
kallianpurdotcom: Mob 9741001849
ವರದಿ: ಆಲ್ವಿನ್ ದಾಂತಿ, ಶಿಕ್ಷಕರು
ಸಂತೆಕಟ್ಟೆ: ವೈಜ್ಞಾನಿಕ ಮನೋಭಾವವನ್ನು ಎಳವೆಯಲ್ಲಿಯೇ ಬೆಳೆಸಬೇಕು. ಇಂದು ಬದುಕಿನ ಎಲ್ಲ ಸ್ತರಗಳಲ್ಲಿ ಆರೋಗ್ಯ, ಶಿಕ್ಷಣ, ಕ್ರೀಡೆ, ಆಡಳಿತ, ಆಧ್ಯಾತ್ಮದಲ್ಲೂ ವಿಜ್ಞಾನದ ಬಳಕೆಯಿದೆ. ಪ್ರತಿಯೊಂದು ನಂಬಿಕೆಯಲ್ಲೂ ವೈಜ್ಞಾನಿಕ ಸತ್ಯ ಅಡಗಿದೆ. ಈ ಸತ್ಯವನ್ನು ತಿಳಿಯಬೇಕು. ಹೊಸ ಯೋಚನೆಗಳು ಹೊಸ ಆವಿಷ್ಕಾರಗಳಿಗೆ ಸಾಕ್ಷಿಯಾಗುತ್ತದೆ ಎಂದು ಮೌಂಟ್ ರೋಸರಿ ಚರ್ಚಿನ ಸಹಾಯಕ ಧರ್ಮಗುರು ಫಾ| ರೋಹನ್ ಮಸ್ಕರೇನ್ಹಸ್ ಹೇಳಿದರು.
ಅವರು ಸಂತೆಕಟ್ಟೆ ಮೌಂಟ್ ರೋಸರಿ ಆಂಗ್ಲ ಶಾಲೆಯಲ್ಲಿ ವಿಜ್ಞಾನ ಮಾದರಿಗಳ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ಒಂದು ಹಾಗು ಎರಡನೇ ತರಗತಿಯವರಿಗೆ ಕಸದಿಂದ ರಸ ವಸ್ತುಗಳ ಪ್ರದರ್ಶನವಿತ್ತು. ಮೂರನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ವಿದ್ಯಾರ್ಥಿಗಳು ಹೊಸ ಹೊಸ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಿ ಅವುಗಳ ನಿರ್ವಹಣೆಯ ಬಗ್ಗೆ ಸವಿವರವನ್ನು ಕೇಳುಗರಿಗೆ ನೀಡಿದರು. ವಿದ್ಯುತ್ ಉಳಿತಾಯ, ಸಾರಿಗೆ ಸಿಗ್ನಲ್, ನೀರಿನ ಮಿತ ಬಳಕೆ ಮಾದರಿಗಳು ನೋಡುಗರನ್ನು ಆಕರ್ಷಿಸಿದವು. ಮಿಲಾಗ್ರಿಸ್ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ಲೋಯ್‌ಲೀಟಾ ಡಿ’ಸೋಜ, ಮಿಲಾಗ್ರಿಸ್ ಪ್ರೌಢಶಾಲಾ ವಿಜ್ಞಾನ ಶಿಕ್ಷಕ ನೆಲ್ಸನ್ ಡಿ’ಸೋಜ, ಶಾಲಾ ಹಳೇ ವಿದ್ಯಾರ್ಥಿ ಆಯುರ್ವೇದ ವೈದ್ಯಕೀಯ ವಿದ್ಯಾರ್ಥಿ ಸಂಜನಾ ಮುಖ್ಯ ತೀರ್ಪುಗಾರರಾಗಿ ಭಾಗವಹಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಲಾ ಮುಖ್ಯ ಶಿಕ್ಷಕಿ ಸಿ| ಆನ್ಸಿಲ್ಲಾ ಡಿ’ಮೆಲ್ಲೊ ವಿದ್ಯಾರ್ಥಿಗಳ ವಿವರಣಾ ಶೈಲಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿಜ್ಞಾನ ಶಿಕ್ಷಕಿಯರಾದ ಲವೀನಾ, ಸಾರಾ, ಸೌಜನ್ಯಾ, ಮಿಲನಾ, ದಿವ್ಯಜ್ಯೋತಿ, ಮಮತಾ, ಚೈತ್ರಾ ಮತ್ತು ವಿದ್ಯಾಲತಾ ಸಹಕರಿಸಿದರು. ವಿದ್ಯಾರ್ಥಿಗಳಾದ ಪ್ರಾಪ್ತಿ ಸ್ವಾಗತಿಸಿ ದರು. ಕೇವಿನ್ ಮಾರ್ಟಿಸ್ ನಿರೂಪಸಿದರೆ, ಈವಾ ಡಿ’ಸೋಜ ವರದಿಸಿದರು
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.