Skip to main content
www.kallianpur.com | Email : kallianpur7@gmail.com | Mob : 9741001849

ಅನಿವಾಸಿ ಕನ್ನಡಿಗರ ಸಮ್ಮೇಳನ ಹಾಗೂ ಹೃದಯವಾಹಿನಿ ರಜತೋತ್ಸವ ಕಾಲೇಜು ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ- ಕವನ ರಚನಾ ಸ್ಪರ್ಧೆ.

By September 13, 2024Mumbai News
kallianpurdotcom: 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್

ಮುಂಬಯಿ: ಅನಿವಾಸಿ ಕನ್ನಡಿಗರ ಸಮ್ಮೇಳನ ಹಾಗೂ ಹೃದಯವಾಹಿನಿ ರಜತೋತ್ಸವ ಅಂಗವಾಗಿ ಕಾಲೇಜು ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ-ಕವನ ರಚನಾ ಸ್ಪರ್ಧೆಯನ್ನು ಪ್ರವೇಶ ಮುಕ್ತವಾಗಿಸಿ ರವೀಂದ್ರ ಕಲಾಕ್ಷೇತ್ರ ಬೆಂಗಳೂರು ಇಲ್ಲಿ 04 ಮತ್ತು 05.ಅಕ್ಟೋಬರ್ 2024ರಂದು ಬೆಳಿಗ್ಗೆ 9:00 ಮಧ್ಯಾಹ್ನ 1:00ರ ವರೆಗೆ ಆಯೋಜಿಸ ಲಾಗಿದೆ. 04ರ ಶುಕ್ರವಾರ ರಸಪ್ರಶ್ನೆ ಸ್ಪರ್ಧೆ, ಕವನ ರಚನಾ ಸ್ಪರ್ಧೆ ಮತ್ತು 05ರ ಶನಿವಾರ ಸಮೂಹಗಾನ ಸ್ಪರ್ಧೆ, ರಂಗೋಲಿ ಸ್ಪರ್ಧೆ ಏರ್ಪಾಡಿಸಲಾಗಿದೆ.

ವಿಜೇತರಿಗೆ  ಪ್ರಥಮ ಸ್ಥಾನಕ್ಕೆ  ರೂ. 10,000/- ನಗದು, ದ್ವಿತೀಯ ಸ್ಥಾನಕ್ಕೆ  ರೂ. 5,000೦/- ನಗದು, ತೃತೀಯ ಸ್ಥಾನಕ್ಕೆ  ರೂ. 3,000/- ನಗದು ಬಹುಮಾನದ ಜೊತೆಗೆ ಎಲ್ಲಾ ವಿಜೇತರಿಗೆ ನೆನಪಿನ ಕಾಣಿಕೆ ಹಾಗು ಪ್ರಶಸ್ತಿ ಪತ್ರ ನೀಡಲಾಗುವುದು. ಫಲಿತಾಂಶ ಪ್ರಕಟ ಅದೇ ದಿನ ಮಧ್ಯಾಹ್ನ 1:00ಗಂಟೆಗೆ ಪ್ರಕಟವಾಗಲಿದ್ದು ಭಾಗವಹಿಸಿದ ಎಲ್ಲರಿಗೂ ಪ್ರಶಸ್ತಿ ಪತ್ರ ನೀಡಲಾಗುವುದು. ನಾಲ್ಕು ವಿಭಾಗಕ್ಕೂ ಪ್ರತ್ಯೇಕವಾದ ಬಹುಮಾನ ನೀಡಲಾಗುವುದು.

ಅಂದು ಬೆಳಿಗ್ಗೆ 8:00 ಗಂಟೆಗೆ ಉಪಾಹಾರ. ಮಧ್ಯಾಹ್ನ 1:45ಕ್ಕೆ ಊಟದ ವ್ಯವಸ್ಥೆವಿದೆ. ಸ್ಪರ್ಧೆಗೆ ಪ್ರವೇಶ ಉಚಿತ ವಾಗಿದ್ದು ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ವಿದ್ಯಾರ್ಥಿಗಳಿಗೂ ಅವಕಾಶವಿದೆ. ಯಾವುದೇ ರೀತಿಯ ಬತ್ತೆ ಇರುವುದಿಲ್ಲ.  ಸೀಮಿತ ಸ್ಪರ್ಧಿಗಳಿಗೆ  ಅವಕಾಶ ಇರುವುದರಿಂದ ಮೊದಲು ಹೆಸರು ನೋಂದಾಯಿಸಿ ಕೊಂಡವರಿಗೆ ಪ್ರಥಮ ಆದ್ಯತೆ. ದಿನಾಂಕ 21.09.2024 ನೋಂದಣಿಗೆ ಕಡೆಯ ದಿನ ಆಗಿದೆ.

ಸ್ಪರ್ಧಿಗಳುನಿ ಬಂಧನೆಗಳು ಮತ್ತು ಹೆಚ್ಚಿನ ಮಾಹಿತಿಗಾಗಿ 9886510087 ವಾಟ್ಸ್ಆಪ್‌ಗೆ ತಮ್ಮ ಹೆಸರು ಹಾಗೂ ವಿಳಾಸ ಕಳುಹಿಸಿ ಕೊಡಬೇಕು. ಕರೆ ಮಾಡಿ ಮಾತನಾಡುವಂತಿಲ್ಲ. ವಿದ್ಯಾರ್ಥಿಗಳು ತಮ್ಮ ಕಾಲೇಜ್‌ನ ಫೋಟೋ ಐಡಿ ತರುವುದು ಕಡ್ಡಾಯ ಎಂದು  ಹೃದಯ ವಾಹಿನಿ ಕರ್ನಾಟಕ (ಮಂಗಳೂರು) ಸ್ಪರ್ಧಾ ಆಯೋಜಕರು ಈ ಮೂಲಕ ತಿಳಿಸಿದ್ದಾರೆ.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.