Skip to main content
www.kallianpur.com | Email : kallianpur7@gmail.com | Mob : 9741001849

ತ್ರಿಶಾ ಪದವಿ ಪೂರ್ವ ಕಾಲೇಜು ಕಲ್ಯಾಣಪುರ ಇದರ ನೂತನ ಪ್ರಾಂಶುಪಾಲರಾಗಿ ರಾಮಕೃಷ್ಣ ಹೆಗಡೆ ಅಧಿಕಾರ ಸ್ವೀಕರಿಸಿದರು.

By April 15, 2024Kannada News
kallianpurdotcom: 9741001849

ಉಡುಪಿ: ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಶೈಕ್ಷಣಿಕ ಸಹಭಾಗಿತ್ವದ ಉಡುಪಿಯಲ್ಲಿ ಕಾರ್ಯಚರಿಸುತ್ತಿರುವ ತ್ರಿಶಾ ಪದವಿ ಪೂರ್ವ ಕಾಲೇಜು ಕಲ್ಯಾಣಪುರ ಇದರ ನೂತನ ಪ್ರಾಂಶುಪಾಲರಾಗಿ ರಾಮಕೃಷ್ಣ ಹೆಗಡೆ ಅಧಿಕಾರ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಉಪ ಪ್ರಾಂಶುಪಾಲರಾಗಿ ಜೋಯಲ್ ಮನೋಜ್ ಫೆರ್ನಾಂಡಿಸ್ ಹಾಗೂ ಆಡಳಿತ ಅಧಿಕಾರಿ ಗಳಾಗಿ ಜಯಪ್ರಕಾಶ್ ಶೆಟ್ಟಿ ನೇಮಕಗೊಳಿಸಲಾಯಿತು. ಕ್ರಿಯೇಟಿವ್ನ ಸಂಸ್ಥಾಪಕರಾದ ಡಾ.ಗಣನಾಥ್‌ ಶೆಟ್ಟಿ,ಅಶ್ವತ್‌ ಎಸ್‌ ಎಲ್‌ ಮತ್ತು ಅಮೃತ್‌ ರೈ ರವರ ಮೂಲಕ ಅಧಿಕಾರ ಹಸ್ತಾಂತರಿಸಿ ಪ್ರಾಂಶು ಪಾಲರಾಗಿ ನಿಯಕ್ತಿ ಗೊಂಡಿರುವ ರಾಮಕೃಷ್ಣ ಹೆಗಡೆ ಯವರ ಅನುಭವ ಸಂಸ್ಥೆಯ ಏಳಿಗೆಯಲ್ಲಿ ಮಹತ್ತರ ಪಾತ್ರ ವಹಿಸಲಿ, ಮತ್ತು ಉಪ ಪ್ರಾಂಶುಪಾಲ ರಾಗಿ ನಿಯೋಜನೆ ಗೊಂಡಿರುವ ಭೌತಶಾಸ್ತ್ರ ಉಪನ್ಯಾಸಕರೂ ಆಗಿರುವ ಜೋಯಲ್ ಮನೋಜ್ ಫೆರ್ನಾಂಡಿಸ್ ಅವರ ಶೈಕ್ಷಣಿಕ ಅನುಭವದೊಂದಿಗೆ ಹೆಚ್ಚಿನ ಪ್ರಗತಿ ಸಾಧಿಸಲಿ ಎಂದು ಆಶಿಸಿದರು.

ಆಡಳಿತ ಅಧಿಕಾರಿಯಾಗಿ ನೇಮಕವಾಗಿರುವ ಜಯಪ್ರಕಾಶ್ ಶೆಟ್ಟಿ, ಮುಖ್ಯೋಪಾಧ್ಯಾಯರಾಗಿ ಅನೇಕ ವರ್ಷಗಳ ಅನುಭವ ಹೊಂದಿರುವ ಸಮರ್ಥ ವ್ಯಕ್ತಿ, ಅವರ ಮೂಲಕ ಕಾಲೇಜಿನ ಮತ್ತು ವಸತಿ ನಿಲಯಗಳ ಕಾರ್ಯ ಚಟುವಟಿಕೆ ಗಳನ್ನು ನಿರ್ವಹಿಸಲು ಅನುಕೂಲ ಕರವಾಗಿದೆ.

ಈ ಸಂದರ್ಭದಲ್ಲಿ ತ್ರಿಶಾ ಪದವಿ ಪೂರ್ವ ಕಾಲೇಜಿನ ಉಪ ನ್ಯಾಸಕ ವರ್ಗ, ಪಿಆರ್ಓ ಲಿಶಾನ್ ಗೌಡ ಬೋಧಕೇತರ ವೃಂದದವರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.