Skip to main content
www.kallianpur.com | Email : kallianpur7@gmail.com | Mob : 9741001849

ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ; ದ್ವಿವಿಂಶತಿ ಕಲಾಸಂಭ್ರಮ ಸಮಾರೋಪ ಪ್ರತಿಭಾನ್ವಿತರಿಗೆ ಯಕ್ಷರಕ್ಷ ಪ್ರಶಸ್ತಿ ಪ್ರದಾನ ‘ಅರುವ’ ಗ್ರಂಥ ಬಿಡುಗಡೆ.

By September 13, 2023Kannada News
kallianpurdotcom: 13/09/23
(ಚಿತ್ರ /ವರದಿ : ತಾರ ರೋನ್ಸ್ ಬಂಟ್ವಾಳ್)

ಮುಂಬಯಿ (ಆರ್‌ಬಿಐ), ಸೆ.೧೩: ಬೃಹನ್ಮುಬಂಯಿಯಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಯುವ ಸುಮಾರು ಒಂದು ಸಾವಿರಕ್ಕೂ ಅಧಿಕ ಮಕ್ಕಳಿಗೆ ಯಕ್ಷಗಾನವನ್ನು ಕಲಿಸಿದ ಹಿರಿಮೆ ಇವರೊಂದಿಗಿದೆ. ಕೇವಲ ಮಕ್ಕಳಿಗೆ ಮಾತ್ರವಲ್ಲ ನನ್ನನ್ನು ಸೇರಿಸಿ ಬಂಟರ ಸಂಘದ ಅನೇಕ ಪದಾಧಿಕಾರಿಗಳಿಗೆ ಯಕ್ಷಗಾನವನ್ನು ಕಲಿಸಿ, ಕಾಲಿಗೆ ಗೆಜ್ಜೆ ಕಟ್ಟಿ ಕುಣಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದ್ದಾರೆ. ತುಳುನಾಡಿನ ಆಚಾರ, ವಿಚಾರ ಸಂಸ್ಕ್ರತಿಯನ್ನು ಯಕ್ಷಗಾನದ ಮೂಲಕ ಈ ಮುಂಬಯಿ ಮಹಾನಗರದಲ್ಲಿ ಬಿತ್ತರಿಸುವಲ್ಲಿ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರ ಯೋಗದಾನ ಮಹತ್ತರವಾದುದು ಎಂದು ಬಾಬಾ’ಸ್ ಸಮೂಹದ ಆಡಳಿತ ನಿರ್ದೇಶಕ ಮಹೇಶ್ ಎಸ್.ಶೆಟ್ಟಿ ತಿಳಿಸಿದರು.

ಕುರ್ಲಾ ಪೂರ್ವದಲ್ಲಿನ ಬಂಟರ ಸಂಘದ ರಾಧಾಬಾಯಿ ಟಿ.ಭಂಡಾರಿ ಸಭಾಗೃಹದಲ್ಲಿ ಕಳೆದ ಭಾನುವಾರ (ಸೆ.೧೦) ಮಧ್ಯಾಹ್ನದಿಂದ ರಾತ್ರಿಯವರೆಗೆ ನಡೆಸಲ್ಪಟ್ಟ ಅಜೆಕಾರು ಕಲಾಭಿಮಾನಿ ಬಳಗದ ದ್ವಿವಿಂಶತಿ ಕಲಾಸಂಭ್ರಮ (೨೨ನೇ ವಾರ್ಷಿಕೋತ್ಸವ) ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಯಕ್ಷರಕ್ಷಾ ಪ್ರಶಸ್ತಿಗಳನ್ನು ಪ್ರದಾನಿಸಿ ಮಹೇಶ್ ಶೆಟ್ಟಿ ಮಾತನಾಡಿದರು.

ವಿದ್ವಾನ್ ಎಸ್.ಎನ್ ಉಡುಪ ಜೆರಿಮೆರಿ ದೀಪ ಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆಯನ್ನಿತ್ತರು. ಬಂಟರವಾಣಿ ಕಾರ್ಯಾಧ್ಯಕ್ಷ ರವೀಂದ್ರನಾಥ್ ಎಂ.ಭಂಡಾರಿ, ಬೊಂಬೇ ಬಂಟ್ಸ್ ಅಸೋಸಿಯೇಶನ್‌ನ ಅಧ್ಯಕ್ಷ ಸಿಎ| ಸುರೇಂದ್ರ ಕೆ.ಶೆಟ್ಟಿ, ಮಾತೃಭೂಮಿ ಕೋ.ಆಪರೇಟಿವ್ ಕ್ರೆಡಿಟ್ ಸೊಸೈಟಿ ಇದರ ಕಾರ್ಯದರ್ಶಿ ಪ್ರವೀಣ್ ಭೋಜ ಶೆಟ್ಟಿ, ಬಂಟರ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿ, ಪ್ರಸಿದ್ದ ಜೋತಿಷ್ಯ ಅಶೋಕ್ ಪುರೋಹಿತ್, ಉದ್ಯಮಿ ಉದಯ ಶೆಟ್ಟಿ ಪೆಲತ್ತೂರು, ಡಾ| ಯೋಗೇಶ್ ಕೈರೋಡಿ (ಆಳ್ವರ ಪ್ರತಿನಿಧಿಯಾಗಿ)  ವೇದಿಕೆಯನ್ನಲಂಕರಿಸಿದ್ದರು.

ಡಾ| ಎಂ.ಮೋಹನ್ ಆಳ್ವ ಅವರ ಸಂಪಾದಕತ್ವದಲ್ಲಿ ಹೊರ ಹೊಮ್ಮಿದ ರಂಗಸ್ಥಳದ ರಾಜ ಹಿರಿಯ ಯಕ್ಷಗಾನ ಕಲಾವಿದ ಅರುವ ಕೊರಗಪ್ಪ ಶೆಟ್ಟಿ ಅವರ ಪರಿಚಯಾತ್ಮಕ ‘ಅರುವ’ ಗ್ರಂಥವನ್ನು ಮಹೇಶ್ ಶೆಟ್ಟಿ ಬಿಡುಗಡೆ ಗೊಳಿಸಿ ಉಪಸ್ಥಿತ ಗಣ್ಯರೊಂದಿಗೆ ಅರುವ ಕೊರಗಪ್ಪ ಶೆಟ್ಟಿ, ಗತ ಸಾಲಿನ ರಾಜ್ಯೋತ್ಸವ ಪುರಸ್ಕ್ರತ ಯಕ್ಷಗಾನ ಕಲಾವಿದ ಅಶೋಕ್ ಶೆಟ್ಟಿ ಸರಪಾಡಿ, ಸಸಿಹಿತ್ಲು ಶ್ರೀ ಭಗವತೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಸಂಚಾಲಕ ರಾಜೇಶ್ ಗುಜರನ್ ಅವರನ್ನು ಸನ್ಮಾನಿಸಿ ಅಭಿನಂದಿಸಿದರು. ಗಣ್ಯರು ಕಲಾಭಿಮಾನಿ ಬಳಗದ ಸೇವೆಯನ್ನು ಪ್ರಶಂಸಿಸಿದರು.

ಈ ಸಂದರ್ಭದಲ್ಲಿ ಅಜೆಕಾರು ಕಲಾಭಿಮಾನಿ ಬಳಗದ ರೂವಾರಿ ಅಜೆಕಾರು ಬಾಲಕೃಷ್ಣ ಶೆಟ್ಟಿ, ಆಶಾ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದು ೨೦೨೩ನೇ ಸಾಲಿನ ಬಂಟರ ಸಂಘಮುಂಬಯಿ ಇದರ ಮಾಜಿ ಗೌ| ಪ್ರ| ಕಾರ್ಯದರ್ಶಿ ಸಿಎ| ಸದಾಶಿವ ಶೆಟ್ಟಿ ಅವರಿಗೆ ಕಲಾ ಗೌರವ ಯಕ್ಷರಕ್ಷಾ ಪ್ರಶಸ್ತಿಯನ್ನು, ಪ್ರಸಿದ್ಧ ಯಕ್ಷಗಾನ ಕಲಾವಿದ ಶಶಿಕಾಂತ್ ಶೆಟ್ಟಿ ಅವರಿಗೆ ಯಕ್ಷರಕ್ಷ ೨೦೨೩ ಪ್ರಶಸ್ತಿ (ರೂಪಾಯಿ ೫೦,೦೦೦/- ನಗದು ಬಹುಮಾನ ಸಹಿತ) ನೀಡಿ ಅಭಿನಂದಿಸಲಾ ಯಿತು. ಶ್ರೀಮತಿ ಸಂಪಾ ಎಸ್.ಶೆಟ್ಟಿ ಸ್ಮರಣಾರ್ಥದ ಮಾತೃಶ್ರೀ ಯಕ್ಷರಕ್ಷಾ ಪ್ರಶಸ್ತಿ (ರೂಪಾಯಿ ೧೫,೦೦೦/- ನಗದು ಬಹುಮಾನ) ಕಲಾ ಜಗತ್ತು ಮುಂಬಯಿ ಇದರ ರೂವಾರಿ ಡಾ| ತೋನ್ಸೆ ವಿಜಯ ಕುಮಾರ್ ಶೆಟ್ಟಿ ಅವರಿಗೆ ಸಾಧಕ ಯಕ್ಷರಕ್ಷ ಪ್ರಶಸ್ತಿಗಳನ್ನು (ರೂಪಾಯಿ ೧೦,೦೦೦/- ನಗದು ಬಹುಮಾನ) ಪ್ರಸಿದ್ದ ಯಕ್ಷಗಾನ ಕಲಾವಿದ ವಾಸುದೇವ ಶೆಟ್ಟಿ ಮಾರ್ನಾಡ್, ನಾಮಾಂಕಿತ ಭಾಗವತ ಮುದ್ದು ಅಂಚನ್, ನಾಮಾಂಕಿತ ಭರತ ನಾಟ್ಯ ಗುರು ಡಾ| ಮೀನಾಕ್ಷಿ ಶ್ರೀಯಾನ್, ಕರ್ನಾಟಕ ಮಲ್ಲದ ಉಪಸಂಪಾದಕ ವಿಶ್ವನಾಥ್ ಅಮೀನ್ ನಿಡ್ಡೋಡಿ, ನುರಿತ ಚೆಂಡೆ ವಾದಕ ಪ್ರವೀಣ್ ಶೆಟ್ಟಿ ಎಕ್ಕಾರು ಇವರಿಗೆ ಪ್ರದಾನಿಸಿ ಪುರಸ್ಕರಿಸಲಾಯಿತು. ಅತಿಥಿ ಗಣ್ಯರು ಪೇಟ ತೋಡಿಸಿ, ಶಾಲು ಹೊದಿಸಿ, ಫಲಪುಷ್ಪ, ನೆನಪಿನ ಕಾಣಿಕೆಯೊಂದಿಗೆ ಸನ್ಮಾನಪತ್ರ ಪ್ರದಾನಿಸಿ ಪ್ರಶಸ್ತಿ ಪುರಸ್ಕಾರದೊಂದಿಗೆ ನೀಡಿ ಎಲ್ಲರನ್ನು ಅಭಿನಂದಿಸಿದರು. ಪ್ರಶಸ್ತಿ ಪುರಸ್ಕ್ರತರ ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿ ಅಭಿವಂದಿಸಿದರು.

ಈ ಸಂದರ್ಭದಲ್ಲಿ ವಿಶೇಷವಾಗಿ ಅಜೆಕಾರು ಕಲಾಭಿಮಾನಿ ಬಳಗದ ಸದಸ್ಯನಾಗಿ ಕಾರ್ಯನಿರ್ವಹಿಸಿ ಸ್ವರ್ಗೀಯರಾದ ದಿನೇಶ್ ಶೆಟ್ಟಿ ಸ್ಮರಣಾರ್ಥದ ಮರೋಣೊತ್ತರ ಪ್ರಶಸ್ತಿಯನ್ನು ಅವರ ಮಕ್ಕಳಾದ ಕು| ಶೃತಿ ಮತ್ತು ಕು| ಸ್ವಾತಿ ಇವರೊಂದಿಗೆ ಪತ್ನಿ ಹೇಮಲತಾ ದಿನೇಶ್ ಶೆಟ್ಟಿ ಅವರಿಗೆ (ರೂಪಾಯಿ ೫೦,೦೦೦/- ನಗದು) ನಿಧಿಯೊಂದಿಗಿನ ನೀಡಿ ನಮನ ಸಲ್ಲಿಸಲಾಯಿತು.

ಭಾಗವತ ಹೆಬ್ರಿ ಗಣೇಶ್ ಗಣಪತಿ ಸ್ತುತಿಯೊಂದಿಗೆ ಸಭಾಕಾರ್ಯಕ್ರಮ ಆರಂಭಗೊಂಡಿತು. ಅಜೆಕಾರು ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿ ಪ್ರಾಸ್ತವಿಕ ನುಡಿಗಳನ್ನಾಡಿ ಗಣ್ಯರನ್ನು ಶಾಲು ಹೊದಿಸಿ, ಹೂಗುಚ್ಛ, ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಅಶೋಕ್ ಪಕ್ಕಳ ಸನ್ಮಾನಿತರ ಸನ್ಮಾನ ಪತ್ರವನ್ನು ವಾಚಿಸಿ, ಅತಿಥಿ ಗಣ್ಯರನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಕರ್ನೂರು ಮೋಹನ್ ರೈ ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ‘ಶ್ರೀ ಭಗವತೀ ಕ್ಷೇತ್ರ ಮಹಾತ್ಮೆ’ ಯಕ್ಷಗಾನ ಪ್ರದರ್ಶಿಸಲ್ಪಟ್ಟಿತು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.