Skip to main content
www.kallianpur.com | Email : kallianpur7@gmail.com | Mob : 9741001849

ಪೇಜಾವರ ಮಠ ಮುಂಬಯಿ ಶಾಖೆಯಲ್ಲಿ ಶ್ರೀ ರಾಮಲಲ್ಲಾ ಪ್ರಾಣ ಪ್ರತಿಷ್ಠಾ ಸಂಭ್ರಮ ರಾಮಜ್ಯೋತಿಗಳನ್ನು ಬೆಳಗಿಸಿ ದೀಪೋತ್ಸವದೊಂದಿಗೆ ರಾಮೋತ್ಸವ ಆಚರಣೆ.

By January 23, 2024Mumbai News
kallianpurdotcom : 23/01/2024
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜ.೨೨: ಸನಾತನ ಸಂಸ್ಕ್ರತಿಯ ಇತಿಹಾಸದ ಸುವರ್ಣದಿನ ಎಂದೇ ಬಿಂಬಿತ ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ವಿಶ್ವವಿಖ್ಯಾತ ಭವ್ಯ ಶ್ರೀರಾಮ ಮಂದಿರದ ಗರ್ಭಗುಡಿಯಲ್ಲಿ ಶ್ರೀರಾಮನು ಮರಳಿ ನೆಲೆಯಾದ ಶುಭಾ ವಸರದಿ ಸಾಂತಾಕ್ರೂಜ್ ಪೂರ್ವದ ಪ್ರಭಾತ್ ಕಾಲೋನಿ ಯಲ್ಲಿನ ಪೇಜಾವರ ಮಠ ಮುಂಬಯಿ ಶಾಖೆಯಲ್ಲಿ ಪೂರ್ಣಪ್ರಜ್ಞಾ ವಿದ್ಯಾಪೀಠ ಪ್ರತಿಷ್ಠಾನ ಮತ್ತು ಪೇಜಾವರ ಮಠ ಮುಂಬಯಿ ಶಾಖೆಯ ವತಿಯಿಂದ ರಾಮೋತ್ಸವ ಆಚರಿಸಲ್ಪಟ್ಟಿತು.

ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ಟ್ರಸ್ಟಿಯೂ ಆಗಿರುವ ಉಡುಪಿ ಪೇಜಾವರಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥರ ಆದೇಶ ಮತ್ತು ಮಾರ್ಗದರ್ಶನದಂತೆ ಬೆಳಿಗ್ಗೆ ಆಯೋಧ್ಯೆಯಲ್ಲಿ ದೇವಶಕ್ತಿಯ ಚೈತನ್ಯವನ್ನು ತುಂಬಿದ ಪ್ರಾಣಪ್ರತಿ ಷ್ಠೆಯ ವೇಳೆ ಮಠದಲ್ಲಿ ರಾಮತಾರಕ ಮಂತ್ರ ಯಾಗದೊಂದಿಗೆ ಶ್ರೀ ರಾಮ ಲಲ್ಲಾ ಪ್ರಾಣ ಪ್ರತಿಷ್ಠಾ ಮಹೋತ್ಸವ ವನ್ನು ಸಾಂಪ್ರದಾಯಿಕ ನಡೆಸಲಾಯಿತು. ನೆರೆದ ಭಕ್ತರು ಆಯೋಧ್ಯಯ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಎಲ್‌ಇಡಿ ಪರದೆ ಮುಖಾಂತರ ವೀಕ್ಷಿಸಿ ಪುಣೀತರಾದರು.

ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾ ಸಂಸ್ಥಾನದ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶರಾಗಿದ್ದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಕನಸು ಕಂಡ ಕೃಷ್ಣೆಕ್ಯ ಯತಿಕುಲ ಚಕ್ರವರ್ತಿ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರನ್ನು ಸ್ಮರಣೆಗೈದು ಮಠದ ಪ್ರಧಾನ ವ್ಯವಸ್ಥಾಪಕ ಡಾ| ರಾಮದಾಸ ಉಪಾಧ್ಯಾಯ ರೆಂಜಾಳ ತನ್ನ ಪೌರೋಹಿತ್ಯದಲ್ಲಿ ಶಾಸ್ತ್ರೋಕ್ತವಾಗಿ ರಾಮತಾರಕ ಮಂತ್ರ ಯಾಗ ನೆರವೇರಿಸಿ ನೆರೆದ ಸದ್ಭಕ್ತರನ್ನು ಹರಸಿದರು.

ಮಂದಿರದ ಗರ್ಭಗುಡಿಯಲ್ಲಿನ ಶ್ರೀರಾಮನ ಪ್ರತಿಷ್ಠಾ ಕ್ರಿಯಾವಿಧಿಗಳಲ್ಲಿ ಪೇಜಾವರಶ್ರೀ ಮಧ್ವೇಶ ಭಜನಾ ಮಂಡಳಿ ಸಾಂತಕ್ರೂಜ್, ವಾಗ್ದೇವಿ ಭಜನಾ ಮಂಡಳಿ ಬೋರಿವಿಲಿ ಭಜನೆಗೈದರು. ವಿಶ್ವೇಶತೀರ್ಥ ಸ್ವಾಮೀಜಿ ಅವರನ್ನು ಕಂಡ ಭಕ್ತಾದಿಗಳು ಹರ್ಷೋದ್ಗಾರದಿಂದ ಸಂತಸಪಟ್ಟರು. ಸಂಜೆ ನಡೆಸಲ್ಪಟ್ಟ ಶ್ರೀರಾಮ ಪ್ರತಿಷ್ಠಾಪನಾ ದಿನಾಚರಣಾ ಸಂಭ್ರಮದಲ್ಲಿ ಶ್ರೀ ರಾಮ ಜಯ ರಾಮ ಜಯ ಜಯ ರಾಮ ಘೋಷಣೆಯೊಂದಿಗೆ ರಾಮಜಪ ಪಠಿಸಿದ ಶ್ರೀರಾಮ ಭಕ್ತರು ಸೂರ್ಯಾಸ್ತದ ಬಳಿಕ ಏಕಕಾಲಕ್ಕೆ ರಾಮಜ್ಯೋತಿಗಳನ್ನು ಬೆಳಗಿಸಿ ದೀಪೋತ್ಸವದೊಂದಿಗೆ ಶ್ರೀರಾಮನನ್ನು ಸ್ಮರಿಸಿದರು. ತೀರ್ಥ ಪ್ರಸಾದದೊಂದಿಗೆ ರಾಮೋತ್ಸವ ಸಮಾಪನ ಕಂಡಿದ್ದು, ಮಹಾನಗರದಲ್ಲಿನ ಅಪಾರ ಸಂಖ್ಯೆಯ ಭಕ್ತಾದಿಗಳು ಪುಣ್ಯಾಧಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಬಿ.ಆರ್ ಗುರುಮೂರ್ತಿ, ಗೌರವ ಕೋಶಾಧಿಕಾರಿ ಅವಿನಾಶ್ ಶಾಸ್ತ್ರಿ, ಮತ್ತಿತರ ಸದಸ್ಯರು, ಪೇಜಾವರ ಮಠ ಮುಂಬಯಿ ಶಾಖೆಯ ಪ್ರಬಂಧಕರು ಗಳಾದ ವಿದ್ವಾನ್ ಪ್ರಕಾಶ ಆಚಾರ್ಯ ರಾಮಕುಂಜ, ವಿದ್ವಾನ್ ಹರಿ ಭಟ್ ಪುತ್ತಿಗೆ, ನಿರಂಜನ್ ಗೋಗ್ಟೆ ಸೇರಿದಂತೆ ಪುರೋಹಿತರಾದ ಪವನ್ ಭಟ್, ಮುಕುಂದ್ ಭಟ್, ಗುಂಡು ಭಟ್ ಗುಲ್ಬರ್ಗ, ರಾಧಾಕೃಷ್ಣ ಭಟ್, ರಮೇಶ್ ಭಟ್, ವೃಂದ, ವಿಶ್ವ ಹಿಂದೂ ಪರಿಷತ್ತ್, ಆರ್‌ಎಸ್‌ಎಸ್‌ ನ ಸ್ಥಾನೀಯ ಧುರೀಣರು, ನಗರದ ವಿವಿಧ ಮಠ-ಮಂದಿರ, ಧಾರ್ಮಿಕ ಸಂಸ್ಥೆಗಳ ಮುಖ್ಯಸ್ಥರು ಪಾಲ್ಗೊಂಡು ಶ್ರೀರಾಮ ದೇವರನ್ನು ಪೂಜಿಸಿದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.