
kallianpurdotcom: Mob 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಅ.೨೩: ಬೃಹನ್ಮುಂಬಯಿ ಚರ್ಚಗೇಟ್ ಇಲ್ಲಿನ ಶಾಸಕರ ವಸತಿಗೃಹದಲ್ಲಿ ಮಹಾನಗರದಲ್ಲಿ ನ ಹಿರಿಯ ಮತ್ತು ಪ್ರತಿಷ್ಠಿತ ಹೊಟೇಲು ಉದ್ಯಮಿ ಪದ್ಮಕರ್ ಗಂಭೀರ್ ಮುಂದಾಳುತ್ವದಲ್ಲಿ ಸ್ಥಾಪಿತ ಶ್ರೀ ದುರ್ಗಾಂಬಿಕಾ ಭಜನಾ ಮಂಡಳಿ ತನ್ನ ೫೩ನೇ ವಾರ್ಷಿಕ ನವರಾತ್ರಿ ಮಹೋತ್ಸವನ್ನು ಸಾಂಪ್ರದಾಯಿಕ ಮತ್ತು ವಿಧಿವತ್ತಾಗಿ ಆಚರಿಸಿತು. ವರ್ಷಂಪ್ರತಿಯಂತೆ ಈ ಬಾರಿಯೂ ೨೦೨೬ನೇ ಸಾಲಿನ ಶರನ್ನವರಾತ್ರಿ ಯನ್ನು ಮಹಾನಗರದ ಪ್ರತಿಷ್ಠಿತ ಹೊಟೇಲು ಉದ್ಯಮಿ,ಅಜಂತಾ ಕ್ಯಾಟರರ್ಸ್ನ ಮಾಲೀಕ, ಭಜನಾ ಮಂಡಳಿ ಗೌರವಾಧ್ಯಕ್ಷ ಜಯರಾಮ ಬಿ.ಶೆಟ್ಟಿ ಇನ್ನ ಸಾರಥ್ಯದಲ್ಲಿ ನೆರವೇರಿಸಲ್ಪಟ್ಟಿತು.
ನವರಾತ್ರಿಯ ಒಂಭತ್ತು ದಿನಗಳಲ್ಲಿ ಭಜನಾ ಮಂಡಳಿಯ ಶ್ರೀ ದುರ್ಗಾಂಬಿಕಾ ಸನ್ನಿಧಿಯಲ್ಲಿ ವಿದ್ವಾನ್ ಸುಬ್ರಹ್ಮಣ್ಯ ಭಟ್ ತನ್ನ ಪೌರೋಹಿತ್ಯ ದಲ್ಲಿ ಗಣಹೋಮ, ಇತರ ಪೂಜೆಗಳನ್ನು ವಿಧಿವತ್ತಾಗಿ ನೆರವೇರಿಸಿ ಅನುಗ್ರಹಿಸಿದರು. ವಾರ್ಷಿಕ ಶರನ್ನವರಾತ್ರಿ ಪ್ರಯುಕ್ತ ಸನ್ನಿಧಿಯಲ್ಲಿ ನಿತ್ಯ ಪೂಜೆ, ಶ್ರೀ ಅಣ್ಣಪ್ಪ ಪಂಜುರ್ಲಿ ದೈವದ ಪೂಜೆ, ಮಹಾಕಾಳಿ ಅಮ್ಮನವರ ಪೂಜೆ, ಭಜನೆ ಮತ್ತು ಮಂಗಳಾರತಿ ನೆರವೇರಿಸಲಾಯಿತು.
ವಿಜಯ ದಶಮಿದಿನ ಬೆಳಿಗ್ಗೆ ಕಳಸಪೂಜೆ, ಭಜನೆ, ಮಹಾಪೂಜೆ ಮತ್ತು ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಮೆರವಣಿಗೆಯೊಂದಿಗೆ ಚೌಪಾಟಿಯಲ್ಲಿ ಕಳಸ ವಿಸರ್ಜನೆ ನಡೆಸಲಾಗಿ ದಸರಾ ಮಹೋತ್ಸವದ ಆರಂಭೋತ್ಸವದ ದಿನ ಘಟಸ್ಥಾಪನೆಯೊಂದಿಗೆ ಆದಿಗೊಂಡ ನವರಾತ್ರಿ ಉತ್ಸವವು ವಿಜಯದಶಮಿದಿನ ಸಮಾಪನಗೊಂಡಿತು.
ಈ ಬಾರಿ ದಸರಾಪೂಜೆಗೆ ಮಹಾರಾಷ್ಟ್ರ ವಿಧಾನಸಭೆಯ ಸಭಾಪತಿ (ಸ್ಪೀಕರ್) ರಾಹುಲ್ ಸುರೇಶ್ ನಾರ್ವೇಕರ್ ಭೇಟಿ ನೀಡಿ ಇಲ್ಲಿ ಪ್ರತಿಷ್ಠಾಪಿಸಿ ಆರಾಧಿಸಲ್ಪಟ್ಟ ಮಾತೆಗೆ ನಮಿಸಿದ್ದು, ಮಂಡಳಿಯ ಗೌರವಾಧ್ಯಕ್ಷ ಜಯರಾಮ ಬಿ.ಶೆಟ್ಟಿ ಇನ್ನ, ಅಧ್ಯಕ್ಷ ಹರೀಶ್ ಎಸ್.ಖೇಡೇಕರ್, ಉಪಾಧ್ಯಕ್ಷ ನವೀನ್ ಕೆ.ಶೆಟ್ಟಿ ಮತ್ತು ಪದಾಧಿಕಾರಿಗಳು ಶಾಲು ಹೊದಿಸಿ ಪೂಜಾ ಪ್ರಸಾದವನ್ನಿತ್ತು ಭಕ್ತಿಪೂರ್ವಕವಾಗಿ ಗೌರವಿಸಿದರು.
ಶ್ರದ್ಧಾಭಕ್ತಿ ಹಾಗೂ ಸಂಭ್ರಮೋಲ್ಲಾಸದಿಂದ ನೆರವೇರಿಸಲ್ಪಟ್ಟ ವಾರ್ಷಿಕ ಪೂಜೆಯಲ್ಲಿ ಮಂಡಳಿಯ ಗೌ| ಪ್ರ| ಕಾರ್ಯದರ್ಶಿ ಸುರೇಶ್ ಶೆಟ್ಟಿ, ಕೋಶಾಧಿಕಾರಿ ಮಾಣಿಕ್ಯ ಕೋಟ್ಯಾನ್, ಜೊತೆ ಕಾರ್ಯದರ್ಶಿಗಳಾದ ಚಂದ್ರ ಮೋಗವೀರ, ಯೋಗೇಶ್ ಪುತ್ರನ್, ಮಾಧವ ಮೋಗವೀರ, ಯೋಗೇಶ್ ಬಂಗೇರ, ಮುಖ್ಯ ಸಲಹೆಗಾರ ವಿಠ್ಠಲ್ ಶೇರಿಗಾರ್ ಕಟಪಾಡಿ, ಶ್ರೀ ದುರ್ಗಾಂಬಿಕಾ ಭಜನಾ ಮಂಡಳಿಯ ಸದಸ್ಯರು ಸೇರಿದಂತೆ ನಗರದ ನೂರಾರು ಗಣ್ಯರು, ಭಕ್ತರು ವಾರ್ಷಿಕ ದಸರೋತ್ಸವದಲ್ಲಿ ಪಾಲ್ಗೊಂಡ ಶ್ರೀ ದುರ್ಗಾಂಬಿಕೆ ಅಮ್ಮ, ಶ್ರೀ ಮಹಾಕಾಳಿ ಹಾಗೂ ಶ್ರೀ ಅಣ್ಣಪ್ಪ ಪಂಜುರ್ಲಿ ದೈವದ ಕೃಪೆಗೆ ಪಾತ್ರರಾದರು.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.