Skip to main content
www.kallianpur.com | Email : kallianpur7@gmail.com | Mob : 9741001849

ಸರಪಾಡಿ ಶ್ರೀ ಶರಬೇಶ್ವರ ದೇವಸ್ಥಾನದ ಜೀರ್ಣೋದ್ದಾರದ ಮುಂಬಯಿ ಸಮಿತಿ ರಚನೆ ಕುರಿತು ಮತ್ತು ಸಮಾಲೋಚನಾ ಸಭೆ.

By July 4, 2023Mumbai News
(ಚಿತ್ರ /ವರದಿ : ತಾರ ರೋನ್ಸ್ ಬಂಟ್ವಾಳ್

ಮುಂಬಯಿ , ಜು.೦೪: ಸರಪಾಡಿ ಶ್ರೀ ಶರಬೇಶ್ವರ ದೇವಸ್ಥಾನದ ಜೀರ್ಣೋದ್ದಾರದ ಮುಂಬಯಿ ಸಮಿತಿ ರಚನೆ ಕುರಿತು ಮತ್ತು  ಮಾಲೋಚನಾ ಸಭೆಯು ಕಳೆದ ರವಿವಾರ (ಜು.೦೨) ಕುರ್ಲಾ ಬಂಟರ ಭವನದಲ್ಲಿ ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಸ್ಥಾನದ ಧರ್ಮದರ್ಶಿ ಅಣ್ಣಿ ಸಿ.ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಜ್ಯೋತಿ ಬೆಳಗಿಸುವುದರ ಮುಖಾಂತರ ಚಾಲನೆಗೈದರು.

ಅತಿಥಿಗಳಾಗಿ ಭವಾನಿ ಶಿಪ್ಪಿಂಗ್ ಕಾರ್ಯಾಧ್ಯಕ್ಷ ಕುಸುಮೋಧರ ಡಿ.ಶೆಟ್ಟಿ, ಬಿಎಸ್‌ಕೆಬಿ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್, ಶ್ರೀ ಕಾವೇಶ್ವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಉದ್ಯಮಿ ರಘು ಎಲ್.ಶೆಟ್ಟಿ, ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರು ವಿಠ್ಠಲ ಯಂ, ಟ್ರಷ್ಟಿ ಕೆ.ಉಮೇಶ ಆಳ್ವ,ಜೀರ್ಣೋದ್ದಾರ ಸಮಿತಿ ಉಪಾಧ್ಯಕ್ಷರು ಪುರುಷೋತ್ತಮ್ ಬಿ. ಮಜಲು, ಸರಪಾಡಿ ಯುವಕ ಮಂಡಲದ ಅಧ್ಯಕ್ಷರು ಪಿ. ಸಂತೋಷ್ ಕುಮಾರ್ ವೇದಿಕೆಯಲ್ಲಿದ್ದರು.

ಆಣ್ಣಿ ಸಿ.ಶೆಟ್ಟಿ ಮಾತನಾಡುತ್ತ ಹೊಸ ದೇವಸ್ಥಾನ ನಿರ್ಮಾಣ ಮಾಡುವುದಕ್ಕಿಂತ ಹಳೆಯ ಕಾಲದಿಂದ ಆರಾಧಿಸಿಕೊಂಡು ಬಂದ ದೇವರ ದೇವಾಲಯವನ್ನು ಜೀರ್ಣೋದ್ದಾರ ಮಾಡುವುದುದು ಅತ್ಯುತ್ತಮ ಕಾರ್ಯ. ಹೊಸ ದೇವಾಲಯ ನಿರ್ಮಿಸುವುದಕ್ಕಿಂತ ಸಹಸ್ರ ಪುಣ್ಯ ಪ್ರಾಪ್ತಿ ಎಂದರು. ಸರಪಾಡಿ ಮತ್ತು ಮಣಿನಾಲ್ಕೂರು ಗ್ರಾಮಗಳ ಹಾಗೂ ಬಂಟ್ವಾಳ ತಾಲೂಕಿನ ಆಸ್ತಿಕ ಬಾಂಧವರ ಸಹಭಾಗಿತ್ವದ ಸಮಿತಿ ರಚಿಸಿ ಆ ಮೂಲಕ ಸರಪಾಡಿ ಕ್ಷೇತ್ರದ ಜೀರ್ಣೋದ್ದಾರ ಕಾರ್ಯದಲ್ಲಿ ಕೈ ಜೋಡಿಸುವ ಬಗ್ಗೆ ಕೆ. ಡಿ ಶೆಟ್ಟಿ ಅವರನ್ನು ವಿನಂತಿಸಿದ ಮೇರೆಗೆ ಸಂಪೂರ್ಣ ಒಪ್ಪಿಗೆಯನ್ನು ಸೂಚಿಸಿ ಸಹಕಾರದ ಭರವಸೆ ನೀಡುತ್ತಾ ಕ್ಷೇತ್ರದ ಜೀರ್ಣೋದ್ದಾರದ ಮಹತ್ಕಾರ್ಯದ ಮಹತ್ವವನ್ನು ವಿವರಿಸಿದರು.

ಶ್ರೀ ಅಯ್ಯಪ್ಪ ಮಂದಿರ ನೆರೋಳ್ ಇದರ ಅಧ್ಯಕ್ಷ ಸುರೇಶ ಜಿ. ಶೆಟ್ಟಿ, ಸಾಯಿ ಪ್ಯಾಲೇಸ್ ಹೋಟೆಲ್ ಮಾಲಕರಾದ ರವಿ ಎಸ್.ಶೆಟ್ಟಿ, ನೆರೋಳ್ ಸಂಜೀವ ಎನ್.ಶೆಟ್ಟಿ, ಕಲ್ಲಡ್ಕ ಕರುಣಾಕರ ವಿ.ಶೆಟ್ಟಿ, ಖ್ಯಾತ ನಿರೂಪಕ ಅಶೋಕ್ ಪಕ್ಕಳ, ಹಿರಿಯ ಹೋಟೆಲ್ ಉದ್ಯಮಿ ಪ್ರವೀಣ್ ಶೆಟ್ಟಿ,ಶಿವರಾಮ ಶೆಟ್ಟಿ ನೆರೋಳ್, ನವೀನ್ ಶೆಟ್ಟಿ, ಜಗನ್ನಾಥ ಜೆ ಶೆಟ್ಟಿ, ಪ್ರಕಾಶ್ ಡಿ. ಶೆಟ್ಟಿ, ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿ, ಮೋಯ ಸಮಾಜದ ಅಧ್ಯಕ್ಷ ರವಿ ಉಚ್ಚಿಲ್, ನಾಗೇಶ್ ಶೆಟ್ಟಿ, ಶಶಿ ಕುಮಾರ್ ಶೆಟ್ಟಿ, ರವೀಶ್ ಜಿ ಶೆಟ್ಟಿ, ಭಾಸ್ಕರ ಬಿ. ಶೆಟ್ಟಿ, ಜಗನ್ನಾಥ ಶೆಟ್ಟಿ, ಯಶವಂತ್ ಐಲ, ಜಯ ಸಿ.ಶೆಟ್ಟಿ, ನಾಗೇಶ ಶೆಟ್ಟಿ, ಪ್ರಾಣೇಶ್ ಚೆಂಬೂರು, ಕಾರ್ಯಕ್ರಮದ ಅಯೋಜಕ ಪಡ್ಡಾಯಿಬೆಟ್ಟು ಪದ್ಮನಾಭ ಶೆಟ್ಟಿ ಸರಪಾಡಿ ಮೊದಲಾದವರು ಉಪಸ್ಥಿತರಿದ್ದರು.

ಸರಪಾಡಿ ವೀಣಾ ದೀಪಕ್ ಸುವರ್ಣ ಪ್ರಾರ್ಥನೆಯನ್ನಡಿದರು. ಕರ್ನೂರು ಮೋಹನ್ ರೈ ಕಾರ್ಯಕ್ರಮ ನಿರೂಪಿಸಿದರು. ಭಾಸ್ಕರ್ ಸರಪಾಡಿ ಧನ್ಯವಾದವಿತ್ತರು.

ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಮುಂಬಯಿಯ ಸಮಿ ಕುಸುಮೊಧರ ಡಿ. ಶೆಟ್ಟಿ,ಚೆಲ್ಲಡ್ಕ (ಅಧ್ಯಕ್ಷರು), ಚೆಂಬೂರು ಬಾಲಕೃಷ್ಣ ಪೂಜಾರಿ ನೈಬೇಲು ಮತ್ತು (ಉಪಾಧ್ಯಕ್ಷರು) , ಕರ್ನೂರು ಮೋಹನ್ ರೈ (ಗೌರವ ಕಾರ್ಯದರ್ಶಿ),ಪಡ್ಡಾಯಿಬೆಟ್ಟು ಪದ್ಮನಾಭ ಎಸ್.ಶೆಟ್ಟಿ ಸರಪಾಡಿ( ಸಹಕಾರ್ಯದರ್ಶಿ) ಶಶಿಧರ ಬಂಗೇರ ಪಟ್ಲಕೆರೆ ಮತ್ತು ವೀಣಾ ದೀಪಕ್ ಸುವರ್ಣ (ಕೋಶಾಧಿಕಾರಿ), ಕಲ್ಕೋಟೆ ಶಶಿ ಕುಮಾರ್ ಶೆಟ್ಟಿ ಪನ್ವೆಲ್ ಮತ್ತು ಅಶೋಕ್ ಪಕ್ಕಳ, ಕಲ್ಯಾಣ್ ಶಂಕರ ಶೆಟ್ಟಿ ಮುನ್ನಲಾಯಿಗುತ್ತು, ಕಸ್ಟಮ್ಸ್ ಸುರೇಶ್ ಶೆಟ್ಟಿ ನಡುಮೊಗರು (ಸಂಘಟನ ಕಾರ್ಯದರ್ಶಿ), ಭೀವಂಡಿ ಆನಂದ್ ಯಸ್.ಪೂಜಾರಿ, ರವಿ ಪೂಜಾರಿ ಮೀರಾ ರೋಡ್, ಶಿವಶಂಕರ್ ಪೂಜಾರಿ ಪುನ್ಕೇದಡಿ, ಸತೀಶ್ ಪೂಜಾರಿ ಉಜಿರಾಡಿಗುತ್ತು ಅಲ್ಲಿಪಾದೆ, ಹರೀಶ್ ಜೆ ಶೆಟ್ಟಿ,ಆರ್ಮುಡಿ, ಪ್ರವೀಣ್ ನಾಯ್ಕ್ ಇಳಿಯೂರು, ನವೀನ್ ಶೆಟ್ಟಿ ಮಾನಸ ಸರೋವರ, ಶ್ರೀಮತಿ ದ್ರಶ್ಯ ಕೀರ್ತನ್ ಶೆಟ್ಟಿ, ನಾಗೇಶ್ ಶೆಟ್ಟಿ ಅಜಿಲಮೊಗರು, ಪ್ರಾಣೇಶ್ ಚೆಂಬೂರು, ಪ್ರವೀಣ್ ಶೆಟ್ಟಿ ಅಜಿಲಮೊಗರು (ಸದಸ್ಯರುಗಳು) ಮೊದಲಾದವರನ್ನು ಆಯ್ಕೆ ಮಾಡಿಲಾಯಿತು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.