Skip to main content
www.kallianpur.com | Email : kallianpur7@gmail.com | Mob : 9741001849

ಸತ್ಯ ಶ್ಯಾಮಲಾಂ ವಂದೇ ಮಾತರಂ ವಿಶಿಷ್ಟ ಕಾರ್ಯಕ್ರಮದೊಂದಿಗೆ ಐಲೇಸಾದಿಂದ ಇಸ್ರೋ ವಿಜ್ಞಾನಿ ಕವಿ ಸಿ ಅರ್ ಸತ್ಯ ಅವರ ಪತ್ನಿ ಶ್ಯಾಮಲಾ ಸತ್ಯ ಅವರಿಗೆ ಗೌರವ ನಮನ.

By October 12, 2023Mumbai News
kallianpurdotcom: 12/10/23
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್

ಮುಂಬಯಿ,(ಆರ್‌ಬಿಐ) ಅ.೧೨: ಫ್ರೆಂಚ್ ಪೋಟೋಗ್ರಾಫರ್ ಹೆನ್ರಿ ಕಾರ್ಟಿಯರ್ ಬ್ರೆಸ್ಸೋನ್ಸ್ ತೆಗೆದ ಆ ಒಂದು ಫೋಟೋ ನೋಡದವರು ತೀರಾ ವಿರಳ. ಸೈಕಲ್‌ನಲ್ಲಿ ರಾಕೆಟ್ ನೋಸ್ ಹೇರಿಕೊಂಡು ಇನ್ಸ್ಟ್ರುಮೆಂಟ್ ಇಂಜಿನಿಯರ್ ವೇಲಪ್ಪನ್ ನಾಯರ್ ಹಾಗೂ ಇಸ್ರೋ ಸಂಸ್ಥೆಯ ರಾಕೆಟ್ ಇಂಜಿನಿಯರ್ ಸಿ. ಆರ್ ಸತ್ಯ ಜೊತೆಯಾಗಿ ನಡೆಯುವ ಚಿತ್ರವದು. ಅಂದು ಶೈಶವ ಸ್ಥಿತಿಯಲ್ಲಿದ್ದ ರಾಕೆಟ್ ಉಡಾವಣಾ ತಂತ್ರಜ್ಞಾನ ಮುಂದೆ ಕಲಾಂ ನೇತೃತ್ವದ ಸಿ. ಅರ್ ಸತ್ಯ ತಂಡ ಉಪಗ್ರಹ ವಾಹಕ ರಾಕೆಟ್‌ನ್ನು ಯಶಸ್ವಿಯಾಗಿ ಕಕ್ಷೆಗೆ ಹಾರಿಸುವಲ್ಲಿ ಯಶಸ್ವಿಯಾಗಿದ್ದು ಇಂದು ಇತಿಹಾಸ .

ಇಂತಹ ಬಿಡುವಿಲ್ಲದ ವಿಜ್ಞಾನಿಯೊಳಗೆ ಒಬ್ಬ ಅದ್ಭುತ ವೈನೋದಿಕ ಕವಿ ಅಡಗಿದ್ದ ಅನ್ನುವುದು ಹೆಚ್ಚಿನವರಿಗೆ ತಿಳಿಯದ ಸತ್ಯ. ಆಚೆ ಮನೆ ಸುಬ್ಬಮ್ಮನದು ಏಕಾದಶಿ ಉಪವಾಸ ಎನ್ನುವ ಮೈಸೂರು ಅನಂತ ಸ್ವಾಮಿಯವ ಸಂಯೋಜನೆಯ ಖ್ಯಾತ ಹಾಡಿನ ಮೂಲಕ ಕನ್ನಡದ ಜನತೆಗೆ ಹಾಸ್ಯ ಸವಿಯ ಹಾಡನ್ನು ಉಣ ಬಡಿಸಿದ ಸತ್ಯ ಅವರದು ವಿಜ್ಞಾನದ ಜೊತೆ ಸಾಹಿತ್ಯದ ಅನೂಹ್ಯ ಪ್ರಯಾಣ.

ಸತ್ಯರವರ ಈ ಸಾಹಿತ್ಯ ಸಂಗೀತದ ಆಸಕ್ತಿಯನ್ನು ಅವರ ಅನುಪಸ್ಥಿತಿಯಲ್ಲಿ ಅವರ ಕಾವ್ಯ ಸ್ಪೂರ್ತಿ, ಜೀವನ ಸಂಗಾತಿ ಶ್ಯಾಮಲಾರವರ ಜೊತೆಯೊಂದಿಗೆ ಸಂವಾದದಲ್ಲಿ ತೊಡಗಿ ಕವಿ ಪತ್ನಿಯ ಸಂಗಾತಿ ಸಾಹಿತ್ಯ ಶೂನ್ಯವನ್ನು ಒಂದಿಷ್ಟು ಹೊತ್ತು ಕಳೆಯಲು ಐಲೇಸಾ “ಸತ್ಯ ಶ್ಯಾಮಲಾಂ ವಂದೇ ಮಾತರಂ” ಎಂಬ ವಿಭಿನ್ನ ಕಾರ್ಯಕ್ರಮವನ್ನು ಬೆಂಗಳೂರಿನ ಆನಂದ ನಗರದ ಶ್ಯಾಮಲಾರವರ ಮನೆಯಲ್ಲಿ ಭಾನುವಾರ ಅಂದರೆ 15-10-2023 ತಾರೀಕು ಸಮಾನ ಮನಸ್ಕ ಸಾಹಿತ್ಯಾಭಿಮಾನಿಗಳ ಕೂಡುವಿಕೆಯಲ್ಲಿ ನಡೆಸಲು ತೀರ್ಮಾನಿಸಿದೆ.

ಕಾರ್ಯಕ್ರಮದಲ್ಲಿ ರಾಜ್ಯ ಪ್ರಶಸ್ತಿ ವಿಜೇತ ಹಿನ್ನಲೆ ಗಾಯಕ ರಮೇಶ್ಚಂದ್ರ, ಟಿವಿ ವಾರ್ತಾ ನಿರೂಪಕ ನಾಯಕ ನಟ ರಾಘವ ಸೂರ್ಯ, ಪತ್ರಕರ್ತ ವಿನೋದ್, ಗಾಯಕರುಗಳಾದ ಅಜೇಶ್ ಚಾರ್ಮಾಡಿ, ಡಾ| ಸುಶೀಲಾ ರಾವ್, ಪ್ರಕಾಶ್ ಪಾವಂಜೆ, ನಾಟ್ಯ ವಿದುಷಿ ನಮಿತಾ ಅನಂತ್ ಮತ್ತು ಸನತ್ ಭಾಗವಹಿಸಲಿದ್ದಾರೆ.

ಕಾರ್ಯಕ್ರಮವನ್ನು ಸಾಹಿತಿ ಐಲೇಸಾದ ಕ್ರಿಯೆಟಿವ್ ಹೆಡ್ ಶಾಂತಾರಾಮ ಶೆಟ್ಟಿ ಮತ್ತು ಶ್ರೀ ಅನಂತ್ ನಿರ್ವಹಿಸಲಿದ್ದು ಗೋಪಾಪ್ ಪಟ್ಟೆ, ಪಳ್ಳಿ ವಿಶ್ವನಾಥ ಶೆಟ್ಟಿ ಶಿವೂ ಸಾಲಿಯಾನ್ ಮತ್ತು ನರೇಂದ್ರ ಕಬ್ಬಿನಾಲೆ ಯೋಜಿಸಲಿದ್ದಾರೆ.

ಆಸಕ್ತರು ಆ ದಿನ ಬೆಳಿಗ್ಯೆ ಹತ್ತೂವರೆ ಗಂಟೆಗೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗಬಹುದು , ಮತ್ತು ಇತರ ವಿವರಗಳಿU ಐಲೇಸಾದ ಮೀಡಿಯಾ ಸಂಚಾಲಕರಾದ ಮುಂಬಯಿಯ ಸುರೇಂದ್ರ ಮಾರ್ನಾಡ್  9324280156  ಮತ್ತು ವಿವೇಕ್ ಮಂಡೆಕರ  9008242735 ಕರೆಮಾಡಿ ತಿಳಿದುಕೊಳ್ಳಬಹುದು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.