kallianpurdotcom: 05/10/23
ಉಡುಪಿ : ದಿನಾಂಕ 3.10.2023 ರಂದು ಬ್ರಹ್ಮಾವರ ವಲಯದ ಸರಕಾರಿ ,ಅನುದಾನಿತ ಮತ್ತು ಅನುದಾನ ರಹಿತ ಗಣಿತ ಶಿಕ್ಷಕರ ಕಾರ್ಯಗಾರವು ಕಲ್ಯಾಣಪುರದ ಮಿಲಾಗ್ರಿಸ್ ಪ್ರೌಢಶಾಲೆಯಲ್ಲಿ ನೆರವೇರಿತು. ಕಾರ್ಯಕ್ರಮವು ಶಾಲಾ ವಿದ್ಯಾರ್ಥಿಗಳ ಪ್ರಾರ್ಥನೆಯ ನಂತರ ಶ್ರೀ ಜೇಮ್ಸ್ ಡಾಯಸ್, ಮುಖ್ಯ ಶಿಕ್ಷಕರು, ವಿಶ್ವ ಕೀರ್ತಿ ಪ್ರೌಢಶಾಲೆ, ಕುಂಜಾಲು ಇವರ ಸ್ವಾಗತ ಭಾಷಣದೊಂದಿಗೆ ಆರಂಭವಾಯಿತು. ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳೂ,ಎಸ್ .ಎಸ್. ಎಲ್ .ಸಿ .ನೋಡಲ್ ಅಧಿಕಾರಿಗಳೂ ಆದ ಶ್ರೀ ರಾಘವ ಶೆಟ್ಟಿ ಇವರು ಕಾರ್ಯಗಾರದ ಉದ್ದೇಶವನ್ನು ತಿಳಿಸಿ ಈ ವರ್ಷದ ಎಸ್. ಎಸ್ .ಎಲ್ .ಸಿ. ಪರೀಕ್ಷೆಗೆ ಮಾಡಿಕೊಳ್ಳಬೇಕಾದ ಸಿದ್ಧತೆಗಳ ಬಗ್ಗೆ ಪ್ರಾಸ್ತಾವಿಕ ನುಡಿಗಳ ಮೂಲಕ ಬೆಳಕು ಚೆಲ್ಲಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ಗಣಿತ ಶಿಕ್ಷಕರಾದ ಶ್ರೀ ನಾಗೇಂದ್ರ ನಾಯಕ್, ಕಾರ್ಮೆಲ್ ಹೈಸ್ಕೂಲ್, ಕೆಮ್ಮಣ್ಣು ಇವರು ನೆರವೇರಿಸಿ,ಮಿಲಾಗ್ರಿಸ್ ಪ್ರೌಢಶಾಲೆಯ ಮುಖ್ಯ ಶಿಕ್ಷಕಿಯಾದ ಸಿಸ್ಟರ್ ಅನಿತಾ ಡಿಸೋಜಾರವರು ವಂದಿಸಿದರು. ಶಾಲಾ ದೈಹಿಕ ಶಿಕ್ಷಕರಾದ ಶ್ರೀ ಸಿಪ್ರಿಯನ್ ಕ್ರಾಸ್ತಾರವರು ಕಾರ್ಯಕ್ರಮವನ್ನು ನಿರೂಪಿಸಲು ಶ್ರೀ ರಮಾನಂದ ,ಶ್ರೀಮತಿ ಅನಿತಾ ಮಲ್ಯ ,ಶ್ರೀ ಉಮೇಶ್ ,ಸಿಸ್ಟರ್ ಅನಿತಾ ಮತ್ತು ಶ್ರೀಮತಿ ನಾಗವೇಣಿ ಇವರ ತರಗತಿಗಳು ಗಣಿತ ಕಲಿಕೆಗೆ ಸಹಕಾರಿಯಾಗಿದ್ದವು.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.