kallianpurdotcom: 03/07/23
ಉಡುಪಿ : ಜೂ ೨೪, ಶಾಲೆಯ ವಿದ್ಯಾರ್ಥಿ ಸಂಸತ್ತು ಮಕ್ಕಳಲ್ಲಿ ಸೂಪ್ತವಾಗಿರುವ ನಾಯಕತ್ವ ಗುಣಗಳನ್ನು ಬೆಳೆಸುವ ವೇದಿಕೆಯಾಗಿದೆ. ಇಲ್ಲಿನ ಜವಾಬ್ದಾರಿಯನ್ನು ಚೆನ್ನಾಗಿ ನಿರ್ವಹಿಸಿದರೆ. ಮುಂದೆ ಸಮಾಜದಲ್ಲಿ ಕರ್ತವ್ಯವನ್ನು ಪಾಲಿಸುವ ಜವಾಬ್ದಾರಿಯುತ ನಾಗರಿಕರಾಗಿ, ಅಧಿಕಾರಿಗಳಾಗಿ ಬೆಳೆಯಲು ಸಾಧ್ಯ. ಇಂದಿನ ರಾಜಕಾರಣಿಗಳು ಅವರ ಶಾಲಾ ಹಂತದಲ್ಲಿ ವಿದ್ಯಾರ್ಥಿ ಸಂಸತ್ತಿನ ಮಂತ್ರಿಗಳಾಗಿದ್ದವರೇ ಆಗಿದ್ದಾರೆ. ಆದರೆ ನಿಜ ಜೇವನದಲ್ಲಿ ಮಂತ್ರಿಗಳಾದಾಗ ತಮ್ಮ ಕರ್ತವ್ಯ ಮರೆತವರಾಗಿದ್ದಾರೆ. ನಿಮ್ಮ ನಾಯಕತ್ವ ಸಮರ್ಥವಾಗಿ ರೂಪಿಸಿಕೊಳ್ಳಿಯೆಂದು ಎನ್ಸಿಸಿಯ ಸಿನಿಯರ್ ಅಂಡರ್ ಅಫಿಸರ್, ಡೆಲ್ಲಿಯಲ್ಲಿ ಕರ್ನಾಟಕ- ಗೋವಾವನ್ನು ಪ್ರತಿನಿಧಿಸಿದ ಕು ಅನ್ವಿತಾ ತಂತ್ರಿ ಹೇಳಿದರು.
ಸಂತೆಕಟ್ಟೆ ಮೌಂಟ್ ರೋಸರಿ ಆಂಗ್ಲ ಶಾಲೆಯ ವಿದ್ಯಾರ್ಥಿ ಸಂಸತ್ತು ಉದ್ಘಾಟನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಶಾಲಾ ಸಂಚಾಲಕ ವಂದನೀಯ ಡಾ ರೋಕ್ ಡಿಸೋಜ ದೀಪ ಪ್ರಜ್ವಲಿಸಿ ವಿದ್ಯಾರ್ಥಿ ಸಂಸತ್ತನ್ನು ಉದ್ಘಾಟಿಸಿ ಶಾಲಾ ನಾಯಕ,ಉಪನಾಯಕರಿಗೆ ಪ್ರತಿಜ್ಞಾ ವಿಧಿಯನ್ನು ಭೋದಿಸಿದರು. ಸಂವಿಧಾನದ ಅಶೋತ್ತರಗಳನ್ನು ತಿಳಿಹೇಳಿ ಶಾಲಾ ಮಂತ್ರಿ ಮಂಡಲಕ್ಕೆ ಶಾಲಾ ಮುಖ್ಯ ಶಿಕ್ಷಕಿ ಭಗಿನಿ ಸಿ ಅನ್ಸಿಲ್ಲಾ ಡಿಮೆಲ್ಲೋ ಪ್ರತಿಜ್ಞಾ ವಿಧಿ ಭೋದಿಸಿದರು.
ವೇದಿಕೆಯಲ್ಲಿ ವಿದ್ಯಾರ್ಥಿ ಸಂಸತ್ತಿನ ನಿರ್ದೇಶಕಿ ನ್ಯಾನ್ಸಿ ಡಿಸೋಜ, ಶಿಕ್ಷಕ – ರಕ್ಷಕ ಸಂಘದ ಮಾಜಿ ಕಾರ್ಯಕಾರಿ ಸದಸ್ಯೆ ಅಕ್ಷತಾ ತಂತ್ರಿ, ಶಾಲಾ ನಾಯಕಿ ಸಾನಿಕಾ ಉಪಸ್ಥಿತರಿದ್ದರು. ಶಿಕ್ಷಕಿ ಮಿಲನಾ ಸ್ವಾಗತಿಸಿದರು, ಕು ಆ್ಯಡ್ಲಿನ್ ನಿರೂಪಿಸಿದರು. ಶಾಲಾ ಉಪನಾಯಕ ಸಚಿನ್ ಆಚಾರ್ಯ ವಂದಿಸಿದರು.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.