Skip to main content
www.kallianpur.com | Email : kallianpur7@gmail.com | Mob : 9741001849

ಸೆ.೧೬ನೇ ಶನಿವಾರ ; ಐಲೇಸಾ ಡಿಜಿಟಲ್ ವೇದಿಕೆಯಲ್ಲಿ `ಗಂಟ್ ಕಲ್ವೆರ್’ ಚಲನ ಚಿತ್ರದ ಹಾಡು ಬಿಡುಗಡೆ.

By September 13, 2023Mumbai News
kallianpurdotcom: 13/09/23
(ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ (ಆರ್‌ಬಿಐ), ಸೆ.೧೩: ಐಲೇಸಾ ದಿ ವಾಯ್ಸ್ ಆಫ್ ಓಷನ್ (ರಿ) ಡಿಜಿಟಲ್ ವೇದಿಕೆಯಲ್ಲಿ ಸೆ. ೧೬ನೇ ಶನಿವಾರ ರಾತ್ರಿ ೮:೦೦ ಗಂಟೆಗೆ `ಗಂಟ್ ಕಲ್ವೆರ್’ ತುಳು ಚಲನಚಿತ್ರದ ಹಾಡು ಬಿಡುಗಡೆ ನಡೆಯಲಿದೆ. ಜಾಗತಿಕ ತುಳು ಸಾಂಸ್ಕ್ರತಿಕ ರಾಯಭಾರಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸರ್ವೋತ್ತಮ ಶೆಟ್ಟಿ ಅಬುಧಾಬಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಹಾಡನ್ನು ಬಿಡುಗಡೆಗೊಳಿಸಲಿದ್ದಾರೆ ಎಂದು ಐಲೇಸಾ ತಿಳಿಸಿದೆ.

ಚಿತ್ರದ ಪಾತ್ರವರ್ಗದ ನಟರು ಮತ್ತು ಹಾಸ್ಯ ಕಲಾವಿದರ ಭಾಗವಹಿಸಲಿದ್ದಾರೆ. ಹೆಸರಾಂತ ಸಂಗೀತ ನಿರ್ದೇಶಕ ವಿ.ಮನೋಹರ್ ಸಂಗೀತ ನೀಡಿರುವ ಹಾಡನ್ನು ಐಲೇಸಾ ಸಂಸ್ಥೆಯ ಹೆಮ್ಮೆಯ ಹಾಡುಗಾರ ಸುಧಾಕರ್ ಶೆಟ್ಟಿ ಹಾಡಿದ್ದು ಚಿತ್ರವನ್ನು ಸುಧಾಕರ್ ಬನ್ನಂಜೆ ನಿರ್ದೇಶಿಸಿದ್ದಾರೆ. ಮಂಗಳೂರು, ಮೂಡಬಿದ್ರಿ ಮತ್ತು ಉಡುಪಿ ಪರಿಸರದಲ್ಲಿ ಚಿತ್ರೀಕರಣ ಮುಗಿಸಿರುವ ಹಾಸ್ಯಮಯ ಚಿತ್ರದಲ್ಲಿ ನವೀನ ಪಡೀಲ್, ಭೋಜರಾಜ ವಾಮಂಜೂರು, ಅರವಿಂದ್ ಬೋಳಾರ್ , ಸುಂದರ್ ರೈ ಮಂದಾರ, ಉಮೇಶ್ ಮಿಜಾರ್ , ಪ್ರದೀಪ್ ಆಳ್ವ ಕದ್ರಿ, ಪ್ರೇರಣಾ, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ದಿಶಾ ಪುತ್ರನ್, ಸುಧೀರ್ ಕೊಟ್ಟಾರಿ ಇವರ ಭರ್ಜರಿ ತಾರಾಗಣವಿದ್ದು, ನಾಯಕ ನಟನಾಗಿ ವಿಜೇಶ್ ಶೆಟ್ಟಿ ಮತ್ತು ನಾಯಕ ನಾಯಕಿಯಾಗಿ ಸ್ಮಿತಾ ಸುವರ್ಣ ಅಭಿನಯಿಸಿದ್ದಾರೆ. ಉಪ್ಪಳ ರಾಜಾರಾಮ್ ಶೆಟ್ಟಿ, ಕೃತಿ ಶೆಟ್ಟಿ, ನಾಗೇಶ್ ಶೆಟ್ಟಿ ಮತ್ತು ಅಮಿಶ್ ಚಂದ್ರನ್ ಸಹ ನಿರ್ಮಾಪಕ ಆಗಿರುವ `ಗಂಟ್ ಕಲ್ವೆರ್’ ಚಿತ್ರಕ್ಕೆ ಶಂಕರ್ ಮತ್ತು ರಾಜ್ ಅವರ ಛಾಯಾಗ್ರಹಣ, ರಾಮದಾಸ್ ಸಸಿಹಿತ್ಲು ಇವರ ಸಹ ನಿರ್ದೇಶನವಿದೆ.

ಆ ನಿಮಿತ್ತ ಬರುವ ಶನಿವಾರ ರಾತ್ರಿ ಭಾರತೀಯ ಕಾಲಮಾನ ರಾತ್ರಿ ೮:೦೦ ಗಂಟೆಗೆ ಝೂಮ್ ID 5340283988 Pass Code: ilesa ಮೂಲಕ ಈ ಕಾರ್ಯಕ್ರಮದಲ್ಲಿ ತುಳು ಭಾಷಾಭಿಮಾನಿಗಳು ಭಾಗಿಯಾಗಿ ತುಳು ಭಾಷೆಯ ಬೆಳವಣಿಗೆಯಲ್ಲಿ ಸಹಕರಿಸಬೇಕಾಗಿ ಐಲೇಸಾ ಸಂಸ್ಥೆಯ ಮಾಧ್ಯಮ ಸಂಚಾಲಕ  ಸುರೇಂದ್ರ ಕುಮಾರ್ ಮಾರ್ನಾಡ್ ಬಿನ್ನವಿಸಿ ಕೊಂಡಿದ್ದಾರೆ .

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.