Skip to main content
www.kallianpur.com | Email : kallianpur7@gmail.com | Mob : 9741001849

ಮುಂಬಯಿ ಕನ್ನಡ ಸಂಘದ ೮೨ನೇ ವಾರ್ಷಿಕ ಮಹಾಸಭೆ ಅಧ್ಯಕ್ಷರಾಗಿ ಗುರುರಾಜ ಎಸ್.ನಾಯಕ್, ಪ್ರ| ಕಾರ್ಯದರ್ಶಿಯಾಗಿ ಸೋಮನಾಥ ಎಸ್.ಕರ್ಕೇರ ಪುನರಾಯ್ಕೆ.

By July 14, 2023Mumbai News
Reported by : Tara Rons Bantwal.

ಮುಂಬಯಿ,(ಆರ್‌ಬಿಐ) ಜು.೧೪: ನಗರದ ಅತ್ಯಂತ ಹಿರಿಯ ಕನ್ನಡ ಸಂಸ್ಥೆಗಳ ಪೈಕಿ ಒಂದಾಗಿರುವ ಮಾಟುಂಗಾ ಪೂರ್ವದ ಮುಂಬಯಿ ಕನ್ನಡ ಸಂಘದ ಅಧ್ಯಕ್ಷರಾಗಿ ಗುರುರಾಜ ಎಸ್. ನಾಯಕ್ ಪುನರಾಯ್ಕೆಗೊಂಡಿದ್ದಾರೆ. ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಸೋಮನಾಥ ಎಸ್.ಕರ್ಕೇರ ಮತ್ತು ಕೋಶಾಧಿಕಾರಿಯಾಗಿ ರಾಜೇಂದ್ರ ಗಡಿಯಾರ್ ಆಯ್ಕೆಗೊಂಡರು. ದಾದರ್ ಇಲ್ಲಿನ ಹಿಂದೂ ಕಾಲನಿಯಲ್ಲಿರುವ ಸಂಘದ ಕಾರ್ಯಾಲಯದಲ್ಲಿ ಇತ್ತೀಚಿಗೆ ಜುಲೈ೮ ರಂದು ಜರಗಿದ ವಾರ್ಷಿಕ ಮಹಾಸಭೆಯಲ್ಲಿ ೨೦೨೩-೨೦೨೫ನೇ ವರ್ಷದ ಸಲುವಾಗಿ ಕಾರ್ಯಕಾರಿ ಸಮತಿಯನ್ನು ರಚಿಸಲಾಯಿತು. ಡಾ.ಎಸ್.ಕೆ ಭವಾನಿ (ಉಪಾಧ್ಯಕ್ಷರು), ಮಲ್ಲಿಕಾರ್ಜುನ ಬಡಿಗೇರ(ಜೊತೆ ಕಾರ್ಯದರ್ಶಿ), ಡಾ| ರಜನಿ ವಿ.ಪೈ (ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ), ಪ್ರಭಾ ಸುವರ್ಣ(ಮಹಿಳಾ ವಿಭಾಗದ ಕಾರ್ಯದರ್ಶಿ), ನರ್ಮದಾ ಕಿಣಿ (ಮಹಿಳಾ ವಿಭಾದ ಉಪಾಧ್ಯಕ್ಷೆ), ಸಮಿತಿ ಸದಸ್ಯರಾಗಿ ಎಸ್.ಕೆ.ಪದ್ಮನಾಭ, ಸುಧಾಕರ ಸಿ.ಪೂಜಾರಿ, ಚಿದಾನಂದ ಮಗದಮ, ನಾರಾಯಣ ರಾವ್, ರಾಮಚಂದ್ರ ಭಟ್, ನಾಗೇಶ್ ಕುಂದರ್, ಸತೀಶ್ ಬಂಗೇರ, ಸುಗುಣ ವಿ.ಶೆಟ್ಟಿ, ಸಂಧ್ಯಾ ಪ್ರಭು , ವಿಠಲ ಆಚಾರ್ಯ ಇವರನ್ನು ಆಯ್ಕೆ ಮಾಡಲಾಯಿತು.

ಎಸ್.ಕೆ.ಪದ್ಮನಾಭ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಮಹಾ ಸಭೆಯಲ್ಲಿ ಗತ ವರ್ಷದ ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರಗಳನ್ನು ಮಂಜೂರು ಮಾಡಲಾಯಿತು. ನಂತರ ಸಂಘದ ಮುಂದಿನ ಕಾರ್ಯಯೋಜನೆಗಾಗಿ ನಿಧಿ ಸಂಗ್ರಹಿಸುವ ಬಗ್ಗೆ ಚರ್ಚಿಸಲಾಗಿ ಸದಸ್ಯರು ತಾವು ತನು ಮನ ಧನದಿಂದ ಸಹಕರಿಸುವುದಾಗಿ ತಿಳಿಸಿದರು. ಸಭೆಯಲ್ಲಿ ಹಾಜರಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ[ಇಸ್ರೋ] ವಿಜ್ಞಾನಿ ಚಿದಾನಂದ ಮಗದಮ್ ಇವರು ತನ್ನ ಸಂಪರ್ಕದಲ್ಲಿರುವ ಕೆಲವು ಮಂದಿ ದಾನಿಗಳಿಂದ ನಿಧಿ ಸಂಗ್ರಹಿಸಿ ಕೊಡುವುದಾಗಿ ತಿಳಿಸಿದರು. ಅಲ್ಲದೆ ಸತೀಶ್ ಎನ್. ಬಂಗೇರ ಮುಂದಿನ ತಿಂಗಳಲ್ಲಿ ಸಂಘಕ್ಕೆ ರೂಪಾಯಿ ಇಪ್ಪತ್ತೆದು ಸಾವಿರ ಧನ ಸಹಾಯ ನೀಡುವ ಆಶ್ವಾಸನೆ ಇತ್ತರು.

ಸಭೆಯಲ್ಲಿ ಹಿರಿಯ ಸಮಾಜ ಸೇವಕ ಎನ್.ಪಿ.ಸುವರ್ಣ ಅವರನ್ನು ಮುಂಬಯಿ ಕನ್ನಡ ಸಂಘದ ಘನ ಮಹಾ ಪೋಷಕರನ್ನಾಗಿ  ಸೇರಿಸಿಕೊಳ್ಳಲಾಯಿತು. ಸಭಿಕರ ಪೈಕಿ ಮಾತನಾಡುತ್ತಾ ರಜನಿ ವಿ. ಪೈ. ಎನ್.ಪಿ.ಸುವರ್ಣ, ಪ್ರಭಾ ಸುವರ್ಣ, ನರ್ಮದಾ ಕಿಣಿ, ನಾಗೇಶ್ ಕುಂದರ್, ಎಸ್.ಕೆ. ಸುಂದರ್, ಸತೀಶ್ ಎನ್. ಬಂಗೇರ, ಎಸ್.ಕೆ.ಪದ್ಮನಾಭ, ನಾರಾಯಣ ರಾವ್ ಸಂಘದ ಪ್ರಗತಿಗಾಗಿ ತಮ್ಮ ಅಮೂಲ್ಯ
ಸಲಹೆಗಳನ್ನು ನೀಡಿದರು.

ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ ಗುರುರಾಜ ಎಸ್.ನಾಯಕರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಇನ್ನು ಎರಡು ಮೂರು ವರ್ಷಗಳಲ್ಲಿ ಸಂಘದ ನೂತನ ಕಾರ್ಯಾಲಯವು ಸಿದ್ಧವಾಗಲ್ಲಿದ್ದು ಇತರ ನಿರ್ಮಾಣ ಕಾರ್ಯಭರದಿಂದ ಸಾಗುತ್ತಿದೆ. ಇಲ್ಲಿ ಸಂಘದ ಕಚೇರಿ, ಪುಸ್ತಕ ಭಂಢಾರ ಹಾಗೂ ಸಣ್ಣ ಪುಟ್ಟ ಕಾರ್ಯಕ್ರಮ ನಡೆಸಲು ಸಾಕಷ್ಟು ಸ್ಥಳಾವಕಾಶವಿದ್ದರೂ ಅದರ ಒಳಾಂಗಣ ವಿನ್ಯಾಸಕ್ಕೆ ಹಣದ ಅವಶ್ಯಕತೆ ಇರುವ ಕಾರಣ ಸದಸ್ಯರ ತುಂಬು ಹೃದಯದ ಸಹಕಾರವನ್ನು ಕೋರಿದರು. ಗೌರವ ಪ್ರಧಾನ ಕಾರ್ಯದರ್ಶಿ ಸೋಮನಾಥ ಎಸ್. ಕರ್ಕೇರ ವಂದಾನಾರ್ಪಣೆಗೈದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.