Skip to main content
www.kallianpur.com | Email : kallianpur7@gmail.com | Mob : 9741001849

ಕಲ್ಯಾಣಪುರದ ಮಿಲಾಗ್ರಿಸ್ ಪ್ರೌಢಶಾಲೆಯಲ್ಲಿ ಬ್ರಹ್ಮಾವರ ವಲಯದ ಗಣಿತ ಶಿಕ್ಷಕರ ಕಾರ್ಯಗಾರ.

By October 5, 2023Kannada News
kallianpurdotcom: 05/10/23

ಉಡುಪಿ : ದಿನಾಂಕ 3.10.2023 ರಂದು ಬ್ರಹ್ಮಾವರ ವಲಯದ ಸರಕಾರಿ ,ಅನುದಾನಿತ ಮತ್ತು ಅನುದಾನ ರಹಿತ ಗಣಿತ ಶಿಕ್ಷಕರ ಕಾರ್ಯಗಾರವು ಕಲ್ಯಾಣಪುರದ ಮಿಲಾಗ್ರಿಸ್ ಪ್ರೌಢಶಾಲೆಯಲ್ಲಿ ನೆರವೇರಿತು. ಕಾರ್ಯಕ್ರಮವು ಶಾಲಾ ವಿದ್ಯಾರ್ಥಿಗಳ ಪ್ರಾರ್ಥನೆಯ ನಂತರ ಶ್ರೀ ಜೇಮ್ಸ್ ಡಾಯಸ್, ಮುಖ್ಯ ಶಿಕ್ಷಕರು, ವಿಶ್ವ ಕೀರ್ತಿ ಪ್ರೌಢಶಾಲೆ, ಕುಂಜಾಲು ಇವರ ಸ್ವಾಗತ ಭಾಷಣದೊಂದಿಗೆ ಆರಂಭವಾಯಿತು. ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳೂ,ಎಸ್ .ಎಸ್. ಎಲ್ .ಸಿ .ನೋಡಲ್ ಅಧಿಕಾರಿಗಳೂ ಆದ ಶ್ರೀ ರಾಘವ ಶೆಟ್ಟಿ ಇವರು ಕಾರ್ಯಗಾರದ ಉದ್ದೇಶವನ್ನು  ತಿಳಿಸಿ ಈ ವರ್ಷದ ಎಸ್. ಎಸ್ .ಎಲ್ .ಸಿ. ಪರೀಕ್ಷೆಗೆ ಮಾಡಿಕೊಳ್ಳಬೇಕಾದ ಸಿದ್ಧತೆಗಳ ಬಗ್ಗೆ ಪ್ರಾಸ್ತಾವಿಕ ನುಡಿಗಳ ಮೂಲಕ ಬೆಳಕು ಚೆಲ್ಲಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ಗಣಿತ ಶಿಕ್ಷಕರಾದ ಶ್ರೀ ನಾಗೇಂದ್ರ ನಾಯಕ್, ಕಾರ್ಮೆಲ್ ಹೈಸ್ಕೂಲ್, ಕೆಮ್ಮಣ್ಣು ಇವರು ನೆರವೇರಿಸಿ,ಮಿಲಾಗ್ರಿಸ್  ಪ್ರೌಢಶಾಲೆಯ ಮುಖ್ಯ ಶಿಕ್ಷಕಿಯಾದ ಸಿಸ್ಟರ್ ಅನಿತಾ ಡಿಸೋಜಾರವರು ವಂದಿಸಿದರು. ಶಾಲಾ ದೈಹಿಕ ಶಿಕ್ಷಕರಾದ ಶ್ರೀ ಸಿಪ್ರಿಯನ್ ಕ್ರಾಸ್ತಾರವರು ಕಾರ್ಯಕ್ರಮವನ್ನು ನಿರೂಪಿಸಲು  ಶ್ರೀ ರಮಾನಂದ ,ಶ್ರೀಮತಿ ಅನಿತಾ ಮಲ್ಯ ,ಶ್ರೀ ಉಮೇಶ್ ,ಸಿಸ್ಟರ್ ಅನಿತಾ ಮತ್ತು ಶ್ರೀಮತಿ ನಾಗವೇಣಿ ಇವರ ತರಗತಿಗಳು ಗಣಿತ ಕಲಿಕೆಗೆ ಸಹಕಾರಿಯಾಗಿದ್ದವು.

ಶ್ರೀ ರಮಾನಂದ ಮೆರಿನಲ್ ಪ್ರೌಢಶಾಲೆ, ಬಾರ್ಕೂರು ಇವರು ಗಣಿತ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ರೂಪಿಸಬಹುದಾದ ವಿಶೇಷ ಯೋಜನೆಗಳ ಬಗ್ಗೆ ವಿವರಣೆ ನೀಡಿದರು. ಎರಡನೇ ಅವಧಿಯಲ್ಲಿ 10ನೇ ತರಗತಿ ಗಣಿತ ಪುಸ್ತಕದಲ್ಲಿರುವ ಕಠಿಣ ಪರಿಕಲ್ಪನೆಗಳ ಬಗ್ಗೆ ವಿಚಾರ ವಿನಿಮಯವನ್ನು ಶ್ರೀಮತಿ ಅನಿತಾ ಮಲ್ಯ ಎಂಜಿಸಿ,ಮಣಿಪಾಲ ಇವರು ನಡೆಸಿಕೊಟ್ಟರು.
ಮಧ್ಯಾಹ್ನದ ಊಟದ ನಂತರದ ಅವಧಿಯಲ್ಲಿ ಮಿಲಾಗ್ರಿಸ್ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಅನಿತಾ ಡಿಸೋಜಾ ರವರು ಸಿಸ್ಟರ್ ಗಣಿತ ಕಲಿಕೆಗೆ ಸಂಗೀತದ ಸ್ಪರ್ಶ ನೀಡಿ ಕಲಿಕೆಯನ್ನು ಸರಳ ರೂಪಗೊಳಿಸುವ ಸುಲಭಗೊಳಿಸುವ ವಿಧಾನಗಳನ್ನು ಅನೇಕ ಹಾಡುಗಳ ಮೂಲಕ ಮನದಟ್ಟು ಮಾಡಿದರು. ಮುಂದುವರೆದು ಶ್ರೀಮತಿ ನಾಗವೇಣಿ, ಸರಕಾರಿ ಪ್ರೌಢಶಾಲೆ, ಕಾವಡಿ ಇವರು ಗಣಿತ ವಿಷಯದಲ್ಲಿ ಪ್ರತಿಶತ ನೂರು ಫಲಿತಾಂಶ ಗಳಿಸಲು ಅವರು ರೂಪಿಸಿಕೊಂಡ ತಂತ್ರಾಂಶಗಳ ಬಗ್ಗೆ ತಂತ್ರಗಳ ಬಗ್ಗೆ ಅನುಭವವನ್ನು ಹಂಚಿಕೊಂಡರು. ಆನಂತರ ಶ್ರೀ ಉಮೇಶ್ ಸರಕಾರಿ ಪದವಿ ಪೂರ್ವ ಕಾಲೇಜು, ಬ್ರಹ್ಮಾವರ ಇವರ ನೇತೃತ್ವದಲ್ಲಿ ಮುಂಬರುವ ದಿನಗಳಿಗಾಗಿ ಪ್ರಶ್ನೆ ಪತ್ರಿಕೆಯನ್ನು ರಚಿಸಲಾಯಿತು. ಹೀಗೆ ಶ್ರೀ ಜೇಮ್ಸ್ ಡಾಯಸ್ ಅವರ ಮೇಲುಸ್ತುವಾರಿಯಲ್ಲಿ ಈ ದಿನದ ಕಾರ್ಯಕ್ರಮವು ಅಚ್ಚುಕಟ್ಟಾಗಿ ಮೂಡಿ ಬಂತು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.