Skip to main content
www.kallianpur.com | Email : kallianpur7@gmail.com | Mob : 9741001849

ಒಕ್ಕಲಿಗರ ಸಂಘ ಮಹಾರಾಷ್ಟ್ರದಿಂದ ಶಿಕ್ಷಣ ಮಾಹಿತಿ ಶಿಬಿರ-ನೋಟ್ ಪುಸ್ತಕ ವಿತರಣೆ ಮಕ್ಕಳಲ್ಲಿನ ಜ್ಞಾನವನ್ನು ಅಂದಾಜಿಸಿ ಪ್ರೋತ್ಸ್ಸಾಹಿಸಬೇಕು: ಡಾ| ರಿತೇಶ್ ಸಿರಂಗೇಕರ್.

By April 12, 2024Mumbai News
kallianpurdotcom: 9741001849
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಎ.೦೬: ಬಾಲ್ಯಾವಸ್ಥೆಯಲ್ಲಿ ಮಕ್ಕಳ ಬುದ್ಧಿ ತೀಕ್ಷ್ಣವಾಗಿದ್ದು, ಮಕ್ಕಳಲ್ಲಿನ ಅರಿವಿನ ಮಿತಿಯನ್ನು ಅಂದಾಜಿಸಿ ಮಕ್ಕಳನ್ನು ಪ್ರೋತ್ಸ್ಸಾಹಿಸಬೇಕೇ ಹೊರತು ಪೋಷಕರ ಇಚ್ಫೆ ಯಂತೆ ಬಲವಂತವಾಗಿ ಎಂದಿಗೂ ನಡೆಸಿಕೊಳ್ಳ  ಬಾರದು. ಇದು ಕೆಟ್ಟ ಪರಿಣಾಮಕ್ಕೆ ಕಾರಣವಾಗುತ್ತದೆ. ಬರೇ ಪದವೀಧ ರರಾಗಲು ಶಿಕ್ಷಣ ಸಾಲದು, ಬದಲಾಗಿ ಬದುಕುವ ಹಾದಿಯನ್ನು ರೂಪಿಸುವಲ್ಲಿ ಶಿಕ್ಷಣಕ್ಕೆ ಒತ್ತುನೀಡಬೇಕು. ಆದ್ದರಿಂದ ಮಕ್ಕಳನ್ನು ಎಂದಿಗೂ ಅಸಮಾಧಾನ ಪಡಿಸದೆ ಅವರಲ್ಲಿನ ಪ್ರತಿಭೆಗೆ ತಕ್ಕಂತೆ ಬೆಳೆಸುವ ಪ್ರಯತ್ನ ಪೋಷಕರ ಬಲುದೊಡ್ಡ ಜವಾಬ್ದಾರಿ ಯಾಗಿದೆ. ಸ್ವಪ್ರತಿಭೆಯಿಂದ ಬೆಳೆದವರೇ ಜೀವನದಲ್ಲಿ ಸಾಧಕರೆಣಿಸಿಕೊಳ್ಳುತ್ತಾರೆ ಎಂದು ಬೊರಿವಲಿ ಪೂರ್ವದಲ್ಲಿನ ವೀಣಾ ಕಾಲೇಜ್ ಆಫ್ ಕಾಮರ್ಸ್ ಎಂಡ್ ಸಾಯನ್ಸ್ ಇದರ ಪ್ರಾಂಶುಪಾಲ ಡಾ| ರಿತೇಶ್ ಸಿರಂಗೇಕರ್ ತಿಳಿಸಿದರು.

ಬೃಹನ್ಮುಂಬಯಿಯಲ್ಲಿನ ಪ್ರತಿಷ್ಠಿಟ ಸಂಸ್ಥೆಯಲ್ಲೊಂದಾದ ಒಕ್ಕಲಿಗರ ಸಂಘ ಮಹಾರಾಷ್ಟ್ರ (ರಿ.) ಸಂಸ್ಥೆಯು ಇಂದಿಲ್ಲಿ ರವಿವಾರ ಅಪರಾಹ್ನ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದ ಸಭಾಗೃಹದಲ್ಲಿ ಆಯೋಜಿಸಿದ್ದ ವಿದ್ಯಾರ್ಥಿ ಶಿಕ್ಷಣದ ಬಗ್ಗೆ ವಿಶೇಷ ಮಾಹಿತಿ ಶಿಬಿರದಲ್ಲಿ ಸಂಪನ್ಮೂಲವ್ಯಕ್ತಿ ಆಗಿದ್ದು ಡಾ| ಸಿರಂಗೇಕರ್ ಮಾತನಾಡಿದರು. ಡಾ| ಸಿರಂಗೇಕರ್ ಸಂಪನ್ಮೂಲವ್ಯಕ್ತಿ ಆಗಿದ್ದು ೨೦೨೩ ಮತ್ತು ೨೦೨೪ನೇ ಸಾಲಿನ ಪರೀಕ್ಷೆ ಪೂರೈಸಿ ಉನ್ನತ ಶಿಕ್ಷಣಕ್ಕೆ ಸಿದ್ಧತೆ ನಡೆಸುತ್ತಿತುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನಗೈದು ಸೂಕ್ತ ಸಲಹೆಗಳನ್ನಿತ್ತರು.

ಒಕ್ಕಲಿಗರ ಸಂಘ ಮಹಾರಾಷ್ಟ್ರ ಇದರ ಅಧ್ಯಕ್ಷ ಕೆ.ರಾಜೇಗೌಡ ಸಭಾಧ್ಯಕ್ಷತೆ ವಹಿಸಿ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನಿತ್ತರು. ಗೌರವಾಧ್ಯಕ್ಷ ರಂಗಪ್ಪ ಸಿ.ಗೌಡ, ಉಪ ಗೌರವಾಧ್ಯಕ್ಷ ಜಿತೇಂದ್ರ ಜೆ.ಗೌಡ, ಗೌ| ಪ್ರ| ಕಾರ್ಯ ದರ್ಶಿ ಗಂಗಾಧರ್ ಎನ್.ಗೌಡ, ಗೌ| ಪ್ರ| ಕೋಶಾಧಿಕಾರಿ ದೀಪಕ್ ಆರ್.ಗೌಡ, ಜೊತೆ ಕಾರ್ಯದರ್ಶಿ ರವಿ ಪಿ.ಗೌಡ, ಜೊತೆ ಕೋಶಾಧಿಕಾರಿ ಅಶೋಕ್ ಕೆ.ಗೌಡ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಮಂಜುನಾಥ್ ಸಿ.ಗೌಡ, ಸದಸ್ಯರಾದ ಹೆಚ್.ಆರ್ ಚೌಡಪ್ಪ, ಧನಂಜಯ ಗೌಡ, ಮಹಿಳಾ ವಿಭಾಗದ ಮುಖ್ಯಸ್ಥೆ ಲಲಿತಾ ದೀಪಕ್ ಗೌಡ, ಲಕ್ಷ್ಮಿ ವೆಂಕಟೇಶ್ ಗೌಡ ಮತ್ತಿತರ ಸದಸ್ಯರು ವೇದಿಕೆಯಲ್ಲಿದ್ದು ಸಂಪನ್ಮೂಲವ್ಯಕ್ತಿ ಗಳನ್ನು ಸನ್ಮಾನಿಸಿ ಗೌರವಿಸಿದರು.

ಒಕ್ಕಲಿಗರ ಧೀಶಕ್ತಿ ಮಹಾಗುರು ದೈವೈಕ್ಯ ಶ್ರೀ ಬಾಲಗಂಗಾಧರ ನಾಥ ಸ್ವಾಮೀಜಿ ಅವರ ಅನುಗ್ರಹ ಮತ್ತು ದೂರ ದೃಷ್ಠಿತ್ವದ ಮಾರ್ಗದರ್ಶನದ ಲ್ಲಿ ಅಸ್ತಿತ್ವಕ್ಕೆ ತರಲಾದ ಶ್ರೀ ಆದಿಚುಂಚನಗಿರಿ ಸೇವಾ ಸಮಿತಿ ಮುಂಬಯಿ ಪರಿವರ್ತಿತ ಒಕ್ಕಲಿಗರ ಸಂಘ ಮಹಾರಾಷ್ಟ್ರ ಸಂಸ್ಥೆಯ ಪರವಾಗಿ ಒಕ್ಕಲಿಗರ ಸಂಘದ ಪರವಾಗಿ ವೇದಿಕೆಯಲ್ಲಿನ ಗಣ್ಯರು ಮಕ್ಕಳಿ ಗೆ ಪ್ರತಿಭಾ ಪುರಸ್ಕಾರ, ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಯ ಮಕ್ಕಳಿಗೆ ಉಚಿತ ಲೇಖನಿ ಪುಸ್ತಕಗಳನ್ನು ವಿತರಿಸಿದರು.

ಮಕ್ಕಳನ್ನು ಮೊಬಾಯ್ಲ್ ಮುಕ್ತರನ್ನಾಗಿಸಿದಾಗ ಅವರು ಮನೋಬಲಶಾಲಿಗಳಾಗುತ್ತಾರೆ. ಸಮಾಜವು ಒದಗಿಸುವ ಫಲಾನುಭವವನ್ನು ಪಡೆದು ಉತ್ತಮವಾಗಿ ಕಲಿತು ದೇಶದ ಸದ್ಪ್ರಜೆಗಳಾಗಬೇಕು. ಯಾವೊತ್ತೂ ಶಿಕ್ಷಣದಿಂದ ವಂಚಿತ ರಾಗದೆ ಸದಾ ಜಾಗೃತರಾಗಿದ್ದು ಜಾಗತೀಕರಣ ಎದುರಿಸುವರೇ ಸಿದ್ಧರಾಗಬೇಕು ಎಂಬುವುದೇ ನಮ್ಮ ಆಶಯವಾಗಿ ದೆ ಎಂದು ರಂಗಪ್ಪ ಗೌಡ ತಿಳಿಸಿದರು.

ಸಮಾಜದ ಮಕ್ಕಳನ್ನು ಸುಶಿಕ್ಷಿತರನ್ನಾಗಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ. ಇದು ವರ್ಷಂಪ್ರತಿ ನಡೆಸಲು ಯೋಚಿಸಿದ್ದೇವೆ. ಮಕ್ಕಳು ಸಮಾಜದ ಸದೃಢ ಪ್ರಜೆಗಳಾಗಿ ಭವ್ಯ ಬದುಕನ್ನು ಕಟ್ಟಿಕೊಳ್ಳಲು ನಮ್ಮದು ಪ್ರೇರಣಾಶಕ್ತಿಯಷ್ಟೇ ಎಂದು ರಾಜೇ ಗೌಡ ತಿಳಿಸಿದರು.

ಮಹಿಳಾ ಮಂಡಳಿಯ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆದಿಗೊಂಡಿತು. ರಂಗಪ್ಪ ಸಿ.ಗೌಡ ಅವರು ಶ್ರೀ ಚೆನ್ನ ಕೇಶವ, ಶ್ರೀ ಕಾಲಭೈರ ವೇಶ್ವರಸ್ವಾಮಿ, ಶ್ರೀ ಗಂಗಾಧರೇಶ್ವರಸ್ವಾಮಿಗೆ ಆರಾಧಿಸಿ ಕಾರ್ಯಕ್ರಮಕ್ಕೆ ವಿಧಿವತ್ತಾಗಿ ಚಾಲನೆಯನ್ನಿತ್ತರು. ಪ್ರೊ| ಡಾ| ಬಲರಾಮ ಗೌಡ ಅವರು ಡಾ| ಸಿರಂಗೇಕರ್ ಅವರನ್ನು ಪರಿಚಯಿಸಿ ಸ್ಲೆಡ್‌ಶೋ ಮುಖೇನ ಮಾರ್ಗಸೂಚಿ ನೀಡಿದರು. ಪುಷ್ಪಲತಾ ಗೋವಿಂದೆ ಗೌಡ ಕಾರ್ಯಕ್ರಮ ನಿರೂಪಿಸಿದರು. ಪ್ರೊ| ಚೇತನ್ ಗೌಡ ಪ್ರಸ್ತಾವನೆಗೈದು ವಂದಿಸಿದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.