Skip to main content
www.kallianpur.com | Email : kallianpur7@gmail.com | Mob : 9741001849

ಬರೋಡಾದಲ್ಲಿ ರಜತೋತ್ಸವ ಸಂಭ್ರಮಿಸಿದ ಗುಜರಾತ್ ಬಿಲ್ಲವರ ಸಂಘ ಸಮಾಜಮುಖಿ ಸೇವೆ ಎಂದಿಗೂ ಶಾಶ್ವತವಾಗಿರುತ್ತದೆ: ವಿನಯಕುಮಾರ್ ಸೊರಕೆ.

By October 9, 2023News
kallianpurdotcom: 09/10/23
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಗುಜರಾತ್ (ಬರೋಡ) ಅ.೦೮: ಹೊರನಾಡು ಗುಜರಾತ್‌ನಲ್ಲೂ ಬೆಲ್ಲ ನೀರು ನೀಡಿ ಬರಮಾಡುವ ಸಂಪ್ರದಾಯಸ್ಥ ಬಿಲ್ಲವರ ಸೇವೆ ಬೆಳ್ಳಿಹಬ್ಬದ ಸಡಗರದಲ್ಲಿರುವುದು ಅಭಿನಂದನೀಯ. ಸಮಾಜಮುಖಿ ಸೇವೆ ಎಂದಿಗೂ ಶಾಶ್ವತ ವಾಗಿರುತ್ತದೆ. ಸೇವಾ ಕರ್ತವ್ಯ ಜವಾಬ್ದಾರಿ, ಪ್ರಾಮಾಣಿಕ ವಾಗಿ ನಿಭಾಯಿಸಿದಾಗ ಇಂತಹ ಮೈಲುಗಳು ಸಾಧ್ಯವಾಗಿ ಇತಿಹಾಸದ ಪುಟಗಳಲ್ಲಿ ಸೇರುತ್ತವೆ. ನಿಶ್ಚಲ ಸೇವಾಮನೋಭಾವಿಗಳ ಸೇವೆಯಿಂದ ಇದು ಸಾಧ್ಯವಾಗುತ್ತದೆ. ಬಿಲ್ಲವರು ವೀರತ್ವದ ಗುರುತ್ವವುಳ್ಳವರಾಗಿದ್ದು, ಧೀರತ್ವದ ಇತಿಹಾಸವುಳ್ಳ ಸಮಾಜ ಬಿಲ್ಲವರದ್ದಾಗಿದೆ. ಮೂರ್ತೆಗಾರಿಕೆ ಬಿಲ್ಲವರ ವೃತ್ತಿ ಪ್ರಧಾನತೆಯಲ್ಲ ಬದಲಾಗಿ ಸೇನತ್ವ, ನೇತೃತ್ವದಲ್ಲೂ ಬಿಲ್ಲವರು ಬಲ್ಲವರಾಗಿದ್ದಾರೆ. ಅಂತೆಯೇ ಸಹೋದರತ್ವದ ಬಾಳಿಗೆ ಬಿಲ್ಲವರು ಸದ್ಗುಣ ಸಂಪನ್ನರು, ಪ್ರೇರಕರು ಎಂದು ಮಾಜಿ ಸಂಸದ ಮತ್ತು ಕರ್ನಾಟಕದ ಮಾಜಿ ಸಚಿವ ವಿನಯಕುಮಾರ್ ಸೊರಕೆ ತಿಳಿಸಿದರು.

ಇಪ್ಪತ್ತೈದು ವರ್ಷಗಳನ್ನು ಪೂರೈಸಿದ ಗುಜರಾತ್ ಬಿಲ್ಲವರ ಸಂಘವು ಇಂದಿಲ್ಲಿ ಗುಜರಾತ್ ವಡೋದರ (ಬರೋಡಾ) ಗೋರ್ವಾ ಇಲ್ಲಿನ ಸೌರಾಷ್ಟ್ರ ಲೆಯುವಾ ಪಟೇಲ್ ಸಮಾಜ ಸಭಾಂಗಣದಲ್ಲಿ ರಚಿತ ಸ್ವರ್ಗೀಯ ಎಸ್.ಕೆ. ಹಳೆಯಂಗಡಿ ಸಭಾ ಮಂಟಪದಲ್ಲಿ ಸಂಭ್ರಮಿಸಿದ ರಜತ ಮಹೋತ್ಸವ ಆಚರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದು ದೀಪಹಚ್ಚಿ ಸಭಾಕಾರ್ಯಕ್ರಮಕ್ಕೆ ಚಾಲನೆಯನ್ನಿತ್ತು ಸೊರಕೆ ಮಾತನಾಡಿದರು.

ಜಿಬಿಎಸ್ ಅಧ್ಯಕ್ಷ ವಿಶ್ವನಾಥ ಜಿ.ಪೂಜಾರಿ ಸೂರತ್ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಅತಿಥಿ ಅಭ್ಯಾಗತರುಗಳಾಗಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಹರೀಶ್ ಜಿ.ಅಮೀನ್, ಮಾಜಿ ಅಧ್ಯಕ್ಷ ರುಗಳಾದ ಎಲ್.ವಿ ಅಮೀನ್, ಬಿಲ್ಲವರ ಸೇವಾ ಸಂಘ ಪುಣೆ ಅಧ್ಯಕ್ಷ ವಿಶ್ವನಾಥ ಪೂಜಾರಿ ಕಡ್ತಲ, ತುಳು ಸಂಘ ಬರೋಡಾ ಅಧ್ಯಕ್ಷ ಶಶಿಧರ್ ಬಿ.ಶೆಟ್ಟಿ, ಕರ್ನಾಟಕ ಸಂಘ ವಾಪಿ ಇದರ ಹಿರಿಯ ಟ್ರಸ್ಟಿ ಪಿ.ಎಸ್ ಕಾರಂತ್, ಬಿಲ್ಲವ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್‌ನ ಕಾರ್ಯಾಧ್ಯಕ್ಷ ಎನ್.ಟಿ ಪೂಜಾರಿ, ಕರ್ನಾಟಕ ಸಮಾಜ ಸೂರತ್ ಗೌರವಾಧ್ಯಕ್ಷ ರಾಮಚಂದ್ರ ವಿ.ಶೆಟ್ಟಿ, ವಿದ್ಯಾದಾಯಿನಿ ಸಭಾ ಅಧ್ಯಕ್ಷ ಪುರುಷೋತ್ತಮ ಎಸ್.ಕೋಟ್ಯಾನ್, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ನ ಗುಜರಾತ್ ಘಟಕಧ್ಯಕ್ಷ ಅಜಿತ್ ಎಸ್.ಶೆಟ್ಟಿ ಅಂಕಲೇಶ್ವರ, ಸೂರತ್‌ನ ಉದ್ಯಮಿಗಳಾ ದ ಶಿವರಾಮ ಶೆಟ್ಟಿ, ತುಳುನಾಡ ಐಸಿರಿ ಅಧ್ಯಕ್ಷ ಬಾಲಕೃಷ್ಣ ಎಸ್.ಶೆಟ್ಟಿ, ಬಂಟ್ಸ್ ಸಂಘ ಅಹಮದಾಬಾದ್‌ನ ಅಧ್ಯಕ್ಷ ನಿತೇಶ್ ಎಸ್.ಶೆಟ್ಟಿ, ಗುಜರಾತ್ ಬಿಲ್ಲವರ ಸಂಘದ ಸ್ಥಾಪಕ ಮೋಹನ್ ಸಿ.ಪೂಜಾರಿ ಅಹ್ಮದಾಬಾದ್, ಗೌರವಾಧ್ಯಕ್ಷ ದಯಾನಂದ್ ಬೋಂಟ್ರಾ ಬೆಳ್ಮಾಣ್ (ಬರೋಡಾ) ಮತ್ತು ಶೋಭಾ ಡಿ.ಬೋಂಟ್ರಾ ಮತ್ತಿತರ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಗುಜರಾತ್ ಬಿಲ್ಲವರ ಸಂಘದ ನಿಕಟಪೂರ್ವ ಅಧ್ಯಕ್ಷ ಮನೋಜ್ ಸಿ.ಪೂಜಾರಿ ಸೂರತ್, ಉಪಾಧ್ಯಕ್ಷರುಗಳಾದ ಲೋಕಯ್ಯ ಪೂಜಾರಿ (ಅಹ್ಮದಾಬಾದ್), ವಾಸು ಪಿ.ಪೂಜಾರಿ (ಬರೋಡ), ಹರೀಶ್ ಪೂಜಾರಿ (ಅಂಕಲೇಶ್ವರ), ಸದಾಶಿವ ಪೂಜಾರಿ (ವಾಪಿ), ಲಕ್ಷ ್ಮಣ್ ವಿ.ಪೂಜಾರಿ (ಬರೋಡ), ಕೋಶಾಧಿಕಾರಿ ಸುದೇಶ್ ವೈ.ಕೋಟ್ಯಾನ್, ಜತೆ ಕಾರ್ಯದರ್ಶಿ ದಯಾನಂದ ಕೆ.ಸಾಲಿಯಾನ್, ಜತೆ ಕೋಶಾಧಿ ಕಾರಿ ರವಿ ಸಾಲಿಯಾನ್, ಮುಖ್ಯ ಸಲಹೆಗಾರ ಜಿನರಾಜ್ ಪೂಜಾರಿ, ಸಂಚಾಲಕರುಗಳಾದ ರೋಹಿದಾಸ್ ಪೂಜಾರಿ (ಬರೋಡ), ಸುಮನ್‌ಲಾಲ್ ಕೋಡಿಯಾಲ್‌ ಬೈಲ್ (ಅಹ್ಮದಾಬಾದ್), ರಮೇಶ್ ಪೂಜಾರಿ (ವಾಪಿ), ಪ್ರಭಾಕರ ಪೂಜಾರಿ (ಸೂರತ್), ಜಯಾನಂದ ಪೂಜಾರಿ (ಅಂಕಲೇಶ್ವರ), ಮಹಿಳಾ ಸಂಚಾಲಕಿ ಸರಿತಾ ಎಸ್.ಪೂಜಾರಿ, ಸಾಧು ಪೂಜಾರಿ ಸೂರತ್ ಹಾಜರಿದ್ದರು.

ಗುಜರಾತ್ ಬಿಲ್ಲವರ ಸಂಘ ಮತ್ತು ಬಿಲ್ಲವರ ಅಸೋಸಿಯೇಶನ್ ಮುಂಬಯಿ ಸಹೋದರತ್ವದ ಸಂಸ್ಥೆಗಳಾಗಿವೆ. ದಾನಧರ್ಮದಿಂದ ಸತ್ಕರ್ಮ ಸಿದ್ಧಿ ಸಾಧ್ಯವಾಗಿದ್ದು ಇದನ್ನು ಬಿಲ್ಲವರು ಸೇವೆ ಮುಖೇನ ಸಾಧಿಸಿದ್ದಾರೆ. ಸಮುದಾಯ ಭವನಗಳು ಸಮಾಜೋಭಿವೃದ್ಧಿಯ ಧ್ಯೋತಕವಾಗಿದ್ದು ಜಿಬಿಎಸ್ ಇದನ್ನೂ ಪೂರೈಸಿದೆ. ಬೆಳ್ಳಿಹಬ್ಬ ಗುಜರಾತ್ ಬಿಲ್ಲವರ ಏಳಿಗೆಯ ಸಂಕೇತ, ಸಂದೇಶವಾಗಿದೆ ಎಂದು ಹರೀಶ್ ಅಮೀನ್ ತಿಳಿಸಿದರು.

ಶಶಿಧರ ಶೆಟ್ಟಿ ಮಾತನಾಡಿ ಗುಜರಾತ್‌ನಲ್ಲಿ ತುಳು ಕನ್ನಡಿಗರ ಒಗ್ಗೂಡುವಿಕೆ ಸಾಂಘಿಕವಾಗಿ ಗುರುತಿಸಲ್ಪಟ್ಟಿದೆ. ಗುಜರಾತ್ ನಲ್ಲಿ ತುಳು ಕನ್ನಡಿಗರ ಐಕ್ಯತೆಗಾಗಿ ಎಸ್ಕೆ ಹಳೆಯಂಗಡಿ ಸೇವೆ ಅನುಪಮವಾದುದು. ಇಲ್ಲಿ ಬರೇ ಮಾನವೀಯತೆಯ ಬದುಕು. ಭೇದಭಾವವಿಲ್ಲದೆ ಬಾಳುವ ಗುಜರಾತ್ವಾಸಿ ತುಳು ಕನ್ನಡಿಗರಲ್ಲಿ ಬಿಲ್ಲವರ ಪಾತ್ರವೂ ಇರಿದು. ಒಂದೇ ತಾಯಿಯ ಮಕ್ಕಳಂತೆ ಬಾಳುವುದೇ ಒಂದು ಸಂಭ್ರಮವಾಗಿದೆ. ಸಮಾನತೆಯ ಬದುಕೇ ಎಲ್ಲರ ಆಶಯವಾಗಿದೆ ಎಂದರು.

ದಯಾನಂದ್ ಬೋಂಟ್ರಾ ಮಾತನಾಡಿ ಸಂಘದ ಅಸ್ತಿತ್ವಕ್ಕೆ ಸಾಥ್ ನೀಡಿ ಮುನ್ನಡಿಸಿದ ಹಿರಿಕಿರಿಯರೆಲ್ಲರ ಶ್ರಮದ ಫಲವೇ ಈ ಸಂಭ್ರಮ ವಾಗಿದೆ. ಇಲ್ಲಿ ಬಿಲ್ಲವರೆಲ್ಲರ ಸೇವಾ ಮನೋಭಾವದ ಒಗ್ಗೂಡುವಿಕೆ ರಜತೋತ್ಸವದ ಮೈಲುಗಲ್ಲುವಾಗಿದೆ. ಯುವ ಜನತೆಯ ಸೇರುವಿಕೆ, ಸೇವಾ ಮನೋಭಾವದಿಂದ ಈ ಸಂಘ ನೂರ್ಕಾಲ ಬಾಳಲಿ ಎಂದರು.

ಮೋಹನ್ ಪೂಜಾರಿ ಅಹ್ಮದಾಬಾದ್ ಮಾತನಾಡಿ ದುಡ್ಡು ಜೊತೆ ಮನಸ್ಸು ಮುಖ್ಯವಾಗಿರುತ್ತದೆ. ಸೇವೆ ಸಮರ್ಪಣೆಗೆ ಸಹೃದಯತೆಯ ಬೋಂಟ್ರಾ ದಂಪತಿಗಳು ಮಾದರಿ. ಈ ಸಂಘವು ಸಮಾಜೋನ್ನತಿಯ ಸಂಪತ್ತು ಆಗಿದೆ ಎಂದರು.

ವಿಶ್ವನಾಥ ಪೂಜಾರಿ ಅಧ್ಯಕ್ಷೀಯ ಭಾಷಣಗೈದು ಜೀವನ ಸಾಗಿಸಲು ಜಾತಿಯೂ ಬೇಕು, ದೇಶವೂ ಬೇಕು ಆದರೆ ದ್ವೇಷ ಇರದಿರಲಿ. ಸಾಮರಸ್ಯದ ಬದುಕು ಎಲ್ಲಕ್ಕೂ ಮಿಗಿಲಾಗಿರಲಿ ಇಂತಹ ಬದುಕಿಗೆ ಬಿಲ್ಲವರು ಪ್ರೇರಕರು ಎಂದರು.

ಸಂಘಕ್ಕೆ ಅನುಪಮ ಸೇವೆಗೈದು ಸಹಕರಿಸಿದ ಜಿಬಿಎಸ್ ಹಿರಿಯ ಸದಸ್ಯೆ ಶೋಭಾ ಡಿ.ಬೋಂಟ್ರಾ ಮತ್ತು ದಯಾನಂದ್ ಬೋಂಟ್ರಾ, ಮೋಹನ್ ಸಿ.ಪೂಜಾರಿ ಅಹ್ಮದಾಬಾದ್ ಮತ್ತು ಸುನಂದ ಮೋಹನ್, ಮನೋಜ್ ಸಿ.ಪೂಜಾರಿ ಮತ್ತು ರಂಜಿತಾ ಮನೋಜ್, ವಿಶ್ವನಾಥ ಜಿ.ಪೂಜಾರಿ ಸೂರತ್ ಮತ್ತು ಅಮಿತಾ ವಿಶ್ವನಾಥ್, ವಾಸು ಪಿ.ಪೂಜಾರಿ ಮತ್ತು ನಳಿನಿ ವಾಸು, ಸದಾಶಿವ ಪೂಜಾರಿ, ಮಾಜಿ ಸಂಚಾಲಕ ಸದಾನಂದ್ ಅಂಚನ್ ವಾಪಿ ಮತ್ತು ವಾಸು ವಿ.ಸುವರ್ಣ ಇವರನ್ನು ಅತಿಥಿಗಳು ಸನ್ಮಾನಿಸಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಸಂಘದ ವಿದ್ಯಾನಿಧಿಯಿಂದ ಪ್ರತಿಭಾವಂತ ವಿದ್ಯಾಥಿsðಗಳಿಗೆ ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು. ನೀಲಮ್ಮ ಪೂಜಾರಿ, ಕಲಾವಿದ ಸುಬು ಸಂತ್ಯಾರು ಮತ್ತಿತರ ಗಣ್ಯರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಜಯಂತಿ ಎಸ್ಕೆ ಹಳೆಯಂಗಡಿ, ಕೇತನ್ ಎಸ್ಕೆ ಹಳೆಯಂಗಡಿ, ಚಿರಾಗ್ ಬೋಂಟ್ರಾ, ಭಾರತ್ ಬ್ಯಾಂಕ್ ನಿರ್ದೇಶಕ ದಯಾನಂದ ಪೂಜಾರಿ ಕಲ್ವಾ, ಜಿ.ಸದಾನಂದ ಅಮೀನ್, ಮದನ್‌ಕುಮಾರ್ ಮೂಡಿಗೆರೆ, ಮತ್ತಿತರ ಗಣ್ಯರು ಸೇರಿದಂತೆ ಅಹ್ಮದಾಬಾದ್, ಬರೋಡ, ಸೂರತ್, ವಾಪಿ, ಅಂಕಲೇಶ್ವರ ಸೇರಿದಂತೆ ಜಿಬಿಎಸ್ ಶಾಖೆಗಳ ಮುಖ್ಯಸ್ಥರು, ಸದಸ್ಯರು, ಬಿಲ್ಲವ ಬಂಧುಗಳು, ಹಿತೈಷಿಗಳು ಹಾಜರಿದ್ದು ಉಪಸ್ಥಿತರಿದ್ದರು.

ಜಿಬಿಎಸ್ ಮಹಿಳಾ ಸದಸ್ಯರಿಂದ ಪ್ರಾರ್ಥನೆಯನ್ನಾಡಿದರು. ದಯಾನಂದ ಬೋಂಟ್ರಾ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ವಾಸು ವಿ.ಸುವರ್ಣ ಪ್ರಸ್ತಾವಿಕ ನುಡಿಗಳನ್ನಾಡಿದರು. ಸಚಿನ್ ಪೂಜಾರಿ ಭಿವಂಡಿ ಮತ್ತು ಭಾಸ್ಕರ್ ಸರಪಾಡಿ ಕಾರ್ಯಕ್ರಮ ನಿರೂಪಿಸಿದರು. ಸರಿತಾ ಎಸ್.ಪೂಜಾರಿ ವಂದಿಸಿದರು.

ಸಾಂಸ್ಕ್ರತಿಕ ಕಾರ್ಯಕ್ರಮವಾಗಿ ಗುರು ಶೈಲಜಾ ಮಧುಸೂಧನ್ ರಾವ್ ನಿರ್ದೇಶನದಲ್ಲಿ ನೃತ್ಯ ವೈಭವ, ವಿದ್ಯಾ ನಿಲಯ ಮತ್ತು ಜಿಬಿಎಸ್ ಸದಸ್ಯರು, ಮಹಿಳೆಯರು, ಮಕ್ಕಳು ನೃತ್ಯ ವೈಭವ, ಶ್ರೀ ಗುರು ನಾರಾಯಣ ಯಕ್ಷಗಾನ ಮಂಡಳಿ ಮುಂಬಯಿ `ಅಜ್ಜನ ಫಜ್ಜ’ ತುಳು ಯಕ್ಷಗಾನ ಪ್ರದರ್ಶಿಸಿತು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.