kallianpurdotcom: 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಫೆ.೧೭: ಮೈಸೂರು ಅಸೋಸಿಯೇಶನ್ ಮುಂಬಯಿ ಆಯೋಜಿಸುತ್ತಿರುವ ೨೦೨೪ನೇ ವಾರ್ಷಿಕ ಶ್ರೀರಂಗ ರಂಗೋತ್ಸವ ಇಂದಿಲ್ಲಿ ಶನಿವಾರ ಸಂಜೆ ಮಾಟುಂಗಾ ಪೂರ್ವದ ಭಾವುದಾಜಿ ರಸ್ತೆಯಲ್ಲಿನ ಮೈಸೂರು ಅಸೋಸಿಯೇಶನ್‌ನ ಸಭಾಗೃಹದಲ್ಲಿ ಉದ್ಘಾಟಿಸಲ್ಪಟ್ಟಿತು.
ಮೈಸೂರು ಅಸೋಸಿಯೇಶನ್ ಮುಂಬಯಿ ಉಪಾಧ್ಯಕ್ಷ ಉಮೇಶ್ ಮಸ್ಕಿರಿ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಕಾರ್ಯ ಕ್ರಮದಲ್ಲಿ ಉಷಾ ದೇಸಾಯಿ (ಶ್ರೀ ರಂಗಾ ಅವರ ಸುಪುತ್ರಿ) ಮುಖ್ಯ ಅತಿಥಿಯಾಗಿದ್ದು ಭಾವಚಿತ್ರಕ್ಕೆ ಪುಷ್ಪವೃಷ್ಠಿಗೈದು ದೀಪ ಪ್ರಜ್ವಲಿಸಿ `ರಂಗೋತ್ಸವ’ಕ್ಕೆ ಚಾಲನೆಯನ್ನಿತ್ತರು. ಅಸೋಸಿ ಯೇಶನ್‌ನ ಸಂಘಟಕ, ಹಿರಿಯ ನಾಟಕಕಾರ ಡಾ| ಬಿ.ಆರ್ ಮಂಜುನಾಥ್, ಕಮಲಾಕ್ಷ ಸರಾಫ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉಮೇಶ್ ಮಸ್ಕಿರಿ ಮಾತನಾಡಿ ರಂಗಸ್ಥಳಕ್ಕೆ ಹೊಸದಿಕ್ಕು ತೋರಿದ ಪ್ರಯೋಗ ಇದಾಗಿದೆ. ಬಣ್ಣದ ಬದುಕಿನ ಪರಿಚಯ ಮಾಡುವ ಸಾಧನೆಯೂ ಹೌದು. ನಾಟಕ ರಚನೆಕ್ಕಿಂತ ಅಭಿನಯವು ಮುಖ್ಯವಾಗಿದೆ. ಇದು ಸಮಾಜ ಸುಧಾರಣೆ ಪ್ರೇರಣೆಯಾಗಿದೆ ಎಂದರು.
ಡಾ| ಬಿ.ಆರ್ ಮಂಜುನಾಥ್ ಮಾತನಾಡಿ ನಾಟಕ ನೋಡು ವುದು ಒಂದು ವಿಷಯ. ಬರೆಯೋದು ಒಂದು ವಿಷಯ ವಾಗಿದೆ. ಇಷ್ಟವಾಗಿ ಹೇಳುವುದನ್ನು ನಾಟಕದ ಮೂಲಕ ಶ್ರೀರಂಗ ತಿಳಿಸಿದರು ಎಂದು ಹೇಳುತ್ತಾ ಶ್ರೀರಂಗಾ ಅವರ ನಾಟಕ ಮೇರುತ್ವದ ಬಗ್ಗೆ ವಿವರಿಸಿದರು.
ಉಷಾ ದೇಸಾಯಿ ಮಾತನಾಡುತ್ತಾ ಬರೇ ಕನ್ನಡವಲ್ಲ ಭಾರತೀಯ ಭಾಷೆಗಳ ನಾಟಕ ಪ್ರದರ್ಶನಗಳ ಉತ್ಸವವಾಗಿ ದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಭಾಷೆಗಳ ನಾಟಕಗಳು ರಂಗ ಪ್ರದರ್ಶನ ಆಗುತ್ತೇ, ನಾಟಕಗಳು ಜೀವನಕ್ಕೆ ನೀತಿದಾಯಕ ವಾಗಲಿ ಎಂದರು.
ಅಪಾರ ಸಂಖ್ಯೆಯ ನಾಟಕಾಭಿಮಾನಿಗಳು ಉಪಸ್ಥಿತರಿದ್ದು, ನಾರಾಯಣ ನವಿಲೇಕರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಇಂದಿನಿಂದ (ಫೆ.೧೭ರಿಂದ ೧೯ರ ವರೆಗೆ) ಮೂರು ದಿನಗಳ ಕಾಲ ನಡೆಯುವ ರಂಗೋತ್ಸವದ ಮೊದಲ ಪ್ರದರ್ಶ ನವಾಗಿ ನಾಡಿನ ಹೆಸರಾಂತ ನಾಟಕಕಾರ ಬಾಲಕೃಷ್ಣ ಪುರಾಣಿಕ್ ಕಾಸರಕೋಡು ರಚನೆಯ ಲಿಮ್ಕಾ ರೆಕಾರ್ಡ್ಸ್ ಪ್ರಸಿದ್ಧಿಯ ಪ್ರತಿಷ್ಠಿತ ನಾಟಕಕಾರ ಡಾ| ಚಂದ್ರಶೇಖರ್ ಎಸ್.ಶೆಣೈ ನಿರ್ದೇಶನದಲ್ಲಿ `ಲಗ್ನ ಪಿಶ್ಶೆ’ ಕೊಂಕಣಿ ಹಾಸ್ಯ ಪ್ರಧಾನ ಸಂಗೀತಮಯ ನಾಟಕವನ್ನು ಆಮ್ಮಿ ರಂಗಕರ್ಮಿ (ರಿ.) ಮುಂಬಯಿ ಕಲಾವಿದರು ಪ್ರದರ್ಶಿಸಿದರು.
ಅಮ್ಮಿ ರಂಗಕರ್ಮಿ’ಸ್ ನಿರ್ಮಾಪಕತ್ವ ಮತ್ತು ವಿಶ್ವ ಕೊಂಕಣಿ ಪ್ರಶಸ್ತಿ ಪುರಸ್ಕ್ರತ ಎ.ಜಿ ಕಾಮತ್ ಇವರ ಸೃಜನಾತ್ಮ ಕತೆ ಮತ್ತು ವಿಶೇಷ ಮಾರ್ಗದರ್ಶನ ಹಾಗೂ ತೋನ್ಸೆ ವೆಂಕಟೇಶ್ ಶೆಣೈ ಸಹ ನಿರ್ದೇಶನದಲ್ಲಿ ಪ್ರದರ್ಶಿಸಲ್ಪಟ್ಟ ನಾಟಕಕ್ಕೆ ಕೃಷ್ಣ ಚಂದಾವರ ಸಂಗೀತ ನಿರ್ದೇಶನ ನೀಡಿದರು. ಸುಧಾಕರ್ ಭಟ್ ಇವರ ವೇದಿಕೆ ಸಜ್ಜನಿಕೆ ಬೆಳಕು ಮತ್ತು ಹಿನ್ನೆಲೆ ಸಂಗೀತದೊಂದಿಗೆ ಎನ್. ಎಸ್.ಕಾಮತ್, ಟಿ.ವಿ ಶೆಣೈ ಮತ್ತು ಸುಧಾಕರ್ ಭಟ್ ನಿರ್ಮಾಣ ತಂಡ ದೊಂದಿಗೆ ಸಾದರಗೊಂಡ ನಾಟಕದ ಪ್ರಮುಖ ತಾರಾಗಣದಲ್ಲಿ ಹರೀಶ್ ಚಂದಾವರ್ (ತಿಮ್ಮ ಪ್ರಭು), ವೆಂಕಟೇಶ್ ಶೆಣೈ (ಮಷ್ಣ ಭಟ್), ಅಕ್ಷತಾ ಕಾಮತ್ (ಶಾರದ ಭಟ್ಟಿನಮಾಯಿ), ಪ್ರಮೋದ್ ಮಲ್ಯ (ಚಂದ್ರಕಾಂತ್), ಡಾ| ಚಂದ್ರ ಶೇಖರ್ ಶೆಣೈ (ಗೋವಿಂದ್ರಯ್ಯ ಶೆಣೈ) ಮತ್ತು ಕಮಲಾಕ್ಷ ಸರಾಫ್ (ಫೊಂಡು) ಅಭಿನಯಿಸಿದರು. ಅರ್ಚನಾ ಭಟ್ (ವಿನಯ), ತನಿಶಾ ಭಟ್ (ಸ್ವಪ್ನಸುಂದರಿ) ಪೋಷಕ ಪಾತ್ರಗಳನ್ನು ನಿಭಾಯಿಸಿದರು.
ಫೆ.೧೮ರ ಭಾನುವಾರ ಸಂಜೆ ಹೊಂಗಿರಣ ತಂಡ ಶಿವಮೊಗ್ಗ ಕಲಾವಿದರು ಪರ್ವತರಾಣಿ ರಚಿಸಿ, ಡಾ| ಸತೀಶ್ ಸಾಸ್ವಹಳ್ಳಿ ಅವರ ವಿನ್ಯಾಸ, ನಿರ್ದೇಶನದಲ್ಲಿ `ಹಗ್ಗದ ಕೊನೆ’ ಕನ್ನಡ ನಾಟಕವನ್ನು, ಫೆ.೧೯ರ ಸೋಮವಾರ ಸಂಜೆ ರಂಗವಿಜಯ ತಂಡ ಮಾಲೂರು ಕಲಾವಿದರು ಡಾ| ಟಿ.ಲಕ್ಷ್ಮಿ ನಾರಾಯಣ್ ರಚಿಸಿ ಸಂಗೀತ ನೀಡಿರುವ, ಕಲಾ ಮಾಲೂರು ವಿಜಿ ಪರಿಕಲ್ಪನೆ ಮತ್ತು ನಿರ್ದೇಶನದ, ರಾಷ್ಟ್ರ ಪ್ರಶಸ್ತಿ ಪುರಸ್ಕ್ರತ ಕಲಾ ನಿರ್ದೇಶಕ ಶಶಿಧರ ಅಡಪ ಅವರ ರಂಗಸಜ್ಜಿಕೆಯ `ಸ್ವಾತಂತ್ರ‍್ಯ ಸಮರ ಕರುನಾಡು ಅಮರ’ ಕನ್ನಡ ನಾಟಕವನ್ನು ಪ್ರದರ್ಶಿಸಲಿದ್ದಾರೆ ಎಂದು ಅಸೋಸಿ ಯೇಶನ್‌ನ ವ್ಯವಸ್ಥಾಪಕ ಬಿ.ಕೆ ಮಧುಸೂದನ್ ತಿಳಿಸಿದ್ದಾರೆ.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.