Skip to main content
www.kallianpur.com | Email : kallianpur7@gmail.com | Mob : 9741001849

ನಾಡಿನ ಪ್ರಸಿದ್ಧ ಪತ್ರಕರ್ತ- ಕತೆಗಾರ-ಕವಿ ಮನೋಹರ ಪ್ರಸಾದ್ ನಿಧನ.

By March 1, 2024News
kallianpurdotcom: 9741001849
(ವರದಿ : ರೋನ್ಸ್ ಬಂಟ್ವಾಳ್

ಮುಂಬಯಿ, (ಆರ್‌ಬಿಐ) ಮಾ.೦೧: ಮಂಗಳೂರು ಅಲ್ಲಿನ ನಾಡಿನ ಪ್ರಸಿದ್ಧ ಪತ್ರಕರ್ತ, ಬಹುಮುಖಿ ಪ್ರತಿಭಾವಂತ ಜನಪ್ರಿಯ ಕಾರ್ಯಕ್ರಮ ನಿರೂಪಕ, ಕತೆಗಾರ ಹಾಗೂ ಕವಿ ಉದಯವಾಣಿ ಪತ್ರಿಕೆಯ ನ್ಯೂಸ್ ಬ್ಯೂರೋ ಮುಖ್ಯಸ್ಥ ರಾಗಿದ್ದು ನಿವೃತ್ತರಾಗಿದ್ದ ಮನೋಹರ ಪ್ರಸಾದ್ ಇಂದು ಶುಕ್ರವಾರ ಮುಂಜಾನೆ ನಗರದ ಖಾಸಾಗಿ ಆಸ್ಪತ್ರೆಯಲ್ಲಿ ನಿಧನರಾದರು.

ಕರ್ನಾಟಕ ಕರಾವಳಿಯ ಕಾರ್ಕಳ ತಾಲೂಕು ಕರುವಾಲು ಗ್ರಾಮ ಮೂಲತಃ ಮನೋಹರ ಪ್ರಸಾದ್ ಮಂಗಳೂರು ನಲ್ಲಿ ಕಾಲೇಜು ಪದವಿ ಪೂರೈಸಿ `ನವ ಭಾರತ’ ಕನ್ನಡ ದೈನಿಕದಲ್ಲಿ ಪತ್ರಿಕಾ ವೃತ್ತಿ ಜೀವನ ಆರಂಭಿಸಿದ್ದರು. ಬಳಿಕ `ಉದಯವಾಣಿ’ ಮಂಗಳೂರು ಸುದ್ದಿ ವಿಭಾಗದ ವರದಿಗಾರರಾಗಿ ಸೇರ್ಪಡೆ ಗೊಂಡಿದ್ದರು. ಅಲ್ಲಿಂದ ಮೊದಲ್ಗೊಂಡು ಮುಖ್ಯ ವರದಿಗಾರರಾಗಿ, ಬಳಿಕ ಬ್ಯೂರೋ ಚೀಫ್ ಮತ್ತು ಪ್ರಸ್ತುತ ಸಹಾಯಕ ಸಂಪಾದಕರ ಹುದ್ದೆಯವರೆಗೆ ಸತತ ೩೬ ವರ್ಷಗಳ ಸೇವೆ ಸಲ್ಲಿಸಿ ಕಳೆದ ಎರಡು ವರ್ಷದ ಹಿಂದೆ ನಿವೃತ್ತಿಹೊಂದಿದ್ದರು.

ಸಣ್ಣ ಕತೆಗಳು, ಒಂದು ತುಳು ಕಥಾ ಸಂಕಲನ, ತುಳು- ಕನ್ನಡ ಕವಿತೆಗಳನ್ನು ರಚಿಸಿರುವ ಓರ್ವ ಸೃಜನಶೀಲ ಬರಹಗಾರ. ಅವರ ತುಳು ಕಾದಂಬರಿಗೆ ಉಡುಪಿ ತುಳುಕೂಟದ ಪ್ರಶಸ್ತಿ ಲಭಿಸಿದೆ. ಮಂಗಳೂರು ಆಕಾಶವಾಣಿಯಲ್ಲಿ ೫೬ಕ್ಕೂ ಅಧಿಕ ಕಾರ್ಯ ಕ್ರಮಗಳನ್ನು ನೀಡಿದ್ಡಾರೆ.

ಮನೋಹರ್ ಪ್ರಸಾದ್ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ, ೨೦೦೫ರ ಕರ್ನಾಟಕ ರಾಜ್ಯೋ ತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಸಂದೇಶ ಪ್ರತಿಷ್ಠಾನದ ರಾಜ್ಯ ಪ್ರಶಸ್ತಿ, ಕೆನರಾ ಬ್ಯಾಂಕ್ ಅಮೃತೋತ್ಸವ ಪುರಸ್ಕಾರ, ಹವ್ಯಕ ವೆಲ್ಫೇರ್ ಟ್ರಸ್ಟ್ ಮುಂಬಯಿ ಸಂಸ್ಥೆಯ ಪ್ರತಿಷ್ಠಿತ ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ ಪ್ರಶಸ್ತಿ-೨೦೧೪, ೦೦೦೦೦೦, ಕೆನರಾ ಬ್ಯಾಂಕ್‌ನಿಂದ ಸಾಧನಾಶೀಲ ಪ್ರಶಸ್ತಿ, ಪಾಲ್ಸ್ ಪತ್ರಿಕೋದ್ಯ ಮ ಪ್ರಶಸ್ತಿ ಕರ್ನಾಟಕ ರಾಜ್ಯ ಜೇಸೀಸ್‌ ನಿಂದ ರಾಜ್ಯ ಯುವ ಸಾಧಕ ಪ್ರಶಸ್ತಿ, ಸಂದೇಶ ಪ್ರತಿಷ್ಠಾನದಿಂದ ವಿಶೇಷ ಸಾಧನಾ ಪ್ರಶಸ್ತಿ, ಜಯಂಟ್ಸ್ ಇಂಟರ್‌ನ್ಯಾಷನಲ್ ಸಾಧನಾಶೀಲ ಇತ್ಯಾದಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಭಾರತದ ಸಾರ್ವಜನಿಕ ಸಂಪರ್ಕ ಸೊಸೈಟಿಯ ಮಂಗಳೂರು-ಮಣಿಪಾಲ ಘಟಕದಿಂದ ೧೯೯೮ರ ಸರ್ವ ಶ್ರೇಷ್ಠ ಸಾರ್ವಜನಿಕ ಸಂಪರ್ಕ ವ್ಯಕ್ತಿ ಪ್ರಶಸ್ತಿ, ಸೇರಿದಂತೆ ಪತ್ರಿಕಾ ರಂಗದಲ್ಲಿ ಸಲ್ಲಿಸಿದ ಅನುಪಮ ಸೇವೆಗಾಗಿ ವಿವಿಧ ಸಂಘ-ಸಂಸ್ಥೆಗಳಿಂದ ೬೦೦ಕ್ಕೂ ಮಿಕ್ಕಿದ ಪ್ರಶಸ್ತಿ, ಪುರಸ್ಕಾರ, ಗೌರವ ಮತ್ತು ಸನ್ಮಾನಗಳು ಪ್ರಾಪ್ತಿಯಾಗಿವೆ. ರೋಟರಿ ಅಂತಾರಾಷ್ಟ್ರೀಯ ಸಮೂಹ ಅಧ್ಯಯನ ವಿನಿಮಯ ತಂಡಕ್ಕೆ ಆಯ್ಕೆಯಾಗಿ ೧೯೯೧ರಲ್ಲಿ ೬ ವಾರ ಅಸ್ಟೇಲಿಯಾದಲ್ಲಿ ಅಧ್ಯಯನ ಪ್ರವಾಸವನ್ನು ಪೂರೈಸಿದ್ದರು.

ಅಂತಿಮ ದರ್ಶನ:
ಪ್ರಸಾದ್ ಅವರ ಪಾರ್ಥೀವ ಶರೀರವು ಮಧ್ಯಾಹ್ನ ತನಕ ಮಂಗಳೂರು ಕದ್ರಿಯ ಲೋಬೊ ಲೇನ್‌ನ ಈಶಾ ಲ್ಯಾಂಡ್ ಟ್ರೇಡ್ಸ್ ಫ್ಲಾಟ್‌ನಲ್ಲಿರಿಸಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ನಾಲ್ಕು ಗಂಟೆಗೆ ಮಂಗಳೂರು ಪ್ರೆಸ್ ಕ್ಲಬ್ನಲ್ಲಿ ಪಾರ್ಥೀವ ಶರೀರದ ದರ್ಶನ ನಡೆಸಲಾಗಿದ್ದು ಮಾಜಿ ಕೇಂದ್ರ ವಿತ್ತ ಸಚಿವ ಬಿ. ಜನಾ ರ್ದನ ಪೂಜಾರಿ, ಕರ್ನಾಟಕ ವಿಧಾನ ಸಭಾಧ್ಯಕ್ಷ ಯು.ಟಿ ಖಾದರ್, ಸಂಸದ ನಳಿನ್ ಕುಮಾರ್, ಶಾಸಕರಾದ ಡಿ. ವೇದ ವ್ಯಾಸ ಕಾಮತ್, ಗುರ್ಮೆ ಸುರೇಶ್ ಶೆಟ್ಟಿ, ಕೆ. ಹರೀಶ್‌ ಕುಮಾರ್, ಮಾಜಿ ಸಚಿವ ವಿನಯಕುಮಾರ್ ಸೊರಕೆ, ದ.ಕ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಡಾ| ಎಂ.ಮೋಹನ್ ಆಳ್ವ ಮೂಡಬಿದ್ರೆ, ಡಾ| ಯು. ಕಣಚೂರು ಮೋನು, ಐವಾನ್ ಡಿಸೋಜಾ, ಪಿ.ಬಿ ಹರೀಶ್ ರೈ, ಅನ್ನು ಮಂಗಳೂರು, ತಾರನಾಥ ಕಾಪಿಕಾಡ್, ಕುದ್ರೋಳಿ ಗಣೇಶ್, ಬಿ.ಎ ಮೊಯ್ದ್ದೀನ್ ಬಾವ, ಮಮತಾ ಗಟ್ಟಿ ಸೇರಿದಂತೆ ಅನೇಕ ಗಣ್ಯರು ಆಗಮಿಸಿ ಅಚಿತಿಮ ದರ್ಶನ ಪಡೆದು ಶ್ರದ್ಧಾಂ ಜಲಿ ಸಲ್ಲಿಸಿದರು. ನಂತರ ಧಾರ್ಮಿಕ ವಿಧಿ ವಿಧಾನ ಗಳೊಂದಿಗೆ ಕದ್ರಿ ಸ್ಮಶಾನದಲ್ಲಿ ಅಂತಿಮ ಸಂಸ್ಕಾರ ನಡೆಸ ಲಾಯಿತು.

ಗಣ್ಯರ ಸಂತಾಪ:
ಮನೋಹರ್ ಪ್ರಸಾದ್ ನಿಧನಕ್ಕೆ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ವಿಜಯೇಂದ್ರ, ಮಾಜಿ ಸಚಿವರುಗಳಾದ ಬಿ.ರಮಾನಾಥ ರೈ, ವಿನಯಕುಮಾರ್ ಸೊರಕೆ, ಕೆ.ಅಭಯಚಂದ್ರ ಜೈನ್, ಡಾ| ಕಲ್ಲಡ್ಕ ಪ್ರಭಾಕರ ಭಟ್, ಡಾ| ಮಂಜುನಾಥ ಭಂಡಾರಿ, ದ.ಕ ಜಿಲ್ಲಾ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಖಾದರ್ ಶ್ಹಾ, ಕೆ.ಆನಂದ್ ಶೆಟ್ಟಿ, ರವೀಂದ್ರ ಬಿ.ಶೆಟ್ಟಿ, ಜಗನ್ನಾಥ ಶೆಟ್ಟಿ ಬಾಳ, ರೋಹನ್ ಮೊಂತೆರೋ, ಡಾ| ಶಿವರಾಮ ಕೆ.ಭಂಡಾರಿ, ಚಂದ್ರಹಾಸ ಶೆಟ್ಟಿ (ಕಂಫರ್ಟ್), ನ್ಯಾ| ಜಗದೀಶ್ ಶೇಣವ, ಶರಣ್ ಪಂಪ್‌ವೆಲ್, ಮಂಗಳೂರು ವಿವಿ ಮಾಜಿ ಉಪಕುಲಪತಿ ಪ್ರೊ| ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ, ಎನ್‌ಆರ್‌ಐ ಉದ್ಯಮಿ ರೋನಾಲ್ಡ್ ಕುಲಾಸೋ, ಮುಖ್ಯ ಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ ಪ್ರಭಾಕರ್, ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಹರೀಶ್ ಜಿ.ಅಮಿನ್, ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕದ ಅಧ್ಯಕ್ಷ ಡಾ| ಆರ್.ಕೆ ಶೆಟ್ಟಿ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ರೋನ್ಸ್ ಬಂಟ್ವಾಳ್, ಭಾರತ್ ಬ್ಯಾಂಕ್‌ನ ಕಾರ್ಯಾಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ, ತೋನ್ಸೆ ಜಯಕೃಷ್ಣ ಎ.ಶೆಟ್ಟಿ, ಮುಂಬಯಿ ಬಿಜೆಪಿ ದಕ್ಷಿಣ ಭಾರತೀಯ ಘಟಕದ ಪ್ರಧಾನ ಕಾರ್ಯದರ್ಶಿ ವಿಜಯ್ ಎಸ್.ಶೆಟ್ಟಿ ಪಣಕಜೆ, ಸುರೇಂದ್ರ ಎ.ಪೂಜಾರಿ (ಸಾಯಿಕೇರ್), ಕೆಯುಡಬ್ಲ್ಯೂಜೆ ಮಹಾರಾಷ್ಟ್ರ ಘಟಕದ ಪ್ರಧಾನ ಕಾರ್ಯದರ್ಶಿ ಡಾ| ಶಿವ ಮೂಡಿಗೆರೆ ಸೇರಿದಂತೆ ಹಲವಾರು ಮಂದಿ ಸಂತಾಪ ಸೂಚಿ ಸಿದ್ದಾರೆ.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.