Skip to main content
www.kallianpur.com | Email : kallianpur7@gmail.com | Mob : 9741001849

ಭಾವಿ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶ ಡಾ| ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು ಬಿಎಸ್‌ಕೆಬಿಎ ಗೋಕುಲ ಮಂದಿರಕ್ಕೆ ಭೇಟಿ.

By October 9, 2023Mumbai News
kallianpurdotcom: 09/10/23
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್

ಮುಂಬಯಿ (ಆರ್‌ಬಿಐ), ಅ.೦೯: ಉಡುಪಿ ಅಷ್ಠಮಠಗಳ ಭಾವಿ ಪರ್ಯಾಯ ಸ್ವಾಮೀಜಿ ಉಡುಪಿ ಶ್ರೀ ಪುತ್ತಿಗೆ ಮಠದ ಮಠಾಧೀಶ ಪರಮಪೂಜ್ಯ ಡಾ| ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ತನ್ನ ಪಟ್ಟಶಿಷ್ಯ ಕಿತಿಯ ಪಟ್ಟದ ಪರಮಪೂಜ್ಯ ಶ್ರೀ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ ಅವರನ್ನೊಳಗೊಂಡು ಮುಂಬಯಿ ಪ್ರವಾಸದಲ್ಲಿದ್ದು, ಸ್ವಾಮೀಜಿ ಅವರಿಗೆ ಕಳೆದ ಶನಿವಾರ (ಅ.೦೭) ಸಯಾನ್ ಅಲ್ಲಿನ ಹನುಮಾನ್ ಮಂದಿರದಿಂದ ಮೆರವಣಿಗೆ ಯಲ್ಲಿ ಭಕ್ತರ ಭಜನೆ, ಕೊಂಬು, ಚಂಡೆ, ವಾದ್ಯಗಳ ನಾದದೊಂದಿಗೆ ಗೋಕುಲದಲ್ಲಿನ ಶ್ರೀಗೋಪಾಲ ಕೃಷ್ಣನ ಸಾನಿಧ್ಯಕ್ಕೆ ಅದ್ದೂರಿಯಿಂದ ಭಕ್ತಿಪೂರ್ವಕವಾಗಿ ಬರಮಾಡಿಕೊಂಡರು.

ಡಾ| ಸುರೇಶ್ ಎಸ್.ರಾವ್ ಕಟೀಲು ಮತ್ತು ವಿಜಯಲಕ್ಷ್ಮೀ ಎಸ್.ರಾವ್ ದಂಪತಿ ಶ್ರೀಗಳ ಪಾದ ಪೂಜೆಗೈದರು. ಡಾ| ಸುರೇಶ್ ರಾವ್ ಮತ್ತು ಪದಾಧಿಕಾರಿಗಳೊಂದಿಗೆ ಶ್ರೀಪಾದರನ್ನು ಪುಷ್ಫಗುಪ್ಚವನ್ನಿತ್ತು ಸ್ವಾಗತಿಸಿದರು. ಗಣೇಶ್ ಭಟ್ ಪೂಜೆ ನೆರವೇರಿಸಿ ಮಹಾ ಆರತಿಗೈದರು. ಪುತ್ತಿಗೆ ಸ್ವಾಮೀಜಿ ಅವರಿಂದ ತೊಟ್ಟಿಲು ಪೂಜೆ, ರಾತ್ರಿ ಪೂಜೆ, ಕೋಟಿಗೀತಾ ಲೇಖನ ಮೊದಲಾದ ಧಾರ್ಮಿಕ ಪೂಜಾಧಿಗಳನ್ನು ನೇರವೇರಿಸಿ ತೀರ್ಥ ಪ್ರಸಾದ ವಿತರಿಸಿ, ಆಶೀರ್ವಾದಿಸಿದರು. ಇದೇ ಸಂದರ್ಭದಲ್ಲಿ ಗೋಕುಲ ಸಾಂಸ್ಕ್ರತಿಕ ಅಧ್ಯಯನ ಕೇಂದ್ರವನ್ನು ಸ್ವಾಮೀಜಿ ಅವರು ದಿವ್ಯಹಸ್ತದಿಂದ ಲೋಕಾರ್ಪಣೆಗೈದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷರುಗಳಾದ ವಾಮನ್ ಹೊಳ್ಳಾ ಮತ್ತು ಅವಿನಾಶ್ ಶಾಸ್ತ್ರಿ, ಕಾರ್ಯದರ್ಶಿ ಎ.ಪಿ.ಕೆ ಪೋತಿ, ಕೋಶಾಧಿಕಾರಿ ಸಿಎ| ಹರಿದಾಸ ಭಟ್ , ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಡಾ| ಸಹನಾ ಎ.ಪೋತಿ, ಗೋಕುಲ ಭಜನಾ ಮಂಡಳಿ ಸಮಿತಿ ಕಾರ್ಯಾಧ್ಯಕ್ಷೆ ಐ.ಕೆ ಪ್ರೇಮಾ ಎಸ್.ರಾವ್, ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ನ ವಿಶ್ವಸ್ಥ ಸದಸ್ಯರುಗಳಾದ ಬಿ.ರಮಾನಂದ ರಾವ್, ಕೃಷ್ಣ ಆಚಾರ್ಯ, ಜೆರಿಮೆರಿ ಎಸ್.ಎನ್ ಉಡುಪ, ಶೈಲಿನಿ ರಾವ್, ಕೃಷ್ಣರಾಜ್ ತಂತ್ರಿ ಮತ್ತಿತರ ಪದಾಧಿಕಾರಿಗಳು ಸೇರಿದಂತೆ, ಪೇಜಾವರ ಮಠದ ಮುಂಬಯಿ ಮುಖ್ಯಸ್ಥ ವಿದ್ವಾನ್ ಡಾ| ರಾಮದಾಸ ಉಪಾಧ್ಯಾಯ ರೆಂಜಾಳ, ವಿದ್ವಾನ್ ಪ್ರಕಾಶ್ ಆಚಾರ್ಯ ರಾಮಕುಂಜ, ಉದ್ಯಮಿ ಬಿ.ಆರ್ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ, ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿ, ಕೋಶಾಧಿಕಾರಿ ಉಳ್ತೂರು ಮೋಹನದಾಸ್ ಶೆಟ್ಟಿ, ಬಂಟರ ಸಂಘ ಮುಂಬಯಿ ವಿಭಾಗದ ಕಾರ್ಯಾಧ್ಯಕ್ಷ ಗಿರೀಶ್ ಶೆಟ್ಟಿ ತೆಳ್ಳಾರ್, ಶ್ರೀ ಅದಮಾರು ಮಠದ ರಾಜೇಶ ಭಟ್, ನ್ಯಾ| ಎನ್. ಆರ್ ರಾವ್, ಲೆಕ್ಕಪರಿಶೋಧಕರಾದ ಸುಧೀರ್ ಶೆಟ್ಟಿ, ಕೈರಬೆಟ್ಟು ವಿಶ್ವನಾಥ ಭಟ್, ಡಾ| ಬಿ.ಗೋಪಾಲಾಚಾರ್ಯ, ನಾಗರಹಳ್ಳಿ ಪ್ರಹ್ಲಾದಾಚಾರ್ಯ, ರಮಣ ಆಚಾರ್ಯ, ನಾರಾಯಣ ಆಚಾರ್ಯ, ಮಾಜಿ ಅಧ್ಯಕ್ಷ ಕೆ. ಸುಬ್ಬರಾವ್, ಮಧುಸೂದನ್ ಅಗರ್ವಾಲ್, ಕಿಶನ್ ಸಿಂಘಾಲ್ ಸೇರಿದಂತೆ ಅನೇಕ ಭಕ್ತರು ಉಪಸ್ಥಿತರಿದ್ದು, ಸ್ವಾಮೀಜಿ ಅವರಿಂದ ಆಶೀರ್ವಾದ ಪಡಕೊಂಡರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.