Skip to main content
www.kallianpur.com | Email : kallianpur7@gmail.com | Mob : 9741001849

ವಿಶ್ವ ಅಂತರಾಷ್ಟ್ರೀಯ ಮಹಿಳಾ ದಿನಾಚರಣಾ ಸಂದೇಶ ಮಹಿಳೆ ಸಮಾಜದ ವಾಸ್ತುಶಿಲ್ಪಿಗಳು : ಡಾ| ಗ್ರೇಸ್ ಪಿಂಟೋ

By March 6, 2023Kannada News

(ಚಿತ್ರ / ವರದಿ : ತಾರ ರೋನ್ಸ್ ಬಂಟ್ವಾಳ್)

ಮುಂಬಯಿ (ಆರ್‌ಬಿಐ) ಮಾ.೦೮: ಮಹಿಳಾ ಸಮಾನತೆ ಮತ್ತು ಸ್ತ್ರೀ ಸಬಲೀಕರಣಕ್ಕೆ ಗಮನ ಸೆಳೆಯಲು ಮತ್ತು ಪ್ರೋತ್ಸಾಹಿಸಲು ಮಾರ್ಚ್ ೮ ದಿನಾಂಕವನ್ನು ವಾರ್ಷಿಕವಾಗಿ ವಿಶ್ವದಾದ್ಯಂತ ಅಂತರಾಷ್ಟ್ರೀಯ ಮಹಿಳಾ ದಿನವಾಗಿ ಆಚರಿಸುತ್ತಿರುವುದು ವನಿತಾ ವರ್ಗದ ಗೌರವವಾಗಿದೆ. ನಮ್ಮ ಸಮಾಜದಲ್ಲಿ ಮಹಿಳೆಯರ ಮಹತ್ವಾಕಾಂಕ್ಷೆಗಳನ್ನು ಸಾಧಿಸಲು ಮತ್ತು ಅವರ ಆಕಾಂಕ್ಷೆಗಳನ್ನು ಪೂರೈಸಲು ಇಂತಹ ಸುದಿನ ಉತ್ತೇಜಿಸುತ್ತದೆ. ಇದು ನಾರಿಶಕ್ತಿಯ ಬದಲಾವಣೆಗೆ ಮತ್ತು ನಾನಾ ವಿಭಾಗಗಳಲ್ಲಿ ಅವರ ಕೊಡುಗೆ, ಮಹಿಳಾ ಸಾಧಕರನ್ನು ಶ್ಲಾಘಿಸುವ ದಿನವಾಗಿದೆ.

ಸ್ತ್ರೀ ಸ್ವಾತಂತ್ರ ್ಯದೊಂದಿಗೆ ಗೌರವಯುತವಾದ ಜೀವನವನ್ನು ನಡೆಸುವ ಮಹಿಳೆಯರ ಹಕ್ಕನ್ನು ಇನ್ನೂ ಕಸಿದು ಕೊಳ್ಳುವ ಅಂತರವನ್ನು ಪರಿಹರಿಸಲು ಅಗತ್ಯವಾದ ಕ್ರಮವನ್ನು ಉತ್ತೇಜಿಸುವ, ಜೀವನದ ಸವಾಲುಗಳನ್ನು ಇದು ಗುರುತಿಸುಸಲು ಸಹಕಾರಿಯಾಗಿದೆ. ಪ್ರಸಕ್ತ ಜಿಟಲ್ ಯುಗದಲ್ಲಿ ಸುಶಿಕ್ಷಣದ ಮೂಲಕ ಎಲ್ಲಾ ಮಹಿಳೆಯರು ಮತ್ತು ಬಾಲಕಿಯರ ಸಬಲೀಕರಣದ ಮೇಲೆ ನಮ್ಮ ದೂರದೃಷ್ಠಿ ಕೇಂದ್ರೀಕೃತವಾಗಿರಬೇಕು. ಈ ದಿಶೆಯಲ್ಲಿ ಮಹಿಳಾ ದಿನದ ಯುಎನ್ ಥಿಮ್ ಡಿಜಿಟ್‌ಆಲ್ ಲಿಂಗ ಸಮಾನತೆಗಾಗಿ ನಾವೀನ್ಯತೆ ಮತ್ತು ತಂತ್ರಜ್ಞಾನದ ಅರಿವನ್ನು ರೂಢಿಸಿ ಮುನ್ನಡೆಯುವ ಅಗತ್ಯವಿದೆ.

ಜಾಗತೀಕರಣದ ಸಮಾಜ ಪರಿವರ್ತನೆಯಲ್ಲಿ ಮಹಿಳೆಯರ ಪಾತ್ರ ಮಹತ್ತರವಾಗಿದೆ. ಮಹಿಳೆಯರು ಪ್ರಪಂಚದಲ್ಲೇ ಅತ್ಯಂತ ದೊಡ್ಡ ಪ್ರತಿಭೆಗಳ ಸಂಗ್ರಹಾಗಾರರು ಎಂದು ಹೇಳಿದ್ದ ಹಿಲರಿ ಕ್ಲಿಂಟನ್ ಅವರ ಮಾತುಗಳು ನಿಜ. ಶಿಕ್ಷಣವನ್ನೇ ಅಸ್ತ್ರವಾಗಿಸಿ ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಅರಿತುಕೊಳ್ಳಲು ಮತ್ತು ಜಾಗತಿಕವಾಗಿ ಸಾಮಾಜಿಕ,ಆಥಿsðಕ ಪ್ರಗತಿಗೆ ಧನಾತ್ಮಕ ಕೊಡುಗೆ ನೀಡಲು ಸದ್ಯ ಸಾಧ್ಯವಾಗು ತ್ತದೆ. ಅನೇಕ ಅಡೆತಡೆಗಳ ನಡುವೆಯೂ, ಭಾರತದಲ್ಲಿನ ಮಹಿಳೆಯರು ಗಾಜಿನ ಚಾವಣಿ ಯನ್ನು ಒಡೆಯಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಅದಕ್ಕಾಗಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಧೀರತ್ವ,ನಾಯಕತ್ವದೊಂದಿಗೆ ಖಂಡಿತವಾಗಿಯೂ ಮಹತ್ವದ ಪ್ರಭಾವ ಬೀರಿದ್ದಾರೆ.

ನಮ್ಮಲ್ಲಿ ಪೆಪ್ಸಿಕೋಲಾದ ಮಾಜಿ ಸಿಇಒ ಇಂದ್ರಾನೂಯಿ,ಬಯೋಕಾನ್ ಅಧ್ಯಕ್ಷ ಕಿರಣ್ ಮಜುಂದಾರ್ ಶ್ಹಾ, ಸೆಬಿ ಅಧ್ಯಕ್ಷೆ ಮಾಧಬಿ ಪುರಿ ಬುಚ್, ಡಬ್ಲ್ಯೂಹೆಚ್‌ಒ ಮುಖ್ಯ ವಿಜ್ಞಾನಿ ಡಾ| ಸೌಮ್ಯಾ ಸ್ವಾಮಿನಾಥನ್, ಹೆಎಚ್‌ಸಿಎಲ್ ಸಿಇಒ ರೋಶ್ನಿನಾಡರ್ ಮಲ್ಹೋತ್ರಾ, ಭಾರತದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಅಮೇರಿಕಾ (ಯುಎಸ್) ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರಿಸ್ ಚುನಾಯಿತರಾದ ಮೊದಲ ಮಹಿಳೆ ಇವರೆಲ್ಲರೆಲ್ಲರೂ ಶ್ಲಾಘನೀಯ ಕೊಡುಗೆ ನೀಡಿದ ಮಹಿಳಾ ದಿಗ್ಗಜರು. ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಮುನ್ನಡೆಸಲು ಮತ್ತು ಬದಲಾವಣೆಯನ್ನು ತರುವ ಎಲ್ಲಾ ಸಾಮರ್ಥ್ಯವನ್ನು ಹೊಂದಿರುವ ಮಹಿಳೆ ಯರು ನಿಜವಾಗಿಯೂ ಪ್ರತಿಭೆಯ ಜಲಾಶಯ ಎಂದು ತೋರಿಸುವ ಹಲವಾರು ಪ್ರಕಾಶಮಾನವಾದ ಉದಾಹರಣೆಗಳಲ್ಲಿ ಇವು ಕೆಲವೇ ಕೆಲವು.

ಮಹಿಳೆಯೇ ಕುಟುಂಬ ಮತ್ತು ಸಮಾಜದ ಅಡಿಪಾಯ ಆಗಿದ್ದಾರೆ. ರಾಷ್ಟ್ರದ ಸಂವಿಧಾನ ಶಿಲ್ಪಿ ಡಾ| ಬಿ.ಆರ್ ಅಂಬೇಡ್ಕರ್ ಅವರು ಹೇಳಿದಂತೆ ಮಹಿಳೆಯರು ಸಾಧಿಸಿದ ಪ್ರಗತಿಯ ಮಟ್ಟದಿಂದ ನಾನು ಸಮುದಾಯದ ಪ್ರಗತಿಯನ್ನು ಅಳೆಯುತ್ತೇನೆ ಎಂಬಂತೆ ಮಹಿಳೆಯೇ ನಮ್ಮ ಸಮಾಜದ ಆಸ್ತಿಯಾಗಿದ್ದಾಳೆ. ಮಹಿಳೆ ನಿರ್ಣಯ, ಪ್ರಗತಿ ಮತ್ತು ರೂಪಾಂತರಕ್ಕೆ ಅನುವಾದಿ ಸುತ್ತದೆ. ಆದ್ದರಿಂದ ನಾರಿಯರೆಲ್ಲರೂ ಪ್ರತಿ ಸವಾಲನ್ನು ಅವಕಾಶವನ್ನಾಗಿ ಬದಲಾಯಿಸುವ ಸಂಕಲ್ಪ ಹೊಂದಬೇಕು. ಪ್ರಗತಿಯನ್ನು ಸಾಧಿಸಲು ನಾಯಕತ್ವವನ್ನು ಆಯ್ದುಕೊಂಡು ಸಾಮಾಜಿಕ ಮತ್ತು ಆಥಿüðಕ ಪರಿವರ್ತನೆಯನ್ನು ತರಲು ಆಲೋಚನೆಗಳನ್ನು ರೂಢಿಸಿ ಕೊಳ್ಳುವುದೂ ಅತ್ಯವಶ್ಯಕವಾಗಿದೆ. ಮಾಯಾ ಏಂಜೆಲೋ ಹೇಳುವಂತೆ, ಸ್ವಂತಿಕೆಗಾಗಿ ನಿಲ್ಲುವ ಮಹಿಳೆಯರು ನಮಗೆ ಬೇಕು ಏಕೆಂದರೆ ಅವರು ತಮ್ಮ ಪರವಾಗಿ ನಿಲ್ಲುವಂತೆ ಎಲ್ಲಾ ಮಹಿಳೆಯರಿಗಾಗಿಯೂ ನಿಲ್ಲುತ್ತಾರೆೆ ಅನ್ನುವುದೂ ತಥ್ಯವಾಗಿದೆ.

ಇಂದು ಈ ವಿಶೇಷ ದಿನದಂದು, ಪ್ರತಿಯೊಬ್ಬ ವನಿತೆಯ ಸಾಮರ್ಥ್ಯವನ್ನು ಅರಿತುಕೊಳ್ಳಲು ಮತ್ತು ಜೀವನದಲ್ಲಿ ನಮ್ಮ ಆಕಾಂಕ್ಷೆಗಳನ್ನು ಸಾಧಿಸಲು ನಾನು ಬಯಸುವೆ. ಅದಕ್ಕಾಗಿ ಪ್ರತೀ ಪ್ರತಿಭಾವಂತ ಮತ್ತು ಸಾಧಕ ಮಹಿಳೆಯರನ್ನು ಒತ್ತಾಯಿಸು ತ್ತೇನೆ. ಪ್ರತಿಯರೂ ಭಗವಂತನ ಅನುಗ್ರಹ, ಸದ್ಗುಣ, ಸ್ಥೆöರ್ಯ, ಸಹನೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಮನೋಬಲವನ್ನು ವೃದ್ಧಿಸಿ ಕೊಂಡು ಮುನ್ನಡೆಯಬೇಕು. ಇದೇ ಸ್ತ್ರೀ ಧೀರತ್ವದ ತಾಕತ್ತುವಾಗಿದೆ. ದೇವರು ಪ್ರಾಪ್ತಿಸಿದ ಸಾಮರ್ಥ್ಯಗಳು ಮತ್ತು ಪ್ರತಿಭೆಗಳನ್ನು ಅಳವಡಿಸಿಕೊಳ್ಳಿ, ಸ್ವಂತಕ್ಕೆ ನಂಬಿಕೆಯನ್ನು ಹೊಂದಿ ಆಸುಪಾಸಿನ ಪ್ರಪಂಚಕ್ಕೆ ಕೊಡುಗೆ ನೀಡಲು ನಿರ್ಭಯವಾಗಿ ತೊಡಗಿಸಿ ಕೊಳ್ಳಿರಿ. ಸಾಧಾರಣತೆಗಾಗಿ ಅಸಹಿಷ್ಣುತೆಯನ್ನು ರೂಢಿಸಿಕೊಳ್ಳಿರಿ. ಸಾಧಿಸುವುದು ಕಠಿಣವಾಗಿದ್ದರೂ ಶ್ರೇಷ್ಠತೆಗಾಗಿ ಹಾತೊರೆ ಯಿರಿ. ಏಕೆಂದರೆ ಒಬ್ಬೊಬ್ಬ ಮಹಿಳೆಯರೂ ಅಮೂಲ್ಯರು! ಸ್ತ್ರೀಯರೇ ಯಾವಾಗಲೂ ನೆನಪಿಡಿ, ಎಂದೆಂದಿಗೂ ಹಿಂದೆ ನೋಡದೆ ಮುನ್ನಡೆಯನ್ನೇ ಮುಂದಿರಿಸಿ ಬಾಳುತ್ತಿರಿ ನಾಡಿನ ಸಮಸ್ತ ವನಿತೆಯರಿಗೆ ಮಹಿಳಾ ದಿನಾಚರಣೆಯ ಶುಭಾಶಯಗಳು!

ಡಾ| ಗ್ರೇಸ್ ಪಿಂಟೋ
ವ್ಯವಸ್ಥಾಪಕ ನಿರ್ದೇಶಕಿ: ರಾಯಾನ್ ಇಂಟರ್‌ನ್ಯಾಶನಲ್
ಗ್ರೂಪ್ ಆಫ್ ಇನ್‌ಸ್ಟ್ಟಿಟ್ಯೂಶನ್ಸ್

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.