kallianpurdotcom : 15/06/2023
ಉಡುಪಿ: ರಾಷ್ಟ್ರೀಯ ಪರೀಕ್ಷಾ ಮಂಡಳಿ ನಡೆಸಿದ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಂಸ್ಥೆ ಪ್ರಾರಂಭವಾದ ದ್ವಿತೀಯ ವರ್ಷದಲ್ಲೇ ಅತ್ಯುತ್ತಮ ಫಲಿತಾಂಶ ಗಳಿಸಿದ್ದಾರೆ. ಆಲ್ ಇಂಡಿಯಾ ರ‍್ಯಾಂಕಿಂಗ್‌ನಲ್ಲಿ ಕುಮಾರಿ ಜಾಗೃತಿ ಕೆ ಪಿ 661 ಅಂಕಗಳೊಂದಿಗೆ ಕೆಟೆಗರಿಯಲ್ಲಿ 23 ನೇ ರ‍್ಯಾಂಕ್, ಉದ್ಭವ್ ಎಂ ಆರ್ 625 ಅಂಕಗಳೊಂದಿಗೆ ಕೆಟೆಗರಿಯಲ್ಲಿ 72 ನೇ ರ‍್ಯಾಂಕ್ ಗಳಿಸಿದ್ದಾರೆ. ಹಾಗೆಯೇ ಸಂಸ್ಥೆಯ ವಿದ್ಯಾರ್ಥಿಗಳಾದ ತನುಶ್ರೀ ಕೆ ಎನ್ 625, ಶ್ರೇಯಸ್ ಎಸ್ ಚಿಕಾಲೇ 612, ಸಾತ್ವಿಕ್ ಎಸ್ ಶೆಟ್ಟಿ 609, ಚಂದನ ಹೆಚ್ ಎಂ 605, ಸಾಕ್ಷಿತ್ ಶೆಟ್ಟಿ 604, ಸ್ವೀಕೃತಿ ಶೆಟ್ಟಿ 596, ಗೌರಿ ಸಿ ಸಂಕೊಲ್ 595, ಮನೋಜ ಪಾಲನ್ಕರ್ 592,ಪ್ರೀತಮ್ ಎಸ್ ಜಿ 584, ಪ್ರಶಿನ್ ಶೆಟ್ಟಿ 578,ಚಮನ್ ಜಿ 576, ಜ್ಞಾನದೀಪ್ ಕೆ ಆರ್ 555, ಸಾನ್ವಿ ಎಂ ಆರ್ 548, ಶ್ರೀಗಂಗಾ 547, ಜೀವನ್ ಎ 545, ನೇಹಾ ಬಿ ಜಿ 543, ಮಿಂಚು ಪಿ ಆರ್ 535, ಅವಿನ್ ಫ್ರಾನ್ಸೀಸ್ ಡಿಸೋಜಾ 531, ಅಭಯ್ ಕೆ ಆರ್ 525, ಶ್ರೇಯಸ್ ಎಸ್ ಶೆಟ್ಟಿ 521, ಆದಿತ್ಯ ಮಹೇಶ್ ಶೇಟ್ 517, ಭರತ್ ವಿ 516, ಪ್ರವೀಣ್ ಆರ್ ಎಮ್ಮಿ 515 ಅಂಕಗಳಿಸಿ ದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಮೆಡಿಕಲ್ ಸೀಟ್ ಪಡೆದುಕೊಳ್ಳಲು ಅರ್ಹರಾಗಿದ್ದಾರೆ.
ಸುಮಾರು 25 ವಿದ್ಯಾರ್ಥಿಗಳು 500 ಕ್ಕಿಂತ ಅಧಿಕ ಅಂಕ, 68 ವಿದ್ಯಾರ್ಥಿಗಳು 400 ಕ್ಕಿಂತ ಅಧಿಕ ಅಂಕ, 110 ವಿದ್ಯಾರ್ಥಿಗಳು 300 ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ. ಪರೀಕ್ಷೆಗೆ ಕುಳಿತ 209 ವಿದ್ಯಾರ್ಥಿಗಳು ನೀಟ್ ಅರ್ಹತೆ ಪಡೆದುಕೊಂಡಿದ್ದು ಮುಂದಿನ ಕೌನ್ಸೆಲಿಂಗ್ ಹಂತದಲ್ಲಿ ಮೆಡಿಕಲ್ ಕಾಲೇಜು ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ವಿದ್ಯಾರ್ಥಿಗಳ ಈ ಸಾಧನೆಯನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವರ್ಗದವರು, ನೀಟ್ ಸಂಯೋಜಕರಾದ ಲೋಹಿತ್ ಎಸ್ ಕೆ ಅಭಿನಂದಿಸಿದ್ದಾರೆ.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.