Skip to main content
www.kallianpur.com | Email : kallianpur7@gmail.com | Mob : 9741001849

ಮೌಂಟ್ ರೋಜರಿ ಸಂತೆಕಟ್ಟೆ ಆಂಗ್ಲ ಶಾಲೆಯಲ್ಲಿ ಸ್ವಾಗತೋತ್ಸವ.

By June 6, 2023June 7th, 2023News

kallianpurdotcom : 06/06/2023

“ಪ್ರತಿದಿನವು ದೇವರು ಕೊಟ್ಟ ವರದಾನವಾಗಿದೆ. ನಮಗೆ ದೇವರು ಮಗದೊಂದು ಶೈಕ್ಷಣೆಕ ವರ್ಷವನ್ನು ಅವನು ದಯಪಾಲಿಸಿದ್ದಾರೆ. ಈ ಶೈಕ್ಷಣಿಕ ಸಾಲಿನಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಗಳನ್ನು ಅನಾವರಣಗೊಳಿಸಿ ಬೆಳಸಿ ಪೋಷಿಸುವ ಜವಾಬ್ದಾರಿ ಶಾಲೆ ಮತ್ತು ಶಿಕ್ಷಕರದ್ದು. ಪಠ್ಯ ಪಠ್ಯೇತರ ಚಟುವಟಿಕೆಗಳಲ್ಲಿ ಲವಲವಿಕೆಯಿಂದ ಪಾಲ್ಗೊಂಡು ಅವಕಾಶಗಳ ಸದುಪಯೋಗ ಮಾಡಿಕೊಳ್ಳಬೇಕು” ಎಂದು ಧರ್ಮಭಗಿನಿ ಸಿ ಅನ್ಸಿಲ್ಲ ಡಿಮೆಲ್ಲೊ ಹೇಳಿದರು. ಅವರು ಸಂತೆಕಟ್ಟೆ ಮೌಂಟ್ ರೋಜರಿ ಶಾಲೆಯ ಅರಂಭತ್ಸೋವದಲ್ಲಿ ಶಾಲೆಯ ನೂತನ ಮುಖ್ಯ ಶಿಕ್ಷಕಿ ,ಶಿಕ್ಷಕವೃಂದ ಮತ್ತು ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳುವ ಸ್ವಾಗತೋತ್ಸವದಲ್ಲಿ ಮಾತನಾಡಿದರು.

ನೂತನವಾಗಿ ಜವಾಬ್ದಾರಿಯನ್ನು ಸ್ವೀಕರಿಸಿದ ಶಾಲಾ ಮುಖ್ಯಸ್ಥೆಯನ್ನು ಶಿಕ್ಷಕಿ ವನೀತಾ ಪರಿಚಯಿಸಿ ಸ್ವಾಗತಿಸಿದರು. ಅತ್ಲೇಟಿಕ್ಸ್ ವಿಭಾಗದಲ್ಲಿ ನಮ್ಮ ಜಿಲ್ಲೆಯನ್ನು ರಾಜ್ಯ ಮಟ್ಟದಲ್ಲಿ ಪ್ರತಿನಿಧಿಸಿದ ವಿದ್ಯಾರ್ಥಿ ಸಚಿನ್ ಆಚಾರ್ಯ ಹೂಗುಚ್ಛವನ್ನು ನೀಡಿ ಬರಮಾಡಿಕೊಂಡರು.ಶಾಲೆಗೆ ಹೊಸದಾಗಿ ನೇಮಿಸಲ್ಪಟ್ಟ ಶಿಕ್ಷಕರನ್ನು ಮತ್ತು ಹೊಸದಾಗಿ ಪ್ರವೇಶ ಪಡೆದ ವಿದ್ಯಾರ್ಥಿಗಳನ್ನು ಹೂ ನೀಡಿ ಸ್ವಾಗತಿಸಲಾಯಿತು.

ಬಾಳೆಗಿಡಕ್ಕೆ ವಿಲೆಗಳಲ್ಲಿ ಕನ್ನಡ, ಹಿಂದಿ ,ಇಂಗ್ಲೀಷ್ ಅಕ್ಷರಗಳನ್ನು ,ಗಣಿತ ವಿಜ್ಞಾನದ ಸೂತ್ರಗಳನ್ನು ಪೋಣಿಸಿ ವಿಶಿಷ್ಟ ರೀತಿಯಲ್ಲಿ ಶಾಲಾ ಆರಂಭತ್ಸೋವವನ್ನು ಉದ್ಘಾಟಿಸಲಾಯಿತು ಶಾಲೆಯನ್ನು ಬಲೂನು, ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು. ಶಾಲಾ ವಾದ್ಯವೃಂದದೊಂದಿಗೆ ತರಗತಿಗಳಿಗೆ ಪ್ರವೇಶಿಸುವ ವಿದ್ಯಾರ್ಥಿಗಳಿಗೆ ಪನ್ನೀರು ಚುಮುಕಿಸಿ ಆದರದಿಂದ ಸ್ವಾಗತಿಸಲಾಯಿತು. ಶಿಕ್ಷಕ ಆಲ್ವಿನ್ ದಾಂತಿ ನಿರೂಪಿಸಿ ಶಿಕ್ಷಕಿ ಸುಚಿತ್ರಾ ವಂದಿಸಿದರು ಎಲ್ಲಾ ಮಕ್ಕಳಿಗೆ ಸಿಹಿ ಹಂಚಲಾಯಿತು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.