Skip to main content
www.kallianpur.com | Email : kallianpur7@gmail.com | Mob : 9741001849

ಇಪ್ಪತ್ತ ಆರನೇ ವಾರ್ಷಿಕೋತ್ಸವ ಸಂಭ್ರಮಿಸಿದ ಗಾಣಿಗ ಸಮಾಜ ಮುಂಬಯಿ ಗಾಣಿಗ ಸಮಾಜ ಲೋಕಕ್ಕೆ ಬೆಳಕ ಕೊಟ್ಟಿದೆ : ಶ್ರೀನಿವಾಸ ಪಿ.ಸಾಫಲ್ಯ.

By October 2, 2023Mumbai News
kallianpurdotcom: 02/10/23
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಸೆ.೩೦: ಗಾಣಿಗರದ್ದು ಬಹಳ ಸಣ್ಣ ಸಮಾಜ ಹೌದಾದರೂ ಇದು ಸಣ್ಣದಲ್ಲ. ಮಾಣಿಕ್ಯ ಬಹಳ ಸಣ್ಣದಿರುತ್ತದೆ ಆದರೆ ಅದರ ಮೌಲ್ಯ ಬಹಳ ದೊಡ್ಡದಾಗಿರುತ್ತದೆ. ಚಿಕ್ಕ ಸಂಸಾರ ಎಷ್ಟು ಅಚ್ಚುಕಟ್ಟಾಗಿರುತ್ತದೆ ಎಂಬಂತೆ ಗಾಣಿಗರ ಚೊಕ್ಕ ಸಮಾಜ ಎಷ್ಟರ ಮಟ್ಟಿಗೆ ಬೆಳೆಯುತ್ತಿದೆ ಅನ್ನೋದಕ್ಕೆ ಈ ಉತ್ಸವ ಎತ್ತಿ ತೋರಿಸುತ್ತದೆ. ಮನುಕುಲಕ್ಕೆ ಸಮಾಜದಲ್ಲಿ ಅಂಕಿಅಂಶ ಮುಖ್ಯವಲ್ಲ ಸಮಾಜದಲ್ಲಿನ ಒಟ್ಟು ಗೌರವ ಮುಖ್ಯವಾಗಿದೆ. ಇಂತಹ ಗಾಣಿಗ ಸಮಾಜವು ಲೋಕಕ್ಕೆ ಬೆಳಕನ್ನು ಕೊಟ್ಟಿದೆ. ಅಧ್ಯಾತ್ಮಿಕ ದೃಷ್ಣಿಯಂತೆ ಸೂರ್ಯನಾರಾಯಣ ದೇವರು ಲೋಕಕ್ಕೆ ಬೆಳಕು ಕೊಡುತ್ತಾರೆ. ಆದರೆ ಅದೇ ಸೂರ್ಯನಾರಾಯಣ ದೇವಸ್ಥಾನದಲ್ಲಿ ದೀಪ ಬೆಳಗಾಬೇಕಾದರೆ ಗಾಣಿಗ ಎಣ್ಣೆ ಕೊಡಬೇಕು. ಆದುದರಿಂದ ಗಾಣಿಗರು ಜಗತ್ತಿಗೆ ಶ್ರೇಷ್ಠರು ಸಾಫಲ್ಯ ಸೇವಾ ಸಂಘ ಮುಂಬಯಿ ಅಧ್ಯಕ್ಷ ಶ್ರೀನಿವಾಸ ಪಿ.ಸಾಫಲ್ಯ ತಿಳಿಸಿದರು.

ಇಂದಿಲ್ಲಿ ಭಾನುವಾರ ಪೂರ್ವಾಹ್ನ ಸಯನ್ ಇಲ್ಲಿನ ಗೋಕುಲದ ಸರಸ್ವತಿ ಸಭಾಗೃಹದಲ್ಲಿ ಗಾಣಿಗ ಸಮಾಜ ಮುಂಬಯಿ (ರಿ.) ತನ್ನ ೨೬ನೇ ವಾರ್ಷಿಕೋತ್ಸವ ಸಂಭ್ರಮಿಸಿದ್ದು ಸಮಾರಂಭದಲ್ಲಿ ಪ್ರಧಾನ ಭಾಷಣಗೈದು ಶ್ರೀನಿವಾಸ ಸಾಫಲ್ಯ ಮತನಾಡಿದರು.

ಗಾಣಿಗ ಸಮಾಜ ಮುಂಬಯಿ ಅಧ್ಯಕ್ಷ ಬಿ.ವಿ ರಾವ್ (ಬೈಕಾಡಿ ವಾಸುದೇವ ರಾವ್) ಅಧ್ಯಕ್ಷತೆಯಲ್ಲಿ ದಿನಪೂರ್ತಿ ಯಾಗಿಸಿ ಧಾರ್ಮಿಕ, ಸಾಂಸ್ಕ್ರತಿಕ, ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಜರುಗಿಸಲ್ಪಟ್ಟ ಕಾರ್ಯಕ್ರಮಕ್ಕೆ ಸೋಮಕ್ಷತ್ರಿಯ ಗಾಣಿಗ ಸಮಾಜ ಬೆಂಗಳೂರು ಅಧ್ಯಕ್ಷ ಹೆಚ್.ಟಿ ನರಸಿಂಹ ದೀಪ ಬೆಳಗಿಸಿ ಚಲನೆಯನ್ನಿತ್ತರು. ಬಿಎಸ್‌ಕೆಬಿಎ ಉಪಾಧ್ಯಕ್ಷ ವಾಮನ್ ಹೊಳ್ಳಾ, ಸೋಮಕ್ಷತ್ರಿಯ ಗಾಣಿಗ ಸಮಾಜ ಬಾರ್ಕೂರು ಉಡುಪಿ ಅಧ್ಯಕ್ಷ ಸೂರ್ಯನಾರಾಯಣ ಗಾಣಿಗ ಗೌರವ ಅತಿಥಿಗಳಾಗಿದ್ದು ಜಿಎಸ್‌ಎಂ ಗೌರವಾಧ್ಯಕ್ಷ ಕುತ್ಪಾಡಿ  ರಾಮಚಂದ್ರ ಎಂ.ಗಾಣಿಗ, ಉಪಾಧ್ಯಕ್ಷ ವಿಜಯೇಂದ್ರ ಗಾಣಿಗ, ಗೌ| ಕಾರ್ಯದರ್ಶಿ ಚಂದ್ರಶೇಖರ್ ಆರ್.ಗಾಣಿಗ, ಮಹಿಳಾಧ್ಯಕ್ಷೆ ತಾರಾ ಭಟ್ಕಳ್ ಮತ್ತು ಸದಾನಂದ ಎ.ಕಲ್ಯಾಣ್ಪುರ್ ವೇದಿಕೆಯಲ್ಲಿ ಆಸೀನರಾಗಿದ್ದರು.

ಜಿಎಸ್‌ಎಂ ಯುವ ವಿಭಾಗಧ್ಯಕ್ಷ ಗಣೇಶ್ ಕುತ್ಪಾಡಿ ಉಪಸ್ಥಿತರಿದ್ದು ಸಂಸ್ಥೆಗೆ ಅಪ್ರತಿಮ ಸೇವೆಗೈದ ಸದಾನಂದ ಎ.ಕಲ್ಯಾಣ್ಪುರ್ (ಪತ್ನಿ÷ಪೂರ್ಣಿಮಾ ಸದಾನಂದ್) ಮತ್ತು ಚಂದ್ರಶೇಖರ್ ಆರ್.ಗಾಣಿಗ (ಪತ್ನಿ ಶಕುಂತಳಾ ಚಂದ್ರಶೇಖರ್ ಜೊತೆಗೂಡಿ) ಧಾರ್ಮಿಕ, ಸಾಮಾಜಿಕ ವಾಗಿ ಅಸದೃಶ ಸೇವೆಗೈದ ಶ್ರೀನಿವಾಸ ಪಿ.ಸಾಫಲ್ಯ (ಪತ್ನಿ ರತಿಕಾ ಶ್ರೀನಿವಾಸ್) ಅವರನ್ನು ಗಣ್ಯರು ಸನ್ಮಾನಿಸಿ  ಅಭಿನಂದಿಸಿದರು. ಬಳಿಕ ಗಾಣಿಗ ಸಮಾಜದ ವಿವಿಧ ಮಕ್ಕಳಿಗೆ ವಿದ್ಯೋದಯ ಸಮಿತಿಯ ವಾರ್ಷಿಕ ವಿದ್ಯಾರ್ಥಿ ವೇತನವನ್ನು ಎಸ್‌ಎಸ್‌ಸಿ ಮತ್ತು ಹೆಚ್‌ಎಸ್‌ಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹಾಗೂ ಆರ್ಥಿಕ ಆಶಕ್ತ ಮಕ್ಕಳಿಗೆ ವಿದ್ಯಾನಿಧಿ ಹಸ್ತಾಂತರಿಸಿದ್ದು ಶ್ರೀನಿವಾಸ್ ಗಾಣಿಗ ಮತ್ತು ಶೀಲಾ ಶ್ರೀನಿವಾಸ್ ಅವರು ಶಾಲಾ ಪರಿಕರಗಳನ್ನಿತ್ತು ಮಕ್ಕಳನ್ನು ಪ್ರೋತ್ಸಾಹಿಸಿ ಶುಭಾರೈಸಿದರು. ಪ್ರದಾನಿಸಿ ಶುಭಾರೈಸಿದರು.

ಸೇವೆಯ ೨೬ರ ಹರೆಯದ ಸಾಧನೆ ಒಂದು ಮೈಲುಗಲ್ಲು ಆಗಿದೆ. ಸಣ್ಣ ಸಮುದಾಯದ ದೊಡ್ಡ ಸಾಧನೆ ನಿಮ್ಮದಾಗಿದೆ. ಸೇವೆಯಲ್ಲೂ ನಾಗರೀಕ ಮತ್ತು ಸಮಾಜ ಸೇವೆ ಪ್ರಥಮ ಜವಾಬ್ದಾರಿ ಆಗಬೇಕು. ಸರ್ವ ಸದಸ್ಯರ ಒಗ್ಗೂಡುವಿಕೆ, ಶ್ರಮದಿಂದ ಮಾತ್ರ ಸಾಧನೆ ಸಾಧ್ಯವಾಗುವುದು ಇದು ಆರೋಗ್ಯದಾಯಕ ಸಮಾಜಕ್ಕೆ ಕಾರಣಿಭೂತವಾಗುತ್ತದೆ ಎಂದು ವಾಮನ್ ಹೊಳ್ಳಾ ತಿಳಿಸಿದರು.

ಸೂರ್ಯನಾರಾಯಣ ಮಾತನಾಡಿ ಕರ್ಮಭೂಮಿಯಲ್ಲಿ ಗಾಣಿಗರ ಸೇವಾ ಸ್ಪಂದನೆ ಕಂಡು ಸಂತೋಷವಾಗುತ್ತಿದೆ. ಇಂತಹ ಸಂಸ್ಥೆ ನೂರ್ಕಾಲ ಬಾಳಲಿ. ನಮ್ಮಲ್ಲಿ ಉಡುಪಿ ಮಂಗಳೂರು ಗಾಣಿಗರು ಎಂಬ ಬೇಧ ಸಲ್ಲದು. ಮುಂದೆ ಸಂಯುಕ್ತವಾಗಿ ಸೇವೆಗೈದು ಪಾವಣರಾಗೋಣ ಎಂದು ಹಾರೈಸಿದರು. ಸರಳ ಸ್ವಾಭಾವವುಳ್ಳ ಗಾಣಿಗರು ಪಂಡಿತ ಪರಿಣತರು. ನಮ್ಮಲ್ಲಿನ ಪ್ರತಿಭೆಗಳನ್ನು ಪ್ರೊತ್ಸಾಹಿಸಿ ಯುವ ಜನಾಂಗವನ್ನು ಪ್ರೇರೆಪಿಸಬೇಕು. ಆವಾಗ ತನ್ನಷ್ಟಕ್ಕೆ ಸಮಾಜ ನೆಲೆಯಾಗುತ್ತದೆ ಎಂದು ಹೆಚ್.ನರಸಿಂಹ ನುಡಿದರು. ರಾಮಚಂದ್ರ ಗಾಣಿಗ ಮಾತನಾಡಿ ಮುಂಬಯಿನಲ್ಲಿ ನಮ್ಮ ಸಮಾಜವನ್ನು ನಮ್ಮ ಅಸ್ತಿತ್ವವನ್ನು ಗಟ್ಟಿಗೊಳಿಸಲು ಎಲ್ಲಾ ಯುವಕರು ಭವಿಷ್ಯದಲ್ಲಿ ಸಮಾಜದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಕೇಳಿಕೊಂಡರು.

ಸಾವಿರಾರು ವರ್ಷಗಳ ಇತಿಹಾಸವುಳ್ಳ ಗಾಣಿಗರು ವಿಶಾಲ ಮನಸ್ಸುಳ್ಳವರು. ಒಂದು ಕಾಲಕ್ಕೆ ಘಾನಾ ವೃತ್ತಿ ಪರಂಪರಗತವಾಗಿಸಿದ್ದ ನಾವು ಸದ್ಯ ಜಗದುದ್ದಕ್ಕೂ ಪಸರಿಸಿ ತಮ್ಮ ಅಸ್ಮಿತೆಯನ್ನು ಜಗಕ್ಕೆ ಪರಿಚಯಿಸಿರುವುದು ಅಭಿನಂದನೀಯ. ಕುಲವೃತ್ತಿ ತ್ಯಜಿಸಿ ಉದ್ಯಮಶೀಲರಾಗಿ ಬದುಕು ಕಟ್ಟಿಕೊಳ್ಳುವುದು ಅನಿವಾರ್ಯವಾದರೂ ಸಮುದಾಯವನ್ನು ಮುನ್ನಡೆಸಲು ಹೊಣೆಗಾರಿಕೆ ಹೆಚ್ಚಿದೆ. ಮುಂದಕ್ಕೂ ಗಾಣಿಗರ ಅಡಿಪಾಯ ಬಲಿಷ್ಠವಾಗಿಸಬೇಕು. ಸಮಾಜಮುಖಿ ಸೇವೆಯಲ್ಲಿ ತೊಡಗಿಸಿ ಒಳ್ಳೆಯ ನೆಲೆ ಕಟ್ಟಿಕೊಂಡು ಸಮುದಾಯದ ಋಣ ಪೂರೈಸೋಣ ಎಂದು ಅಧ್ಯಕ್ಷೀಯ ಭಾಷಣದಲ್ಲಿ ಬಿ.ವಿ ರಾವ್ ತಿಳಿಸಿದರು.

ಉದಯಕುಮಾರ್ ಉಡುಪಿ (ಕೆನರಾ ಐಸ್), ರತ್ನಾಕರ್ ಶೆಟ್ಟಿ (ವಿಶಾಂಗ್ ಇನ್ನ್), ಗೋಪಾಲ ಗಾಣಿಗ (೪ಜಿ), ಪ್ರೇಮಾ ಎಸ್.ರಾವ್ ಮುಂತಾದ ಗಣ್ಯರು, ಜಿಎಸ್‌ಎಂ ಜೊತೆ ಕಾರ್ಯದರ್ಶಿ ಜಗದೀಶ್ ಗಾಣಿಗ, ವಿದ್ಯೋದಯ ಸಮಿತಿ ಕಾರ್ಯಾಧ್ಯಕ್ಷ ಬಾಲಕೃಷ್ಣ ಗಾಣಿಗ ತೋನ್ಸೆ, ವಿನಾಯಕ ಭಟ್ಕಳ್ ಸೇರಿದಂತೆ ಸದಸ್ಯರನೇಕರು ಹಾಜರಿದ್ದರು. ಮಹಿಳಾ ವೃಂದವು ಪ್ರಾರ್ಥನೆಯನ್ನಾಡಿದರು. ಯು.ಬಾಲಚಂದ್ರ ರಾವ್ ಕಟಪಾಡಿ ಸ್ವಾಗತಿಸಿದರು. ವಿಜಯೇಂದ್ರ ಗಾಣಿಗ ಪ್ರಸ್ತಾವಿಕ ನುಡಿಗಳನ್ನಾಡಿದರು. ಬಿ.ವಿ ರಾವ್, ದಿನೇಶ್ ಗಾಣಿಗ, ಗಣೀಶ್ ಆರ್.ಕುತ್ಪಾಡಿ, ಜಗದೀಶ್ ಗಾಣಿಗ, ವೀಣಾ ದಿನೇಶ್ ಗಾಣಿಗ ಮತ್ತಿತರರು ಅತಿಥಿಗಳಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು. ಮಮತಾ ಡಿ.ರಾವ್ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಗಣೇಶ್ ಕುತ್ಪಾಡಿ ವಂದಿಸಿದರು.

ಆರಂಭದಲ್ಲಿ ಕುಲದೇವರಾದ ಶ್ರೀ ಗೋಪಲಕೃಷ್ಣ ದೇವರಿಗೆ ಸ್ತುತಿಸಿ, ಸಂಸ್ಥೆಯ ಪದಾಧಿಕಾರಿಗಳು ಮತ್ತು ಅತಿಥಿಗಣ್ಯರನ್ನೊಳಗೊಂಡು ಸಮಾಜದ ಹಿರಿಯ ಮುತ್ಸದ್ಧಿ ದೀಪ ಬೆಳಗಿಸಿ ಸಾಂಸ್ಕ್ರತಿಕ ಕಾರ್ಯಕ್ರಮಕ್ಕೆ ಚಲನೆಯನ್ನಿತ್ತರು. ಗಾಣಿಗ ಸಮಾಜದ ಸದಸ್ಯರು, ಮಕ್ಕಳು ವಾದ್ಯ ಸಂಗೀತ, ಪ್ರತಿಭಾ ಪ್ರದರ್ಶನ, ವೈವಿಧ್ಯಮಯ ನೃತ್ಯಾವಳಿಗಳು, ಭರತನಾಟ್ಯಂ ಸೇರಿದಂತೆ ವಿವಿಧ ವಿನೋದಾವಳಿ, ಮನೋರಂಜನಾ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದರು. ಸಾಂಸ್ಕ್ರತಿಕ ವೈಭವ ಪ್ರಸ್ತುತ ಪಡಿಸಿದ ಎಲ್ಲರನ್ನೂ ಸಮಾರೋಪದಲ್ಲಿ ಉಪಸ್ಥಿತ ಗಣ್ಯರು, ಅಧ್ಯಕ್ಷ ಬಿ.ವಿ ರಾವ್ ಮತ್ತು ಪದಾಧಿಕಾರಿಗಳು ಸ್ಮರಣಿಕೆಗಳನ್ನಿತ್ತು ಸತ್ಕರಿಸಿದರು. ದೇವೇಂದ್ರ ರಾವ್ ಸಾಂಸ್ಕ್ರತಿಕ ಕಾರ್ಯಕ್ರಮ ನಿರೂಪಿಸಿದರು.

ಸಾಯಂಕಾಲ ಆಗಮಿಸಿದ್ದ ಊರಪರವೂರ ಗಣ್ಯರೊಂದಿಗೆ ಕುಶಲೋಪರಿ ಸಂವಾದ, ಗೋಕುಲದ ಸರಸ್ವತಿ ಸಭಾಗೃಹದಲ್ಲಿ ಗೋಕುಲದ ಗೋಕುಲದ ಆರ್ಚಕ ಗಣೇಶ್ ಭಟ್ ಮಹಾಪೂಜೆ ನೆರವೇರಿಸಿ ತೀರ್ಥ ಪ್ರಸಾದ ವಿತರಿಸಿ ಹರಸಿದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.