ್ನಾಟಕ ಸಂಘ ಸಂಸ್ಕ್ರತಿಗಳಿಂದ ಸಂಸ್ಕಾರತ್ವ ಸಾಧ್ಯವಾಗುವುದು : ರವಿ ಎಸ್.ಶೆಟ್ಟಿ.

By February 25, 2024Mumbai News
kallianpurdotcom: 9741001849
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ (ಆರ್‌ಬಿಐ), ಫೆ.೨೫: ಸಂಸ್ಕ್ರತಿಗಳಿಂದ ಸಂಸ್ಕಾರತ್ವ ಸಾಧ್ಯವಾಗುವುದು. ಸಂಸ್ಕ್ರತಿ,  ಸಂಸ್ಕಾರಗಳನ್ನು ಜೀವಾಳ ವಗಿರಿಸಲು ಇಂತಹ ನಾಡಹಬ್ಬಗಳು ಪೂರಕವಾಗಿವೆ. ಇದು ಬರೀ ಹಬ್ಬ, ಉತ್ಸವವಲ್ಲ ಮನುಕುಲದ ಭವ್ಯ ಬಾಳಿಕೆ ಪ್ರೇರಕವಾದ ನಿಜಾರ್ಥದ ಕಾರ್ಯಕ್ರಮ ಎಂದು ಸಾಯಿ ಪ್ಯಾಲೇಸ್ ಸಮೂಹ ಸಂಸ್ಥೆಯ ನಿರ್ದೇಶಕ ರವಿ ಎಸ್.ಶೆಟ್ಟಿ ತಿಳಿಸಿದರು.

ಇಂದಿಲ್ಲಿ ಭಾನುವಾರ ಪೂರ್ವಾಹ್ನ ಗೋರೆಗಾಂವ್ ಪೂರ್ವದ ನಂದಾದೀಪ ಹೈಸ್ಕೂಲು ಸಭಾಗೃಹದಲ್ಲಿನ ಕರ್ಮಯೋಗಿ ಜಯ ಸುವರ್ಣ ವೇದಿಕೆಯಲ್ಲಿ ಗೋರೆಗಾಂವ್ ಕರ್ನಾಟಕ ಸಂಘದ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಸಂಘದ ೬೩ನೇ ನಾಡಹಬ್ಬ ಸಮಾರಂಭ, ವಿಚಾರಗೋಷ್ಠಿ ಮತ್ತು ಕೃತಿ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ರವಿ ಶೆಟ್ಟಿ ಮಾತನಾಡಿ ನಾಡದೀಪ ಸದಾ ಬೆಳಗಲಿ ಎಂದು ಹಾರೈಸಿದರು.

ಸಾಯಿಕೇರ್ ಲಾಜಿಸ್ಟಿಕ್ಸ್ ಲಿಮಿಟೆಡ್‌ನ ಆಡಳಿತ ನಿರ್ದೇಶಕ ಸುರೇಂದ್ರ ಎ.ಪೂಜಾರಿ ಅತಿಥಿ ಅಭ್ಯಾಗತರಾಗಿ ವೇದಿಕೆ ಯನ್ನಲಂಕರಿಸಿದ್ದು ಸುರೇಖಾ ಹೆಚ್.ಶೆಟ್ಟಿ ರಚಿತ `ಮುಂಬಯಿ ಯಲ್ಲಿ ಕನ್ನಡದ ಕಂಪು ಸೂಸುವ ಗೋರೆಗಾಂವ್ ಕರ್ನಾಟಕ ಸಂಘ’ ಕೃತಿಯನ್ನು ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಲೋಕಾರ್ಪಣೆ ಗೈದರು. ತ್ರಿಕೋನ್ ಪಾಲಿಮರ್ಸ್ ಪ್ರೆವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕ ಆಡಳಿತ ನಿರ್ದೇಶಕ ಅನಿಲ್ ಶೆಟ್ಟಿ ಏಳಿಂಜೆ ಅವರು ಸಂಘದ `ಮುಂಬೆಳಕು’ ವಾರ್ಷಿಕ ಸಂಚಿಕೆ ಯನ್ನು ಬಿಡುಗಡೆಗೊಳಿಸಿ ಶುಭಾರೈಸಿದರು. ನಳಿನಾ ಪ್ರಸಾದ್ ಕೃತಿಯನ್ನು ಪರಿಚಯಿಸಿದರು. ಪದ್ಮಜಾ ಮಣ್ಣೂರ್ ಅವರು ಮುಂಬೆಳಕು ಸಂಚಿಕೆಯ ಬಗ್ಗೆ ಸ್ಥೂಲವಾದ ಮಾಹಿತಿ ಯನ್ನಿತ್ತರು.

ರಾಮ ಮಂದಿರ ನಿರ್ಮಾಣದಿಂದಾಗಿ ಭಾರತವು ಒಂದು ಸುವರ್ಣ ಸಮಯದಲ್ಲಿದೆ. ಇಂತಹ ಪರ್ವಕಾಲದಲ್ಲಿ ಭಾಷೆ, ಸಾಹಿತ್ಯ, ಪರಂಪರೆಗಳನ್ನು ಮೇಲೈಸಿ ಭಾವೀ ಜನಾಂಗಕ್ಕೆ ಸಂಸ್ಕಾರ ಗಳನ್ನು ತಿಳಿಪಡಿಸುವ ಈ ನಾಡ ಹಬ್ಬ ಅರ್ಥ ಗರ್ಭಿತವಾಗಿದೆ. ಕೃತಿ ಅಂದರೆ ಅದು ಅಲೋಚ ನೆ, ಮಾತನಾಡುವ ಶಕ್ತಿಯಾಗಿದೆ ಎಂದು ಅನಿಲ್ ಶೆಟ್ಟಿ ನುಡಿದರು.

ನಾಡಹಬ್ಬಗಳು ಉತ್ಸಹವನ್ನು ತುಂಬುವ ಕಾರ್ಯಕ್ರಮವಾಗಿದೆ. ಹೊರನಾಡಿನಲ್ಲಿ ಒಳನಾಡ ಸಂಸ್ಕ್ರತಿ ಯನ್ನು ಪ್ರದರ್ಶಿಸಿ ಬದುಕನ್ನು ಜೀವಂತವಾಗಿಸುವ ಗೋರೆಗಾಂ ಕರ್ನಾಟಕ ಸಂಘದ ಸೇವೆ ಶ್ಲಾಘನೀಯ ಎಂದು ಸುರೇಂದ್ರ ಪೂಜಾರಿ ತಿಳಿಸಿದರು.

ಡಾ| ಉಪಾಧ್ಯ ಮಾತನಾಡಿ ಸಮಯಪ್ರಜ್ಞೆ ಮೂಡಿಸಿದ ಸಂಸ್ಥೆ ಅಂದರೆ ಅದು ಗೋರೆಗಾಂ ಕರ್ನಾಟಕ ಸಂಘ. ಒಳನಾಡ ಗತವೈಭವವನ್ನು ಜೀವಂತವಾಗಿಸುವಲ್ಲಿ ಇದರ ಸೇವೆ ಅನುಪ ಮವಾದುದು. ಕನ್ನಡದ ಸೇವೆಗೆ ಮುಂಬಯಿಯಲ್ಲಿನ ಕನ್ನಡ ಸಂಘಸಂಸ್ಥೆಗಳಂತೆ ಜಗತ್ತಿನ ಯಾವುದೇ ರಾಷ್ಟ್ರಗಳಲ್ಲಿಲ್ಲ. ಇಲ್ಲಿನ ನಮ್ಮವರ ಹೊಟೇಲು ಉದ್ಯಮ ಮತ್ತು ಇನ್ನಿತರ ಸೇವೆಗಳ ಸಮಗ್ರ ದಾಖಲಾತಿಯ ಅಧ್ಯಯನದ ಅಗತ್ಯವಿದೆ. ಇದು ನಮ್ಮೆಲ್ಲರ ಜವಾಬ್ದಾರಿ ಆಗಬೇಕು ಎಂದು ಈ ಸಂಡಗ ಅದಮ್ಯ ಚೇತನಗಳಾಗಿದ್ದ ಡಾ| ಸುನೀತಿ ಉದ್ಯಾವರ್, ರವಿ ರಾ.ಅಂಚನ್ ಇವರ ಅನನ್ಯ ಸೇವೆಯನ್ನು ವಿಶೇಷವಾಗಿ ಸ್ಮರಿಸಿದರು.

ಕಾರ್ಯಕ್ರಮದ ಜಯ ಸಿ.ಸುವರ್ಣ ವೇದಿಕೆಯ ಗೌರವವನ್ನು ಭಾರತ್ ಬ್ಯಾಂಕ್‌ನ ಕಾರ್ಯಾ ಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ ಅವರಿಗೆ ಪ್ರದಾನಿಸಿ ಗೌರವಿಸಿದ್ದು ಹಾಗೂ ಸಂಘಕ್ಕಾಗಿ ಶ್ರಮಿಸಿದ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳಿಗೆ (ಪರವಾಗಿ ಕುಟುಂಬ ಸದಸ್ಯರಿಗೆ), ಅತಿಥಿ ಗಳಿಗೆ ಶಾಲು ಹೊದಿಸಿ, ಪುಷ್ಫಗುಪ್ಚ ಗಳನ್ನೀಡಿ ಗ್ರಂಥ ಗೌರವದೊಂದಿಗೆ ಮನ್ನಿಸಿದರು. ಅಧ್ಯಕ್ಷೀಯ ಭಾಷಣವನ್ನುದ್ದೇಶಿಸಿ ಮಾತನಾಡಿದ ನಿತ್ಯಾನಂದ ಕೋಟ್ಯಾನ್ ಗೋರೆಗಾಂ ಪರಿಸರಕ್ಕೆ ಮಾತ್ರವಲ್ಲ ಇಡೀ ಮುಂಬಯಿ, ಹೊರನಾಡ ತುಳು ಕನ್ನಡಿಗರಿಗೆ ಪ್ರೇರಣಾಶಕ್ತಿ ಯಾಗಿದ್ದ ಸ್ವರ್ಗೀಯ ಜಯ ಸುವರ್ಣರ ಪ್ರೋತ್ಸಾಹ ಎಂದಿಗೂ ಅಜರಾಮರ. ಅವರ ಪ್ರೇರಣೆ ಶಾಸ್ವತವಾಗಿರಿಸಲು ಈ ವೇದಿಕೆಯನ್ನು ಅವರಿಗಾಗಿ ಸಮರ್ಪಿಸಲಾಗಿದೆ. ಸುಮಾರು ೬೬ರ ಸೇವಾನಡೆಯಲ್ಲಿನ ಈ ಸಂಘವು ಸಂಸ್ಥಾಪಕರ ದೂರದೃಷ್ಠಿ, ಸಾರಥ್ಯ ವಹಿಸಿ ಮುನ್ನಡೆಸಿದ ಪ್ರತಿಯೊಬ್ಬರ  ಸೇವಾಮನೋ ಭಾವದ ಫಲವಾಗಿದೆ. ಎಲ್ಲರ ಸಾಂಘಿಕ ಮುನ್ನಡೆಯ ಉತ್ಸಹ ವೇ ಗೋರೆಗಾಂವ್‌ನ ಸಾಂಸ್ಕ್ರತಿಕ ಉತ್ಸವ ಇದಾಗಿದೆ ಎಂದರು.

ಸಂಘದ ಉಪಾಧ್ಯಕ್ಷ ವಿಶ್ವನಾಥ್ ಶೆಟ್ಟಿ, ಗೌರವ ಕೋಶಾಧಿಕಾರಿ ಎಂ.ಆನಂದ ಶೆಟ್ಟಿ, ಪಾರುಪತ್ಯ ಗಾರ ಜಿ.ಟಿ. ಆಚಾರ್ಯ, ಮಾಜಿ ಅಧ್ಯಕ್ಷರುಗಳಾದ ಶಂಕುಂತಳಾ ಆರ್.ಪ್ರಭು, ಪಯ್ಯಾರು ರಮೇಶ್ ಶೆಟ್ಟಿ, ಸೇರಿದಂತೆ ಡಾ| ಭರತ್‌ಕುಮಾರ್ ಪೊಲಿಪು, ಗಂಗಾಧರ್ ಎನ್.ಅಮಿನ್ ಕರ್ನಿರೆ, ರತ್ನಾಕರ್ ಆರ್.ಶೆಟ್ಟಿ, ಗಣೇಶ್ ಕುಮಾರ್, ವಾಸುದೇವ ಮಾರ್ನಾಡ್, ಹರಿಪ್ರಸಾದ್ ಶೆಟ್ಟಿ, ಸಂಘದ ಮಾಜಿ, ಹಾಲಿ ಪದಾಧಿಕಾರಿಗಳು, ಸದಸ್ಯ ರನೇಕರು ಉಪಸ್ಥಿತರಿದ್ದರು. ಬಳಿಕ ವಿಚಾರಗೋಷ್ಠಿ ನಡೆಸಲ್ಪಟ್ಟಿತು. ಸಂಘದ ಉಪ ವಿಭಾಗಗಳು ಮತ್ತು ಮುಂಬಯಿ ಯಲ್ಲಿ ನ ವಿವಿಧ ಸಂಘ- ಸಂಸ್ಥೆಗಳ ಕಲಾವಿದರು ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿ ದರು. ಮಹಿಳಾ ವಿಭಾಗದ ಸದಸ್ಯೆಯರು ಸ್ವಾಗತಗೀತೆ ಮತ್ತು ಉದ್ಘಾಟನಾ ಗೀತೆಯೊಂದಿಗೆ ಕಾರ್ಯಕ್ರಮ ಆದಿಗೊಂಡಿತು. ಗೌ| ಪ್ರ| ಕಾರ್ಯದರ್ಶಿ ಸರಿತಾ ಸುರೇಶ್ ನಾಯಕ್ ಪ್ರಾಸ್ತವನೆ ಗೈದರು. ಸುರೇಂದ್ರ ಮಾರ್ನಾಡ್ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಸಹನಿ ಶಾಂತಾ ಎನ್. ಶೆಟ್ಟಿ ವಂದನಾರ್ಪಣೆಗೈದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.