kallianpurdotcom: 9741001849
(ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಫೆ.೨೦: ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ (ರಿ.) ಪುಂಜಾಲಕಟ್ಟೆ ಇದರ ಪ್ರಧಾನ ರೂವಾರಿ ಎಂ.ತುಂಗಪ್ಪ ಬಂಗೇರ ನೇತೃತ್ವ ಹಾಗೂ ಮುಂಬಯಿ ಉದ್ಯಮಿ ಕಕ್ಯಪದವು ಕಮಲ ನಿವಾಸ ನಾರಾಯಣ ಶೆಟ್ಟಿ ಅವರ ಸಾರಥ್ಯದಲ್ಲಿ ೪೦ನೇ ವಾರ್ಷಿಕ ಸಂಭ್ರಮ ಹಾಗೂ ೧೬ನೇ ವರ್ಷದ ಪ್ರಯುಕ್ತ ಸಾಮೂಹಿಕ ವಿವಾಹ ಸಮಾರಂ ಭವನ್ನು ಇದೇ ಬರುವ ಮಾ.೨೪ನೇ ರವಿವಾರ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಸ್ವಸ್ತಿ ಶ್ರೀ ಶೋಭಕೃತ್ ನಾಮ ಸಂವತ್ಸರದ ಮೇಷ ಮಾಸ ದಿನ ಸಲುವ ದಿವಾ ಗಂಟೆ ೧೧.೩೨ ಕ್ಕೆ ಒದಗುವ ವೃಷಭ ಲಗ್ನ ಸುಮುಹೂರ್ತದಲ್ಲಿ ಸಾಮೂಹಿಕ ವಿವಾಹ ಸಮಾರಂಭ ಆಯೋಜಿಸಿದೆ.
ಅಂದು ಬೆಳಿಗ್ಗೆ ಶ್ರೀ ಕೃಷ್ಣಭಟ್ ಕಾರ್ಕಳ (ಮಾಜಿ ಪ್ರಧಾನ ಅರ್ಚಕರು, ಪುಂಜಾಲಕಟ್ಟೆ ಶ್ರೀ ಗೋಪಾಲಕೃಷ್ಣ ದೇವಸ್ಥಾನ) ಇವರ ಪೌರೋಹಿತ್ಯ ದಲ್ಲಿ ಸಾಮೂಹಿಕ ವಿವಾಹ ಸಮಾರಂಭ ಬಳಿಕ ಸಭಾ ಕಾರ್ಯಕ್ರಮದಲ್ಲಿ ೨೦೨೪ನೇ ವಾರ್ಷಿಕ ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ ಪ್ರದಾನ ಮತ್ತು ಸ್ವಸ್ತಿಕ್ ಸಂಭ್ರಮ ಪುರಸ್ಕಾರ ಪ್ರದಾನ ಸಮಾರಂಭ ನಡೆಯಲಿದೆ.
ಆ ಪ್ರಯುಕ್ತ ಮಾ.೨೩ನೇ ಶನಿವಾರ ಅಶ್ವತ್ಥಕಟ್ಟೆಯಲ್ಲಿ ಸಂಜೆ ೭.೦೦ ಗಂಟೆಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಯೊಂದಿಗೆ ಉಭಯ ಕಾರ್ಯಕ್ರಮಗಳಿಗೆ ಧಾರ್ಮಿಕ ವಿಧಾನಗಳೊಂದಿಗೆ ಚಾಲನೆ ನೀಡÀಲಾಗುವುದು. ಆ ನಿಮಿತ್ತ ಈ ಶುಭ ವಿವಾಹ ಸಮಾರಂಭಕ್ಕೆ ಸಕುಟುಂಬಿಕ ರಾಗಿ ಆಗಮಿಸಿ, ವಧು- ವರರನ್ನು ಆಶೀರ್ವದಿಸಬೇಕಾಗಿ ಪ್ರಧಾನ ಸಂಘಟಕ ಎಂ.ತುಂಗಪ್ಪ ಬಂಗೇರ (ಸಂಪರ್ಕ ಸಂಖ್ಯೆ 9449101216), ಸ್ವಸ್ತಿಕ್ ಫ್ರೆಂಡ್ಸ್ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಗೌರವಾಧ್ಯಕ್ಷ ಅಬ್ದುಲ್ಲಾ ಪಿ., ಸಂಚಾಲಕ ರಾಜೇಶ್ ಪಿ.ಪುಂಜಾಲಕಟ್ಟೆ, ಸಹ-ಸಂಚಾಲಕ ಅಬ್ದುಲ್ ಹಮೀದ್ ಮಲ್ಪೆ, ಕಾರ್ಯದರ್ಶಿ ಜಯರಾಜ್ ಅತ್ತಾಜೆ ಈ ಮೂಲಕ ವಿನಂತಿಸಿದ್ದಾರೆ.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.