Skip to main content
www.kallianpur.com | Email : kallianpur7@gmail.com | Mob : 9741001849

ವಿದ್ಯಾರ್ಥಿ ಪೋಷಕರಿಗೆ ಪ್ರೇರಣಾ ಕಾರ್ಯಕ್ರಮ – ಡಾ.ಟಿ.ಎಂ.ಎ.ಪೈ ಪ್ರೌಢಶಾಲೆ,ಕಲ್ಯಾಣಪುರ.

By March 4, 2023Kannada News

kallianpurdotcom : 04/03/2023

ಉಡುಪಿ: ಕಲ್ಯಾಣಪುರದ ಡಾ.ಟಿ.ಎಂ.ಎ.ಪೈ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿ ಗಳಿಗೆ ಹಾಗೂ ಪೋಷಕರಿಗೆ ಪರೀಕ್ಷಾ ತಯಾರಿ ಹಾಗೂ ಇನ್ನಿತರ ವಿಷಯ ಗಳ ಕುರಿತು ಪ್ರೇರಣಾ ಕಾರ್ಯಕ್ರಮವನ್ನು ದಿ. ೨೫.೦೨.೨೦೨೩ ರಂದು  ಏರ್ಪಡಿಸ ಲಾಗಿತ್ತು.

ರಾಷ್ಟ್ರಪ್ರಶಸ್ತಿ ವಿಜೇತ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಕುದಿ ವಸಂತ ಶೆಟ್ಟಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಪ್ರೇರಣಾ ಕಾರ್ಯಕ್ರಮ ನಡೆಸಿಕೊಟ್ಟರು. ಅವರು ವಿದ್ಯಾರ್ಥಿ ಪೋಷಕರ ಆಪ್ತ ಸಂಬಂಧ, ಗುರುಗಳೊಂದಿಗೆ ಗೌರವ, ಪ್ರಕೃತಿಯನ್ನು ವಿಕೃತಗೊಳಿಸದ ಮನಸ್ಸು, ಮನಸ್ಸು ವಿಚಲಿತಗೊಳಿಸುವ ಸಾಧನಗಳಾದ ಮೊಬೈಲ್, ದೇಹ ಹಾಗೂ ಮನಸ್ಸಿನ ಮೇಲೆ ಪರಿಣಾಮ ಬೀರುವ ಆಹಾರ ಹಾಗೂ ಪಾನೀಯಗಳ ಬಳಸುವಿಕೆ ಇತ್ಯಾದಿಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು.

ಮಕ್ಕಳೊಂದಿಗೆ ಕನಿಷ್ಠ ಒಂದು ಗಂಟೆಯಾದರೂ ಮಾತು ಕತೆ, ಕಾಲಕಾಲಕ್ಕೆ ಮನೆಯಲ್ಲೇ ತಯಾರಿಸಿದ ಆಹಾರ ಮಕ್ಕಳಿಗಾಗಿ ಸ್ವಲ್ಪ ಮಟ್ಟಿನ ತ್ಯಾಗ ಇತರರೊಂದಿಗೆ ಹೋಲಿಕೆ ಮಾಡದಿರುವಿಕೆ, ತಮ್ಮ ಜೀವನದ ದಿನಗಳ ಕುರಿತು ಉದಾಹರಣೆ ನೀಡಿ ಅವರಲ್ಲಿ ಎಚ್ಚರಿಕೆ ಮೂಡಿಸುವಂತೆ ಪೋಷಕರಿಗೆ ಹೇಳಿದರು. ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಕನಿಷ್ಟ ೫ ಗಂಟೆ ಓದುವಿಕೆ, ಬ್ರಾಹ್ಮಿ ಮುಹೂರ್ತ (ಬೆಳಗ್ಗಿನ) ಓದುವಿಕೆ ,ಓದಿನ ನಡುವೆ ಅಂತರ, ನಿರ್ದಿಷ್ಟ ಸ್ಥಳ ಹಾಗೂ ಭಂಗಿ, ಧ್ಯಾನ, ದೇವರಲ್ಲಿ ನಂಬಿಕೆ ಇಟ್ಟು ಓದಿ ಬರುವ ಪರೀಕ್ಷೆಯನ್ನು ಚೆನ್ನಾಗಿ ಎದುರಿಸುವಂತೆ ಸಲಹೆ ನೀಡಿದರು.

ಶಾಲಾಡಳಿತಾಧಿಕಾರಿಯಾಗಿರುವ  ಶ್ರೀ ಶೇಕರ್ ಪಿ.ಪ್ರಸ್ತಾವನೆ ಯೊಂದಿಗೆ ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಪೋಷಕ ರಿಗೆ ಇಂತಹ ಕಾರ್ಯಕ್ರಮದ ಅಗತ್ಯತೆಯನ್ನು ತಿಳಿಸಿದರು. ಶಾಲಾ ರಕ್ಷಕ- ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಕೆ. ಮಾಧವ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುರೇಖ ಸ್ವಾಗತಿಸಿ ಶಿಕ್ಷಕ ಶ್ರೀ ಹೆಚ್. ಎನ್. ವೆಂಕಟೇಶ್ ವಂದಿಸಿದರು. ಶ್ರೀ ಸತ್ಯಶಂಕರ್ ಭಟ್ ಕಾರ್ಯಕ್ರಮ ಸಂಯೋಜಿಸಿದ್ದರು. ಶಾಲಾ ಸಿಬ್ಬಂದಿ ವರ್ಗ ವಿದ್ಯಾರ್ಥಿಗಳೆಲ್ಲರೂ ಉಪಸ್ಥಿತರಿದ್ದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.