Skip to main content
www.kallianpur.com | Email : kallianpur7@gmail.com | Mob : 9741001849

ವಿಜಯ ಕಾಲೇಜು ಮೂಲ್ಕಿ ಅಲ್ಯೂಮ್ನಿ ವಿಶೇಷ ಮಹಾಸಭೆ-ವಾರ್ಷಿಕ ಸಂಭ್ರಮ-ಸನ್ಮಾನ ಗುರುವಂದನೆ ವಿಜಯ ಕಾಲೇಜ್‌ನಲ್ಲಿ ಕಲಿತವರೆೆಲ್ಲರೂ ವಿಜಯೀಗಳಾಗಿದ್ದಾರೆ : ಪ್ರವೀಣ್ ಭೋಜ ಶೆಟ್ಟಿ.

By March 4, 2024Mumbai News
kallianpurdotcom: 9741001849
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಫೆ.೧೧: ಕಾಲೇಜು ಲೈಫ್ ಅನ್ನುವ ಐದುವರ್ಷಗಳ ಹದಿಹರೆಯ ವಯಸ್ಸು ಮಹತ್ವದ ಯೌವನ ಕಾಲವಾ ಗಿದೆ. ಜೀವನದಲ್ಲಿ ಬದಲಾಗುವ ಕಾಲವಾಗಿದೆ. ಅದನ್ನು ಎಂದಿಗೂ ಮರೆಯಲಾಗದು. ಹಳೆ ವಿದ್ಯಾರ್ಥಿತನದ ದಿನ ಗಳೇ ಸರ್ವ ಶ್ರೇಷ್ಠವಾದದ್ದು. ಜೀವನದ ಸಂಘರ್ಷದ ದಿನಗಳು ಆವಾಗಲೇ ಆರಂಭ ವಾಗುವುದಾದರೂ ಆ ಕಾಲೇಜು ದಿನಗಳು ಸ್ವರ್ಣ ಯುಗದ ದಿನಗಳಾಗಿವೆ. ನಾನು ಆ ದಿನಗಳಲ್ಲಿ ವಿದ್ಯೆ ಕಲಿತದ್ದೇ ಹೊರತು ಬೇರೇನೂ ಮಾಡಿಲ್ಲ ಅನ್ನೋದೇ ಈಗ ಪಾಶ್ಚತ್ತಾಪ ಆಗುತ್ತದೆ. ಆದರೆ ಈ ಮಟ್ಟಕ್ಕೇರಲು ಅದೇ ಶಿಸ್ತಿನ ದಿನಗಳು ಕಾರಣ ಅನ್ನಲೂ ಹೆಮ್ಮೆ ಪಡುತ್ತೇನೆ. ವಿಜಯ ಕಾಲೇಜ್‌ನಲ್ಲಿ ಕಲಿತ ವಿದ್ಯಾರ್ಥಿಗಳೆಲ್ಲರೂ ನಾಯಕರಾಗಿ ವಿಜಯದತ್ತ ಸಾಗಿದ್ದಾರೆ ಎಂದೇಳಲು ಅಭಿಮಾನ ಪಡುತ್ತೇನೆ ಎಂದು ವಿಜಯಾ ಕಾಲೇಜ್‌ನ ಹಳೆ ವಿದ್ಯಾರ್ಥಿ, ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರವೀಣ್ ಬಿ.ಶೆಟ್ಟಿ ತಿಳಿಸಿದರು.

ವಿಜಯ ಕಾಲೇಜು ಮೂಲ್ಕಿ ಗ್ಲೋಬಲ್ ಅಲ್ಯೂಮಿನಿ ಅಸೋಸಿಯೇಶನ್ ಇಂದಿಲ್ಲಿ ಶನಿವಾರ ಸಂಜೆ ಮಹಾನಗರದ ಸಾಕಿನಾಕ ಇಲ್ಲಿನ ಮುಂಬಯಿ ಮೆಟ್ರೋ ಹೋಟೇಲ್ ಸಭಾ ಗೃಹದಲ್ಲಿ ಆಯೋಜಿಸಿದ್ದ ವಿಶೇಷ ಮಹಾಸಭೆ, ವಾರ್ಷಿಕ ಸಂಭ್ರಮ, ಸನ್ಮಾನ ಮತ್ತು ಗುರುವಂದನೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದು ದೀಪ ಪ್ರಜ್ವಲಿಸಿ ಕಾರ್ಯ ಕ್ರಮಕ್ಕೆ ಚಾಲನೆಯನ್ನಿತ್ತು ಪ್ರವೀಣ್ ಶೆಟ್ಟಿ ಮಾತನಾಡಿದರು.

ವಿಜಯಾ ಕಾಲೇಜ್‌ನ ಪ್ರಾಂಶುಪಾಲೆ ಡಾ| ಶ್ರೀಮನಿ ಶೆಟ್ಟಿ ಗೌರವ ಅತಿಥಿಗಳಾಗಿದ್ದು ವಿಸಿಎಂಜಿಎಎಎಂ ಅಧ್ಯಕ್ಷ ವಾಸುದೇವ್ ಎಂ.ಸಾಲಿಯಾನ್ ಅಧ್ಯಕ್ಷತೆಯಲ್ಲಿ ಜರುಗಿದ ಒಟ್ಟು ಕಾರ್ಯ ಕ್ರಮದ ವೇದಿಕೆಯಲ್ಲಿ ಗೌರವ ಅಧ್ಯಕ್ಷ ಆನಂದ ಶೆಟ್ಟಿ, ಉಪಾಧ್ಯಕ್ಷ ನ್ಯಾಯವಾದಿ ಶೇಖರ್ ಎಸ್.ಭಂಡಾರಿ, ಗೌ| ಪ್ರ| ಕಾಯದರ್ಶಿ ಭಾಸ್ಕರ್ ಬಿ.ಶೆಟ್ಟಿ, ಗೌರವ ಕೋಶಾಧಿಕಾರಿ ಸಿಎ| ರೋಹಿತಾಕ್ಷ ದೇವಾಡಿಗ ವೇದಿಕೆಯನ್ನಲಂಕರಿಸಿದ್ದರು.

ತಾಯ್ನಾಡು, ಮಾತೃಭಾಷೆ, ಗುರು ಗೌರವ ಇತ್ಯಾದಿಗಳಿಗೆ ಮುಂಬಯಿವಾಸಿ ತುಳು ಕನ್ನಡಿಗರು ಅದರಲ್ಲೂ ವಿಜಯ ಕಾಲೇಜು ವಿದ್ಯಾರ್ಥಿಗಳು ಪ್ರೇರಕರಾಗಿದ್ದಾರೆ. ಸಮಯವಿಲ್ಲದ ಬದುಕಿನ ಮಧ್ಯೆಯೂ ಹಳೆ ವಿದ್ಯಾರ್ಥಿಗಳ ಮೂಲಕ ಐಕ್ಯತೆಯನ್ನು ರೂಢಿಸಿ ಬಾಳುವ  ಮುಂಬಯಿಗರು ಸರ್ವೋತ್ಕಷ್ಟರು. ವಿಜಯ ಕಾಲೇಜು ವಿದ್ಯಾರ್ಥಿಗಳ ಕಾಳಜಿ ವೈಶಿಷ್ಟಮಯವಾಗಿದ್ದು ತಮ್ಮಲ್ಲಿನ ಗುರುಶಿಷ್ಯರ ಬಾಂಧವ್ಯ ಎಲ್ಲರಿಗೂ ಅನುಕರಣೀಯ. ಮನುಕುಲದ ಪ್ರೀತ್ಯಾಧಾ ರಕ್ಕೆ ಮುಂಬಯಿ ಜನತೆ ಅನುಕರಣೀಯ ಎಂದು ಶ್ರೀಮನಿ ಶೆಟ್ಟಿ ತಿಳಿಸಿದರು.

ಪ್ರೊ| ನಾಗರಾಜ ಮಾತನಾಡಿ ದೇವರ ದಯೆಯಿಂದ ಮೃತ್ಯುಂಜಯನಾಗಿ ಬದುಕಿರುವ ಕಾರಣ ಈ ಗೌರವಕ್ಕೆ ಪಾತ್ರನಾದೆ. ಜೀವಮಾನದಲ್ಲಿ ವಿಜಯ ಕಾಲೇಜು ಮಾಡಿಕೊಟ್ಟ ಅವಕಾಶವನ್ನು ಎಂದೂ ಮರೆಯಲಾರೆನು. ಈ ಕಾಲೇಜು ನನಗೆ ಎಲ್ಲವನ್ನೂ ಕೊಟ್ಟಿದ್ದು ಇದು ನನಪಾಲಿನ ಕಲ್ಪವೃಕ್ಷ ಅಂದೆನಿ ಸಿದ್ದೇನೆ. ಇದು ಹೃದಯ ಸ್ಪರ್ಶಿ ಸನ್ಮಾನವಾಗಿ ಸ್ವೀಕರಿಸಿದ್ದೇನೆ ಎಂದರು.

ಮನುಷ್ಯನು ಶಕ್ತಿಯುತನಾಗಿದ್ದರೆ ಎಷ್ಟೂ ಕಠಿಣ ಸಾಧನೆಗಳು ಸಾಧ್ಯವಾಗುತ್ತದೆ. ಗುರುವರ್ಯರನ್ನು ಗೌರವಿಸುವ ಸಂಸ್ಕ್ರತಿ ಪುಣ್ಯದಾಯಕವಾದುದು. ಗುರು-ಗೋವಿಂದ ಗೌರವ ಧನ್ಯತಾ ಭಾವದಿಂದ ಕೂಡಿರುತ್ತದೆ. ಇಂತಹ ಗುರು ಧರ್ಮದ ಪಾಲನೆಯಿಂದ ಸುಖ ಶಾಂತಿ ಸಂಪನ್ನಗೊಳ್ಳುವುದು ಎಂದು ಗುರುವಂದನೆಗೆ ಉತ್ತರಿಸಿ ಪ್ರೊ| ಅನುಸೂಯ ತಿಳಿಸಿದರು.

ವಿಜಯ ಕಾಲೇಜು ಮೂಲ್ಕಿ ಹಳೆ ವಿದ್ಯಾರ್ಥಿ ಸಂಘ ಮುಂಬಯಿ ಘಟಕವು ವಿಜಯ ಕಾಲೇಜು ಮೂಲ್ಕಿ ಗ್ಲೋಬಲ್ ಅಲ್ಯೂಮಿನಿ ಅಸೋಸಿಯೇಶನ್ ಜೊತೆಗೆ ವಿಲೀನಗೊಂಡು ಇದೀಗ ವಿಶ್ವದೆಲ್ಲೆಡೆ ಪಸರಿಸಿರುವ ಕಾಲೇಜ್‌ನ ಹಳೆ ವಿದ್ಯಾರ್ಥಿಗಳನ್ನು ಪ್ರತಿನಿಧಿಸುತ್ತಿದೆ. ಹಳೆವಿದ್ಯಾರ್ಥಿಗಳಿಂದ ಭಾವೀ ವಿದ್ಯಾರ್ಥಿಗಳ ಬದುಕು ಹಸನಾಗಬೇಕು ಎಂಬು ವುದೇ ನಮ್ಮ ಧ್ಯೇಯವಾಗಿದೆ. ತಾವುಗಳು ತಮ್ಮಿಂದಾಗುವ ಕನಿಷ್ಠ ದೇಣಿಗೆಯನ್ನು ನೀಡಿದರೂ ಅದು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಶಕ್ತಿಯಾಗುತ್ತದೆ. ತಾವುಗಳು ಕಲಿತ ಕಾಲೇಜ್‌ನ್ನು ದೇವಸ್ಥಾನ ಎಂದು ತಿಳಿದಾದರೂ ಸ್ಪಂದಿಸಿರಿ ಅನ್ನುತ್ತಾ ಕಾಲೇಜ್‌ನಲ್ಲಿನ ಸಂಸ್ಕ್ರತ ಭಾಷಾ ಅಧ್ಯಯನವನ್ನು ಮುನ್ನಡೆಸುವಂತೆ ಕೋರಿವೆ ಎಂದು ಅಧ್ಯಕ್ಷೀಯ ಭಾಷಣವನ್ನು ದ್ದೇಶಿಸಿ ವಾಸುದೇವ್ ಸಾಲಿಯಾನ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜ್‌ನ ನಿವೃತ್ತ ಪ್ರಾಚಾರ್ಯರುಗಳಾದ ಪ್ರೊ| ನಾಗರಾಜ ಜಿ.ನಾಯಕ್ (ಪತ್ನಿ ರಮ್ಯ ನಾಯಕ್ ಜೊತೆಗೂಡಿ) ಮತ್ತು ಪ್ರೊ| ಅನುಸೂಯ ಕರ್ಕೇರ (ಪತಿ ರಾಮದಾಸ ಪುತ್ರನ್ ಜೊತೆಗೂಡಿ) ಶಿಷ್ಯರು ಗುರುವಂದನೆ ಗೈದರು. ಕಾಲೇಜ್‌ನ ಹಳೆ ವಿದ್ಯಾರ್ಥಿಗಳೂ, ಸಾಧಕ ಉದ್ಯಮಿಗಳಾದ ಐಕಳ ವಿಶ್ವನಾಥ ಶೆಟ್ಟಿ, ಮೋಹನದಾಸ್ ಹೆಜ್ಮಾಡಿ (ಪತ್ನಿ ಜಯಶ್ರೀ ಮೋಹನದಾಸ್ ಜೊತೆಗೂಡಿ), ಶಶಿಕಾಂತ್ ಎಂ.ಕೋಟ್ಯಾನ್, ಶ್ರೀಮತಿ ವಾಗ್ದೇವಿ ಕಾಂಚನ್ ಇವರಿಗೆ ವಿಶೇಷ ಸಾಧಕ ಪುರಸ್ಕಾರ ಪ್ರದಾನಿಸಿ ಹಾಗೂ ಹಳೆ ವಿದ್ಯಾಥಿsðಗಳ ಮಕ್ಕಳಿಗೆ ಶೈಕ್ಷಣಿಕ ಸಾಧನೆ ಪರಿಗಣಿಸಿ ಗೌರವಿಸಲಾಯಿತು.

ಸಿಎ| ಶಂಕರ್ ಬಿ.ಶೆಟ್ಟಿ,ರಂಜನ್ ಶೆಟ್ಟಿ, ಭಾಸ್ಕರ್ ಎಂ.ಸಾಲ್ಯಾನ್, ಕಾಶ್ಮೀರ ಭಾಸ್ಕರ್ ಶೆಟ್ಟಿ, ಕೆ.ಎನ್ ಸುವರ್ಣ, ಲಾರೆನ್ಸ್ ಡಿ’ಸೋಜಾ, ದಿನೇಶ್ ಸಿ.ಸಾಲ್ಯಾನ್, ರತ್ನಾ ಶೆಟ್ಟಿ, ಲಿಗೋರಿ ಡಿಸೋಜಾ ಮೂಲ್ಕಿ, ರವೀಂದ್ರ ಪುತ್ರನ್, ಕಿಶೋರ್ ಚೌಟ, ಪೇಟೆಮನೆ ಪ್ರಕಾಶ್ ಶೆಟ್ಟಿ, ಸುರೇಶ್ ಬಿ.ಶೆಟ್ಟಿ ಸೇರಿದಂತೆ ಸದಸ್ಯರನೇಕರು ಹಾಜರಿದ್ದು ಗೌರರ್ವಾರ್ಪಣೆ ಸಲ್ಲಿಸಿ ಅಭಿನಂದಿಸಿದರು.

ಶಶಿಧರ್ ಬಂಗೇರಾ ಮಟ್ಟು ಪ್ರಾರ್ಥನೆಗೈದು ಸಾಂಸ್ಕ್ರತಿಕ ಕಾರ್ಯಕ್ರಮ ನಿರೂಪಿಸಿದರು. ಗತ ಸಾಲಿನಲ್ಲಿ ನಿಧನ ರಾದವರಿಗೆ ಆರಂಭದಲ್ಲಿ ಮೌನ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಆನಂದ ಶೆಟ್ಟಿ ಸ್ವಾಗತಿ ಸಿದರು. ಭಾಸ್ಕರ್ ಬಿ.ಶೆಟ್ಟಿ ಪ್ರಸ್ತಾವಿಕ ನುಡಿಗಳನ್ನಾಡಿ ವಾರ್ಷಿಕ ವರದಿ ವಾಚಿಸಿದರು. ಸಿಎ| ರೋಹಿತಾಕ್ಷ ದೇವಾಡಿಗ ಲೆಕ್ಕಪತ್ರ ಮಂಡಿಸಿದರು. ಸರಿತಾ ರಾವ್, ಪುಷ್ಪಾ ಶೆಟ್ಟಿ ಗುರುವಂದನೆ ಸ್ವೀಕೃತರನ್ನು ಪರಿಚಯಿಸಿದರು. ಸುನೀಲ್ ಶೆಟ್ಟಿ ಪಡುಬಿದ್ರಿ, ಸಿಎ| ಕಿಶೋರ್ ಕುಮಾರ್ ಸುವರ್ಣ, ಸ್ವರ್ಣ ಜ್ಯೋತಿ ಸನ್ಮಾನಿತರನ್ನು ಪರಿಚಯಿಸಿದರು. ಹರೀಶ್ ಹೆಜ್ಮಾಡಿ ಕಾರ್ಯಕ್ರಮ ನಿರೂಪಿಸಿದರು. ಶೇಖರ್ ಭಂಡಾರಿ ವಂದಿಸಿದರು. ಸದಸ್ಯರ ಮಕ್ಕಳು ಸಾಂಸ್ಕ್ರತಿಕ ಕಾರ್ಯ ಕ್ರಮವಾಗಿಸಿ ನೃತ್ಯಾವಳಿಗಳನ್ನು ಪ್ರಸ್ತುತ ಪಡಿಸಿದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.