kallianpurdotcom: 23/01/2024
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಜ.೨೨: ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಮತ್ತೆ ನೆಲೆಯಾದ ಶ್ರೀರಾಮನ ಪ್ರಾಣ ಪ್ರತಿಷ್ಠೆಯಿಂದ ಭರತವರ್ಷ ಪುನರ್ ನಿರ್ಮಾಣದ ಆರಂಭದ ಸಲುವಾಗಿ ಇಂದಿಲ್ಲಿ ಸೋಮ ವಾರ ಸಾಯನ್ ಪೂರ್ವದ ಗೋಕುಲ ದಲ್ಲಿನ ಗೋಪಾಲ ಕೃಷ್ಣನ ಸನ್ನಿಧಿಯಲ್ಲಿ ಶ್ರೀ ರಾಮ ದೇವರ ಪ್ರಾಣ ಪ್ರತಿಷ್ಠಾಪನಾ ಸಂಭ್ರಮವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಶ್ರೀರಾಮನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಾಣ ಆಗಿರುವ ಮಂದಿರದಲ್ಲಿ ಮರ್ಯಾದಾ ಪುರು ಷೋತ್ತಮ ಶ್ರೀ ರಾಮನ ಆರಾಧ್ಯ ವಿಗ್ರಹವನ್ನು ಹೊಸದಾಗಿ ನಿರ್ಮಿಸಲಾದ ಶ್ರೀರಾಮ ದೇವಾಲಯದ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾದ ಶುಭಾವಸರದಿ ಗೋಪಾಲ ಕೃಷ್ಣ ಪಬ್ಲಿಕ್ ಟ್ರಸ್ಟ್ ಮತ್ತು ಬಿಎಸ್‌ಕೆಬಿ ಅಸೋಸಿ ಯೇಶನ್ ಮತ್ತು ಶ್ರೀ ಸುಬ್ರಹ್ಮಣ್ಯ ಸೇವಾ ಸಂಘ ಇವುಗಳ ಸಂಯುಕ್ತ ಆಶ್ರಯದಲ್ಲಿ ದಿನಪೂರ್ತಿ ಯಾಗಿಸಿ ಸಾಂಸ್ಕ್ರತಿಕ, ಧಾರ್ಮಿಕ ಕಾರ್ಯ ಕ್ರಮಗಳೊಂದಿಗೆ ವಿಶೇಷಪೂಜೆ ನೆರವೆರಿಸಲಾಯಿತು. ಪ್ರತಿಷ್ಠಾಪನಾ ವೇಳೆ ಭಕ್ತಿ ಪರಕಾಷ್ಠೆಯಲ್ಲಿ ಮಿಂದೆದ್ದ ಶ್ರೀರಾಮ ಭಕ್ತರು ಸಂಭ್ರಮಿಸಿದ ದೇವಭಕ್ತಿಯಲ್ಲಿ ದೇಶಭಕ್ತಿಯೂ ಮೊಳಗಿತು.
ಬೆಳಗ್ಗೆ ದೀಪ ಪ್ರಜ್ವಲನೆ, ರಾಮ ನಾಮ ತಾರಕ ಮಂತ್ರ ಪಠಣ, ಸ್ತೋತ್ರ ಪಠಣ, ಗೋಕುಲ ಭಜನಾ ಮಂಡಳಿ ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ ಅಂಧೇರಿ, ಹರಿಕೃಷ್ಣ ಭಜನಾ ಮಂಡಳಿ ನವಿಮುಂಬಯಿ, ಶ್ರೀ ವಿಠಲ ಭಜನಾ ಮಂಡಳಿ ಮೀರಾರೋಡ್ ಮತ್ತು ವಲಯ ಭಜನಾ ಮಂಡಳಿಗಳ ಭಜನೆ, ನೃತ್ಯ ಭಜನೆ ಯೊಂದಿಗೆ ಧಾರ್ಮಿಕ ಉತ್ಸವ ನಡೆಸಲ್ಪಟ್ಟಿತು. ಪೂರ್ವಾಹ್ನ ಮಹಾಪೂಜೆ ನಡೆಸಲಾಗಿ ಬಳಿಕ ಗೋಕುಲದ ಪ್ರಧಾನ ಆರ್ಚಕ ವೇ| ಮೂ| ಶ್ರೀನಿವಾಸ ಭಟ್ ಧರೆಗುಡ್ಡೆ ಪ್ರವಚನ ನಡೆಸಿ ಅನುಗ್ರಹಿಸಿದರು. ಗೋಕುಲದ ಆರ್ಚಕ ಗಣೇಶ್ ಭಟ್ ಹಾಗೂ ಶ್ರೀ ರಾಮ ವಿಠಲ ಕಲ್ಲೂರಾಯ ಅವರು ಶ್ರೀರಾಮನ ವಿವಿಧ ಪೂಜಾಧಿಗಗಳನ್ನು ನೆರವೇರಿಸಿದರು. ಸಂಜೆ ನಿತ್ಯ ಪೂಜೆ ನಂತರ ರಂಗ ಪೂಜೆ, ದೀಪೋತ್ಸವದ ಬಳಿಕ ತೀರ್ಥಪ್ರಸಾದ, ಪ್ರಸಾದ ಭೋಜನದೊಂದಿಗೆ ಕಾರ್ಯಕ್ರಮ ಸಮಾಪನ ಗೊಂಡಿತು.
ಸಾಂಸ್ಕ್ರತಿಕ ಕಾರ್ಯಕ್ರಮವಾಗಿಸಿ ಅಪರಾಹ್ನ ಭಗವಾನ್ ಶ್ರೀರಾಮನ ಕುರಿತು ‘ರಾಮ ರಸಾಯನ’ ವೈವಿಧ್ಯಮಯ ಕಾರ್ಯಕ್ರಮ ನಡೆಸಲ್ಪಟ್ಟಿದ್ದು ನಂತರ ಸುಚಿತ್ರಾ ರಾವ್, ಲಕ್ಷಿ ರಾವ್, ನವ್ಯಾ ರಾವ್ ಅವರು ಕರ್ನಾಟಕ ಸಂಗೀತ ಪ್ರಸ್ತುತ ಪಡಿಸಿದರು. ಪ್ರಿಯಾಂಜಲಿ ರಾವ್, ವಿಧಿ ರಾವ್ ಅವರು ಭರತನಾಟ್ಯವನ್ನು, ವಿದುಷಿ ಸಹನಾ ಭಾರದ್ವಾಜ್ ನಿರ್ದೇಶನದಲ್ಲಿ ಸಹನಾ ಸ್ಕೂಲ್ ಆಫ್ ಪರ್ಫಾರ್ಮಿಂಗ್ ಆರ್ಟ್್ಸನ ಕಲಾವಿದರಾದ ಕ್ಷಮಾ ಸುರೇಶ್ ರಾವ್ ಮತ್ತು ಕು| ಅಕ್ಷತಾ ರಾವ್ ನೃತ್ಯವನ್ನು ಹಾಗೂ ನೃತ್ಯ ವಿದ್ಯಾ ನಿಲಯ ಭಾಂಡೂಪ್ ತಂಡವು ವಿದುಷಿ ಶೈಲಜಾ ಮಧು ಸೂದನ್ ನಿರ್ದೇಶನದಲ್ಲಿ ‘ಸುಂದರ ಕಾಂಡ’ ನೃತ್ಯ ಬ್ಯಾಲೆ ಪ್ರದರ್ಶಿಸಿದ್ದು ಒಟ್ಟಾರೆ ಸಾಂಸ್ಕ್ರತಿಕ, ಸಂಗೀತೋ ತ್ಸವದಿಂದ ಮೊಳಗಿದ ಮಂಗಳ ಧ್ವನಿಯು ಶ್ರೀ ಕೃಷ್ಣನ ಸನ್ನಿಧಿಯಲ್ಲಿ ಮರ್ಧನಿಸಿದವು.
ಈ ಧಾರ್ಮಿಕ ಆಚರಣೆಯಲ್ಲಿ ಬಿಎಸ್‌ಕೆಬಿಎ ಮತ್ತು ಜಿಕೆಪಿ ಟ್ರಸ್ಟ್ನ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು, ಬಿಎಸ್‌ಕೆಬಿಎ ಪ್ರಥಮ ಮಹಿಳೆ ವಿಜಯಲಕ್ಷ್ಮೀ ಸುರೇಶ್ ರಾವ್, ಉಪಾಧ್ಯಕ್ಷರುಗಳಾದ ವಾಮನ್ ಹೊಳ್ಳಾ ಮತ್ತು ಅವಿನಾಶ್ ಶಾಸ್ತ್ರಿ, ಕಾರ್ಯದರ್ಶಿ ಎ.ಪಿ.ಕೆ ಪೋತಿ, ಖಜಾಂಚಿ ಸಿಎ| ಹರಿದಾಸ ಭಟ್, ಜೊತೆ ಕಾರ್ಯದರ್ಶಿ ಚಿತ್ರಾ ಮೇಲ್ಮನೆ ಮತ್ತು ವೈ.ಮೋಹನ್‌ರಾಜ್, ಮಹಿಳಾ ವಿಭಾಗಧ್ಯಕ್ಷೆ ಸಹನಾ ಎ.ಪೋತಿ, ಯುವ ವಿಭಾಗಧ್ಯಕ್ಷ ಪ್ರಶಾಂತ್ ಹೆರ್ಲೆ, ಗೋಕುಲ ಕಲಾವೃಂದದ ಕಾರ್ಯಾಧ್ಯಕ್ಷೆ ವಿನೋದಿನಿ ಆರ್.ರಾವ್, ಗೋಕುಲ ಭಜನಾ ಮಂಡಳಿ ಸಮಿತಿ ಮತ್ತು ಮಾಧ್ಯಮ ಸಮಿತಿ ಕಾರ್ಯಧ್ಯಕ್ಷೆ ಐ.ಕೆ ಪ್ರೇಮಾ ಎಸ್.ರಾವ್, ಜಿಕೆಪಿ ಟ್ರಸ್ಟ್ನ ವಿಶ್ವಸ್ಥ ಸದಸ್ಯರುಗಳಾದ ಶೈಲಿನಿ ರಾವ್, ಮಾಜಿ ಅಧ್ಯಕ್ಷ ಕೆ.ಸುಬ್ಬಣ್ಣ ರಾವ್, ಸುಬ್ರಹ್ಮಣ್ಯ ಮಠದ ಅಧ್ಯಕ್ಷ ಸುಭಾಷ್ ಚಂದ್ರ ರಾವ್, ಕಾರ್ಯದರ್ಶಿ ಶಿವರಾಯ ರಾವ್, ಕೋಶಾಧಿಕಾರಿ ಉಮೇಶ್ ರಾವ್ ಕೆಮ್ಮಣ್ಣು ಮತ್ತಿತರ ಪದಾಧಿಕಾರಿಗಳು, ಸದಸ್ಯರನೇಕರು, ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡು ಭಗವಾನ್ ಶ್ರೀರಾಮನ ಕೃಪೆಗೆ ಪಾತ್ರರಾದರು.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.