Skip to main content
www.kallianpur.com | Email : kallianpur7@gmail.com | Mob : 9741001849

ತೋನ್ಸೆ ಶ್ರೀ ಬ್ರಹ್ಮಬೈದರ್ಕಳ ಪಂಚ ಧೂಮಾವತಿ ಗರೋಡಿ ಟ್ರಸ್ಟ್ನ ಪಂಚಮ ವಾರ್ಷಿಕ ಮಹಾಸಭೆ ಸೇವೆಯಿಂದ ಸಾರ್ಥಕ ಜೀವನ ಪಾವನಗೊಳಿಸೋಣ: ನಿತ್ಯಾನಂದ ಡಿ.ಕೋಟ್ಯಾನ್.

By August 21, 2023Kannada News
kallianpurdotcom: 21/08/23
(ಚಿತ್ರ/ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಆ.೨೦: ಉಡುಪಿ ಜಿಲ್ಲೆಯ ಕಲ್ಯಾಣ್ಫುರ ಮೂಡುತೋನ್ಸೆ ಇಲ್ಲಿನ ಬ್ರಹ್ಮಶ್ರೀ ಬೈದರ್ಕಳ ಪಂಚ ಧೂಮವತೀ ಗರಡಿ ಇದರ ಸರ್ವೋನ್ನತಿಗಾಗಿ ಸೇವಾನಿರತ ತೋನ್ಸೆ ಶ್ರೀ ಬ್ರಹ್ಮಬೈದರ್ಕಳ ಪಂಚ ಧೂಮಾವತಿ ಗರೋಡಿ ಸೇವಾ ಟ್ರಸ್ಟ್ ಮುಂಬಯಿ ತನ್ನ ಐದನೇ ವಾರ್ಷಿಕ ಮಹಾಸಭೆಯನ್ನು ಇಂದಿಲ್ಲಿ ಭಾನುವಾರ ಸಾಂತಾಕ್ರೂಜ್ ಪೂರ್ವದ ಬಿಲ್ಲವರ ಭವನದ ಕಿರು ಸಭಾಗೃಹದಲ್ಲಿ ಸೇವಾ ಟ್ರಸ್ಟ್ನ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಅಧ್ಯಕ್ಷತೆಯಲ್ಲಿ ಜರುಗಿತು.

ನಿತ್ಯಾನಂದ ಕೋಟ್ಯಾನ್ ಅಧ್ಯಕ್ಷೀಯ ಭಾಷಣಗೈದು ಮಾನವ ಜೀವನ ಪವಿತ್ರ ಜೀವನ. ನಮ್ಮ ಜೀವನವನ್ನು ನಾವೇ ಸಾರ್ಥಕ ಮಾಡಬೇಕು. ತೋನ್ಸೆ ಗರೋಡಿ ಸೇವಾ ಟ್ರಸ್ಟ್ ಮುಂಬಯಿ ಸಮಿತಿ ಮುಖಾಂತರ ಸಿಕ್ಕಿರುವ ಅವಕಾಶವನ್ನು ಸದುಪಯೋಗಗೈದು ಯಾವುದೇ ವೈಮನಸ್ಸುಗಳಿಗೆ ಎಡೆ ಕೊಡದೆ ಮುಂದೆ ಸಾಗೋಣ. ಊರಿನ ಗರೋಡಿಯ ನವೀಕರಣದ ಸಂದರ್ಭ ಒದಗಿ ಬಂದರೆ ನಾವೆಲ್ಲ ಒಗ್ಗೂಡಿ ಅತ್ಮೀಯತೆ, ಶ್ರದ್ಧೆಯಿಂದ ಆ ಪುಣ್ಯ ಕಾರ್ಯದಲ್ಲಿ ಭಾಗಿಗಳಾಗೋಣ. ನಮ್ಮ ಮಹಿಳಾ ಸದಸ್ಯೆಯರಿಂದ ಉತ್ತಮ ಜನಪರ ಸೇವೆಗಳನ್ನು ಪ್ರಾರಂಭಿಸೋಣ. ಪುರಸ್ಕಾರವನ್ನು ಪಡೆದ ವಿದ್ಯಾರ್ಥಿಗಳು ಮುಂದೆ ಉತ್ತಮ ಉದ್ಯೋಗರಸ್ಥರು, ಸ್ವಉದ್ಯಮಿಗಳಾಗಿ ಟ್ರಸ್ಟ್ ಮುಖೇನ ಸೇವಾಕರ್ತರಾಗಲಿ ಎಂದು ಹಾರೈಸಿದರು. ಜೊತೆ ಕಾರ್ಯದರ್ಶಿ ಕರುಣಾಕರ್ ಬಿ.ಪೂಜಾರಿ ಗತಸಾಲಿನ ಮಹಾಸಭೆಯ ವರದಿ ವಾಚಿಸಿದರು. ಗೌ| ಪ್ರ| ಕೋಶಾಧಿಕಾರಿ ರವಿರಾಜ್ ಕಲ್ಯಾಣ್ಫುರ್ ಗತ ವಾರ್ಷಿಕ ಲೆಕ್ಕಪತ್ರಗಳನ್ನು ಮಂಡಿಸಿದರು.

ಸಭೆಯ ಮಧ್ಯಾಂತರದಲ್ಲಿ ಪರೀಕ್ಷೆಗಳಲ್ಲಿ ಶ್ರೇಷ್ಠ ಅಂಕಗಳೊಂದಿಗೆ ಉತ್ತೀರ್ಣರಾದ ಮಾ| ಆದಿ ಆರ್. ಪೂಜಾರಿ ಮತ್ತು ಕೃಷ್ ಅಮೀನ್ ಇವರನ್ನು ಟ್ರಸ್ಟ್ ಪರವಾಗಿ ಉಪಾಧ್ಯಕ್ಷರಾದ ಸಿ.ಕೆ ಪೂಜಾರಿ ಮತ್ತು ಡಿ.ಬಿ ಅಮೀನ್ ಪ್ರಮಾಣಪತ್ರ, ನಗದು ಬಹುಮಾನ ಪ್ರದಾನಿಸಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಪ್ರತೀಕ್ ಪೂಜಾರಿ ಇವರ ಶೈಕ್ಷಣಿಕ ದತ್ತು ಸ್ವೀಕಾರಿಸಲಾಯಿತು. ಆರ್ಥಿಕ ಅಶಕ್ತ ಚೈತ್ರ ಪೂಜಾರಿ ಮತ್ತು ತನುಶ್ರೀ ಪೂಜಾರಿ ಅವರಿಗೆ ವಿದ್ಯಾನಿಧಿ ನೀಡಲಾಯಿತು. ವಿಶ್ವನಾಥ ತೋನ್ಸೆ ಈ ಪ್ರತಿಭಾನ್ವಿತರ ಮಾಹಿತಿ ನೀಡಿದರು. ತಾಲೂಕು ಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಚಿನ್ನದ ಪದಕ ಗಳಿಸಿರುವ ಮಾ|ರಿತೇಶ್ ಪೂಜಾರಿ ಇವರಿಗೆ (ಪರವಾಗಿ ಸಂಜೀವ ಪೂಜಾರಿ) ಸನ್ಮಾನಿಸಲಾಯಿತು. ಅಂಗವಿಕಲರಾಗಿರುವ ನಿಡಂಬಳ್ಳಿಯ ನಿವಾಸಿ ಕೆ.ರಾಘವೇಂದ್ರ ಪೂಜಾರಿ ಅವರಿಗೆ ವೈದ್ಯಕೀಯ ನೆರವು ನೀಡಲಾಯಿತು.

ಸಭಿಕರಲ್ಲಿನ ಸುರೇಶ್ ಕೋಟ್ಯಾನ್ ಮತ್ತು ವಿ.ಸಿ ಪೂಜಾರಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಟ್ರಸ್ಟ್ ನ ಸೇವೆ ಪ್ರಶಂಸಿಸಿದರು. ಸಭೆಯಲ್ಲಿ ಜೊತೆ ಕೋಶಾಧಿಕಾರಿ ವಿಜಯ್ ಸನಿಲ್, ಕಾರ್ಯಕಾರಿ ಸಮಿತಿ ಸದಸ್ಯರಾದ ಅಶೋಕ್ ಎಂ.ಕೋಟ್ಯಾನ್, ಸುರೇಶ್ ಅಂಚನ್, ಸದಾನಂದ ಬಿ.ಪೂಜಾರಿ,ಉದಯ ಎನ್.ಪೂಜಾರಿ, ವಿ.ಸಿ ಸೋಮ ಸುವರ್ಣ, ಸಚಿನ್ ಎಸ್.ಪೂಜಾರಿ,ಸವೀತಾ ಕೋಟ್ಯಾನ್, ಭಾರತಿ ಸುವರ್ಣ, ಮೃದುಲಾ ಕೋಟ್ಯಾನ್ ಮತ್ತು ಸದಸ್ಯರು ಹಾಜರಿದ್ದು, ಶ್ರೀ ಬ್ರಹ್ಮ ಬೈದರ್ಕಳರಿಗೆ ಪ್ರಾರ್ಥನೆಗೈದು ಮಹಾಸಭೆಗೆ ಚಾಲನೆಯನ್ನಿತ್ತರು. ಸಂಜೀವ ಪೂಜಾರಿ ತೋನ್ಸೆ ಸ್ವಾಗತಿಸಿದರು. ಗತ ಸಾಲಿನಲ್ಲಿ ಅಗಲಿದ ಟ್ರಸ್ಟ್ನ ಹಿತೈಷಿ  ಹಾಗೂ ಕೊಡುಗೈದಾನಿಗಳಿಗೆ ಮೌನ ಪ್ರಾರ್ಥನೆಯೊಂದಿಗೆ ಸಂತಾಪ ಸಲ್ಲಿಸಲಾಯಿತು. ಉಪಾಧ್ಯಕ್ಷ ವಿಶ್ವನಾಥ ತೋನ್ಸೆ ವಂದನಾರ್ಪಣೆಗೈದರು.

2 Comments

  • Nithyanand kotian says:

    Thanks for the nice report

  • V C POOJARY, Mumbay 400053 says:

    WONDERFUL GATHERING, AMAZING PERFORMANCE OF THE PRESIDENT AND OTHER OFFICE BEARERS. ALL OF THEM AND OTHER MEMBERS DESERVE BLESSINGS OF THONSE VRAHMASHREE PANCHADOOMAVATTHI GARODI.

    CHEERS TO THE COMMITTEE😀🌹🌹🌹🌹

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.