Skip to main content

ಸಂತೆಕಟ್ಟೆ ಮೌಂಟ್ ರೋಸರಿ ಶಾಲೆಯ ಪ್ರೌಢಶಾಲಾ ವಿಭಾಗದ ಶಿಕ್ಷಕ- ರಕ್ಷಕ ಸಂಘದ ಸಭೆ.

By July 6, 2026Kannada News
kallianpurdotcom: Mob 9741001849
Official release from  Mount Rosary School, Santhekatte.

ಸಂತೆಕಟ್ಟೆ: ಮಕ್ಕಳಿಗೂ ಸ್ವಲ್ಪ ಸಮಯ ಕೊಡಿ ಹೆತ್ತವರು ಅನುದಿನ, ಅನುಕ್ಷಣ ತಮ್ಮ ಮಕ್ಕಳಿಗೋಸ್ಕರ ದುಡಿಯುತ್ತಾರೆ. ಅವರ ಭವಿಷ್ಯಕ್ಕೆ ಉಳಿಸಿ ಬೆಳೆಸಲು ಅವಿರತ ಶ್ರಮಿಸುತ್ತಾರೆ. ಆದರೆ ಬದುಕಿನ ಜಂಜಾಟದಲ್ಲಿ ಅವರಿಗೆ ಮಕ್ಕಳಿಗೆ ಸಮಯ ನೀಡಲು, ಮಾತನಾಡಲು, ಭಾವನೆಗಳನ್ನು ಆಲಿಸಲು, ಅವರಿಂದ ಕೇಳಲು ಸಮಯವೇ ಇರುವುದಿಲ್ಲ. ಈ ಸಮಯದಲ್ಲಿ ಮಗು ಮೊಬೈಲ್ ಅಥವಾ ಟಿವಿ, ಸಮಾಜಿಕ ಜಾಲತಾಣದಲ್ಲಿ ಮಗ್ನವಾಗಿರುತ್ತದೆ. ಇಲ್ಲಿಂದ ಅದು ತನ್ನ ಭಾವನಾತ್ಮಕ ಸಂಬಂಧ ರೀಲ್ಸ್ ಗಳನ್ನು ನೋಡಿ ಅದನ್ನೆ ರಿಯಲ್ ಎಂದು ಭಾವಿಸಿ ಸಂಬಂಧ ರೀಲ್ಸ್ ಗಳನ್ನು ನೋಡಿ ಅದನ್ನೆ ರಿಯಲ್ ಎಂದು ಭಾವಿಸಿ ಸಂಬಂಧ ವಿಮುಖಿಯಾಗುತ್ತದೆ. ದಯವಿಟ್ಟು ಮಕ್ಕಳಿಗೆ ಸಮಯ ಕೊಡಿ ಎಂದು ಮಣಿಪಾಲದ ಮಾಹೆ ಸಂಸ್ಥೆಯ ವಿದ್ಯಾರ್ಥಿ ಸಮುದಾಯದ ಆಪ್ತಸಮಾಲೋಚಕ ಡಾ|ರಾಯನ್ ಮಥಾಯಸ್ ಹೇಳಿದರು.

ಅವರು ಸಂತೆಕಟ್ಟೆ ಮೌಂಟ್ ರೋಸರಿ ಶಾಲೆಯ ಪ್ರೌಢಶಾಲಾ ವಿಭಾಗದ ಶಿಕ್ಷಕ- ರಕ್ಷಕ ಸಂಘದ ಸಭೆಯಲ್ಲಿ ಸಂಪನ್ಮೂಲ ವ್ಯೆಕ್ತಿಯಾಗಿ ಮಾತನಾಡಿದರು. ೨೦೨೫-೨೬ನೇ ಸಾಲಿನ ಅಧಕ್ಷೆ ಇರ್ಷಾದ್, ಉಪಾಧ್ಯಕ್ಷ ರಮೇಶ್ ಕುಂದರ್ ಅವರ ಸೇವೆಗಾಗಿ ಸನ್ಮಾನಿಸಿ ಮಾತನಾಡಿದ ಸಂಚಾಲಕ ಫಾ| ಡಾ| ರೋಕ್ ಡಿ’ಸೋಜ ಅತೀ ಹೆಚ್ಚು ಅತ್ಯುನ್ನತ ಶ್ರೇಣಿಗಳ ಜೊತೆಗೆ ನೂರು ಶೇಕಡಾ ಫಲಿತಾಂಶ ಪಡೆಯುವಲ್ಲಿ ಶಿಕ್ಷಕರೊಂದಿಗೆ  ಸಹಕರಿಸಿದ ಮಕ್ಕಳ ಹೆತ್ತವರನ್ನು ಶ್ಲಾಘಿಸಿದರು ಮುಖ್ಯ ಶಿಕ್ಷಕಿ ಸಂಘದ ರೂಪು ಶೇಷೆಗಳನ್ನು, ಶಾಲಾ ನಿಯಮಗಳನ್ನು ಸಭೆಗೆ ಸ್ಪಷ್ಟಪಡೆಸಿದರು.

ಶಿಕ್ಷಕಿಯಾರಾದ ಮೀನಾ ಮತ್ತು ಶೋಭಾ ಪ್ರಸ್ತುತ ಶೈಕ್ಷಣಿಕ ವರ್ಷಕ್ಕೆ ತರಗತಿವಾರು ಪೋಷಕ ಪ್ರತಿನಿಧಿಗಳನ್ನು ಆರಿಸಲು ಸಹಕರಿಸಿದರು. ಸಭೆಯ ಕಾರ್ಯದರ್ಶಿ ವನಿತಾ ವಾರ್ಷಿಕ ವರದಿಯನ್ನು ಮುಂದಿಟ್ಟರು. ವಿದ್ಯಾರ್ಥಿಗಳಿಂದ ವಿನೂತನ ರೀತಿಯಲ್ಲಿ ೨೦೨೫-೨೬ರ ಸಂಕ್ಷೀಪ್ತ ಪಕ್ಷಿನೋಟವನ್ನು ಹೆತ್ತವರಿಗೆ ಮನದಟ್ಟು ಮಾಡಿದರು. ಶಿಕ್ಷಕಿ ನ್ಯಾನ್ಸಿ ಸ್ವಾಗತಿಸಿದರು. ಲವೀನಾ ನಿರೂಪಿಸಿ, ಮಗ್ದೆಲೀನ್ ವಂದಿಸಿದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.