(ಚಿತ್ರ /ವರದಿ : ತಾರ ರೋನ್ಸ್ ಬಂಟ್ವಾಳ್)
ಮುಂಬಯಿ: ಮೇ.೩೦: ಉಪನಗರ ಪಾಲ್ಘರ್ ಜಿಲ್ಲೆಯಲ್ಲಿ ಉಡುಪಿ ಮೂಲದ ಆಲ್ಬರ್ಟ್ ಡಬ್ಲ್ಯು.ಡಿಸೋಜಾ (ಪಾಂಗ್ಳ) ಆಡಳಿತ್ವದ ಅಲ್ಡೇಲ್ ಎಜ್ಯುಕೇಶನ್ ಟ್ರಸ್ಟ್ನ ಸಮೂಹದ ಸೈಂಟ್ ಜೋನ್ ಟೆಕ್ನಿಕಲ್ ಎಂಡ್ ಎಜ್ಯುಕೇಶನಲ್ ವಿದ್ಯಾಲಯದ ಹನ್ನೊಂದನೇ ವಾರ್ಷಿಕ ಘಟಿಕೋತ್ಸವವು ಇತ್ತೀಚೆಗೆ (ಮೇ.೨೭) ಕಾಲೇಜು ಕ್ಯಾಂಪಸ್‌ನಲ್ಲಿನ ಸೈಂಟ್ ಜೋನ್ ಮಹಾವಿದ್ಯಾಲಯದ ಭವ್ಯ ಸಭಾಗೃಹದಲ್ಲಿ ನೇರವೇರಿತು.
ಸೈಂಟ್ ಜೋನ್ ಇನ್‌ಸ್ಟಿಟ್ಯೂಟ್ ಆಫ್ ಫಾರ್ಮಸಿ, ಸೈಂಟ್ ಜೋನ್ ಇನ್‌ಸ್ಟಿಟ್ಯೂಟ್ ಆಫ್ ಮಾನವಿಕ ಮತ್ತು ವಿಜ್ಞಾನ (ಹ್ಯೂಮ್ಯಾನಿಟಿಸ್ ಆ್ಯಂಡ್ ಸೈನ್ಸ್ಸ್) ಹಾಗೂ ಸೈಂಟ್ ಜೋನ್ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಎಂಡ್ ಎಂಎಂಎಸ್ ವಿಭಾಗದ ಘಟಿಕೋತ್ಸವ ನೆರವೇರಿಸಲಾಗಿದ್ದು ಬಾಟು ಲೋನೆರ್‌ನ ಮತ್ತು ಎನ್‌ಪಿಸಿಐಎಲ್ ಲಿಮಿಟೆಡ್ ಮುಂಬಯಿ ಮಾಜಿ ಮೊದಲ ಉಪಕುಲಪತಿ ಡಾ| ಜಿ.ವಿ ಗೈಕಾರ್ ಪದವಿ ಪ್ರದಾನಗೈದರು.
ಸಮಾರಂಭದಲ್ಲಿ ಆಲ್ಡೇಲ್ ಎಜ್ಯುಕೇಶನ್ ಟ್ರಸ್ಟ್ನ ಕಾರ್ಯಾಧ್ಯ ಆಲ್ಬರ್ಟ್ ಡಬ್ಲೂ.ಡಿಸೋಜಾ, ಕಾರ್ಯದರ್ಶಿ ಎಲ್ವಿನಾ ಎ.ಡಿಸೋಜಾ, ಕೋಶಾಧಿಕಾರಿ ಎಲೈನ್ ಆರ್.ಬುಥೆಲ್ಲೋ, ಸದಸ್ಯ ಆಲ್ಡ್ರಿಜ್ ಎ.ಡಿಸೋಜಾ, ಉಪ ಕ್ಯಾಂಪಸ್ ನಿರ್ದೇಶಕಿ ಮತ್ತು ಎಸ್‌ಜೆಸಿಎಫ್‌ಆರ್ ಪ್ರಾಂಶುಪಾಲೆ ಡಾ| ಸವಿತಾ ತೌರೊ, ಎಸ್‌ಜೆಸಿಇಎಂ ಪ್ರಾಂಶುಪಾಲ ಡಾ| ಜಿ.ವಿ ಮುಳಗುಂದ, ಸೈಂಟ್ ಜೋನ್ ಮಾನವಿಕ ಮತ್ತು ವಿಜ್ಞಾನ ಕಾಲೇಜು ಮುಖ್ಯಸ್ಥ ಡಾ| ಬೃಜಬಂಧು ದಾಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಾಷ್ಟ್ರ ನಿರ್ಮಾಣದಲ್ಲಿ ಕೊಡುಗೆ ನೀಡಲು ಸದ್ಗುಣಗಳು ಮತ್ತು ನೀತಿಗಳನ್ನು ಉಳಿಸಿಕೊಳ್ಳಲು ಅವರು ಪದವೀಧರರನ್ನು ಅಭಿನಂದಿಸಿ, ಪ್ರೇರೇಪಿಸಿದರು. ಜೀವನದ ವಿವಿಧ ಹಂತಗಳಲ್ಲಿ ವಿಭಿನ್ನ ಪ್ರಮಾಣದಲ್ಲಿ ಬರುವ ಸಮಯ, ಶಕ್ತಿ ಮತ್ತು ಹಣವನ್ನು ಉತ್ತಮವಾಗಿ ಬಳಸಿಕೊಳ್ಳುವ ಬಗ್ಗೆಯೂ ಆಲ್ಬರ್ಟ್ ಡಿಸೋಜಾ ಪ್ರಸ್ತವನೆಯಲ್ಲಿ ತಿಳಿಸಿದರು. ಡಾ| ಜಿ.ವಿ ಗೈಕರ್ ಮಾತನಾಡಿ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಯಶಸ್ವಿಯಾಗಲು ಅಗತ್ಯವಾದ ಆಜೀವ ಕಲಿಕೆಯಂತಹ ಅಂಶಗಳ ಮೇಲೆ ಅವರು ಮಾಹಿತಿ ನೀಡಿದರು. ಭವಿಷ್ಯದ ಪ್ರಯತ್ನಗಳಲ್ಲಿ ಯಶಸ್ವಿಯಾಗಲು ಧೈರ್ಯ ಮತ್ತು ಸಹಯೋಗ ಮತ್ತು ಪರಿಣತಿಯನ್ನು ಹಂಚಿಕೊಳ್ಳುವ ಅಗತ್ಯವನ್ನು ಅವರು ಒತ್ತಿ ಹೇಳಿದರು.
ಸೈಂಟ್ ಜೋನ್ ಇಂಟರ್‌ನ್ಯಾಷನಲ್ ಸಿಬಿಎಸ್‌ಇ ಶಾಲಾ ವಿದ್ಯಾರ್ಥಿಗಳ ಸ್ಕೂಲ್‌ಬ್ಯಾಂಡ್‌ನ ನೀನಾದದೊಂದಿಗೆ ಪದವಿಧರ ವಿದ್ಯಾರ್ಥಿಗಳು ಮತ್ತು ಗಣ್ಯರನ್ನು ಸಭಾಂಗಣಕ್ಕೆ ಕರೆತರಲಾಯಿತು. ನಂತರ ಜಾಗತಿಕ ಶಾಂತಿ ನೆಮ್ಮದಿಯ ಬಾಳಿಗಾಗಿ ಸಾರ್ವತ್ರಿಕ ಪ್ರಾರ್ಥನೆ ನಡೆಸಿ ಸರ್ವಶಕ್ತ ದೇವರಿಗೆ ಪ್ರಾರ್ಥಿಸಿ ಸರಸ್ವತಿ ವಂದನೆಯೊಂದಿಗೆ ದೀಪ ಬೆಳಗಿಸಿ ಸಮಾರಂಭಕ್ಕೆ ಚಾಲನೆಯನ್ನೀಡಲಾಯಿತು. ಆಲ್ಬರ್ಟ್ ಡಬ್ಲ್ಯು ಡಿಸೋಜ ಸ್ವಾಗತಿಸಿ ಪ್ರಸ್ತಾವನೆಗೈದರು. ಎಐಸಿಟಿಇಯ ಗೌರವಾನ್ವಿತ ಅಧ್ಯಕ್ಷ ಪ್ರೊ| ಅನಿಲ್ ಡಿ.ಸಹಸ್ತ್ರಬುದ್ಧೆ ಮತ್ತು ಮುಂಬಯಿ ವಿಶ್ವವಿದ್ಯಾಲಯದ ಗೌರವಾನ್ವಿತ ಉಪಕುಲಪತಿ ಪ್ರೊ| ಡಿ.ಟಿ.ಶಿರ್ಕೆ ಇವರ ವೀಡಿಯೊ ಭಾಷಣವನ್ನು ಭಿತ್ತರಿಸಲಾಯಿತು.
ಎಸ್‌ಜೆಸಿ ಫಾರ್ಮಸಿ ೭೬ ವಿದ್ಯಾರ್ಥಿಗಳು ಮತ್ತು ಎಸ್‌ಜೆಸಿ ಹ್ಯೂಮ್ಯಾನಿಟಿಸ್ ಆ್ಯಂಡ್ ಸೈನ್ಸ್ಸ್ನ ೨೩೯ ವಿದ್ಯಾರ್ಥಿಗಳು ಹಾಗೂ ಎಸ್‌ಜೆಸಿ ಇಂಜಿನಿಯರಿಂಗ್ ಮತ್ತು ಎಂಎಂ ಎಸ್ ೪೧೫ ವಿದ್ಯಾರ್ಥಿಗಳು ಪ್ರಮಾಣಪತ್ರ ಸ್ವೀಕರಿಸಿದರು. ಆಯಾಯ ಕಾಲೇಜುಗಳ ಪ್ರಾಂಶುಪಾಲರು ವಂದಿಸಿದ್ದು ರಾಷ್ಟ್ರಗೀತೆಯೊಂದಿಗೆ ಘಟಿಕೋತ್ಸವ ಸಮಾಪನ ಕಂಡಿತು. ಕೊನೆಯಲ್ಲಿ ವಿಭಾಗವಾರು ಫೋಟೊ ಸೆಷನ್ ನಡೆಸಿ ವಿದ್ಯಾರ್ಥಿಗಳಿಗೆ ಜೀವಮಾನದ ಪ್ರಮಾಣಪತ್ರ, ಸ್ಮರಣಿಗಳನ್ನಿತ್ತು ಗೌರವಿಸಲಾಯಿತು.
ಬ್ಯಾಂಕ್ ಆಫ್ ಬರೋಡಾ ಶೈಕ್ಷಣಿಕ ಮತ್ತು ಕ್ರೀಡೆಗಳಲ್ಲಿ ಶ್ರೇಷ್ಠತೆಗಾಗಿ ನಗದು ಬಹುಮಾನವನ್ನು ತಲಾ ರೂ.೩೧,೦೦೦/-. ಮೂರು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ನೀಡಿದ್ದು, ಪಾಲ್ಘರ್ ಶಾಖೆಯ ಮುಖ್ಯ ವ್ಯವಸ್ಥಾಪಕರು ಮತ್ತು ಶಾಖೆಯ ಮುಖ್ಯಸ್ಥ ದಿನೇಶ್ ಠಾಕೂರ್ ಅವರ ಚೆಕ್‌ಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಕ್ಯಾಂಪಸ್‌ನ ಜನರಲ್ ಮ್ಯಾನೇಜರ್ ಸತೀಶ್ ಶೆಟ್ಟಿ ಮತ್ತು ಮಾನವ ಸಂಪನ್ಮೂಲ ವ್ಯವಸ್ಥಾಪಕ ಸುಧೀರ್ ಬಾಬು ಉಪಸ್ಥಿತರಿದ್ದು, ಶ್ರೀಮತಿ ವೃಶಾಲಿ ಗೋಖಲೆ,ಡಾ| ಪಂಢರಿನಾಥ ಘೋಂಗೆ ಮತ್ತು ಶ್ರೀಶೈಲ್ ಹೆಗ್ಗೊಂಡ ಅವರು ಕಾರ್ಯಕ್ರಮವನ್ನು ರೂಪಿಸಿ ಸುಗಮವಾಗಿ ನಡೆಯುವಂತೆ ಸಹಕರಿಸಿದರು. ಸಹಾಯಕ ಪ್ರೊ| ಏಕ್ತಾ ಠಾಕೂರ್ ಮತ್ತು ಶ್ರೀಮತಿ ಬೀಟ್ರಿಸ್ ಲೋಬೋ ಸಮಾರಂಭವನ್ನು ನಿರೂಪಿಸಿದರು. ಡಾ| ಜಿ.ವಿ ಮುಳಗುಂದ ಮತ್ತು ಡಾ| ಸವಿತಾ ತೌರೊ ಧನ್ಯವಾದಗೈದರು.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.