Skip to main content
www.kallianpur.com | Email : kallianpur7@gmail.com | Mob : 9741001849

ಎಸ್.ಎಂ ಶೆಟ್ಟಿ ಶಿಕ್ಷಣ ಸಂಸ್ಥೆಗಳಿಗೆ ಉತ್ತಮ ಕಾಲೇಜು ಪ್ರಶಸ್ತಿ ವಿಜಯೋತ್ಸವ ಆಚರಣೆ ಎಸ್.ಎಂ ಶೆಟ್ಟಿ ಕಾಲೇಜ್‌ನ ಸೇವೆ ಜಾಗತಿಕವಾಗಿ ಗುರುತಿಸುವಂತಾಗಿದೆ.: ಚಂದ್ರಹಾಸ ಕೆ.ಶೆಟ್ಟಿ.

By October 21, 2023Mumbai News
kallianpurdotcom: 21/10/23
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್

ಮುಂಬಯಿ (ಆರ್‌ಬಿಐ), ಅ.೨೧: ಇಂದು ನಮ್ಮ ಕಾಲೇಜಿಗೆ ಅಪಾರ ಹೆಮ್ಮೆ ಮತ್ತು ಸಂಭ್ರಮದ ಸುದಿನ. ಇದು ನಮಗೆಲ್ಲ ಐತಿಹಾಸಿಕ ದಿನವಾಗಿದೆ. ನಮ್ಮ ಸಂಸ್ಥೆಯ ಈ ಗಮನಾರ್ಹ ಸಾಧನೆಗಳ ಸಂತಸ ಹಂಚಿಕೊಳ್ಳುವ ಸಡಗರವೂ ಹೌದು. ನಮಗೆ ಪ್ರತಿಷ್ಠಿತ ಅತ್ಯುತ್ತಮ ಕಾಲೇಜು ಪ್ರಶಸ್ತಿಯ ಗರಿ ಮೂಡಿದೆ. ಉತ್ಕ್ರಷ್ಟತೆಯ ಈ ಪ್ರಯಾಣವು ಅಪಾರ ಸವಾಲುಗಳ ಜೊತೆಗೆ ಶಿಕ್ಷಣ, ನಾವೀನ್ಯತೆ ಮತ್ತು ಪರಿಸರವನ್ನು ಪೋಷಿಸುವ ನಮ್ಮ ಸಾಮೂಹಿಕ ಬದ್ಧತೆಯು ಮತ್ತೆ ಮೈಲಿಗಲ್ಲನ್ನು ತಲುಪಲು ಸಹಾಯ ಮಾಡಿತು. ನಮ್ಮ ಶಿಕ್ಷಣ ಸಮಿತಿಯ ಪದಾಧಿ ಕಾರಿಗಳು ಮತ್ತು ಸದಸ್ಯರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆ ತಿಳಿಸುವೆ. ಕಾಲೇಜು ಸಮುದಾಯದ ಎಲ್ಲರ ಅವಿರತ ಬೆಂಬಲ ಮತ್ತು ದಣಿವರಿಯದ ಪ್ರಯತ್ನಗಳಿಗಾಗಿ ನ್ಯಾಕ್‌ನಿಂದ ಎ ಪ್ಲಸ್ ಗ್ರೇಡ್ ಗೆ ನಾವು ಒದಗಿಸುವ ಶಿಕ್ಷಣದ ಗುಣಮಟ್ಟ ಸೂಚಿಸುತ್ತದೆ ಎಂದು ಅಧ್ಯಕ್ಷೀಯ ಭಾಷಣಗೈದು ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ ಮಾತನಾಡಿದರು.

ಬೃಹನ್ಮುಂಬಯಿ ಇಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಎಸ್.ಎಂ ಶೆಟ್ಟಿ ಶಿಕ್ಷಣ ಸಂಸ್ಥೆಗಳು ಉತ್ತಮ ಕಾಲೇಜು ಪ್ರಶಸ್ತಿಗಳಿಗೆ ಭಾಜನರಾದ ಹಿನ್ನೆಲೆಯಲ್ಲಿ ವಿಜಯೋತ್ಸವ ಆಚರಣೆಯನ್ನು ಇಂದಿಲ್ಲಿ ಶನಿವಾರ ಪೊವಾಯಿ ಅಲ್ಲಿನ ಎಸ್.ಎಂ ಶೆಟ್ಟಿ ಹೈಸ್ಕೂಲ್‌ನ ಆರ್. ಎನ್ ಶೆಟ್ಟಿ ಒಳಾಂಗಣ ಸಭಾಗೃಹದಲ್ಲಿ ಸಂಭ್ರಮಿಸಲಾಯಿತು. ಬಂಟ್ಸ್ ಸಂಘ ಮುಂಬಯಿ ಸಂಚಾಲಿತ ಎಸ್.ಎಂ ಶೆಟ್ಟಿ ಶಿಕ್ಷಣ ಸಂಸ್ಥೆಯ ಎಸ್.ಎಂ ಶೆಟ್ಟಿ ಕಾಲೇಜ್ ಆಫ್ ಸಯನ್ಸ್, ಕಾರ್ಮಸ್ ಆಂಡ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಸಂಸ್ಥೆಯು ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್-ಎನ್‌ಎಎಸಿ ಎ+) ನ್ಯಾಕ್ ಪ್ಲಸ್ ಎ ದರ್ಜೆ ಹಾಗೂ ಮುಂಬಯಿ ವಿಶ್ವವಿದ್ಯಾಲಯದಿಂದ ಉತ್ತಮ ಕಾಲೇಜು ಪ್ರಶಸ್ತಿ ಮಡಗೇರಿಸಿದ ಸುಸಂದರ್ಭದಲ್ಲಿ ನಡೆಸಲಾದ ವಿಜಯೋತ್ಸವ ಆಚರಣಾ ಕಾರ್ಯಕ್ರಮಕ್ಕೆ ಚಂದ್ರಹಾಸ ಕೆ.ಶೆಟ್ಟಿ ದೀಪ ಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆಯನ್ನಿತ್ತರು.

ಎಸ್.ಎಂ ಶೆಟ್ಟಿ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ಬಿ.ಆರ್ ಶೆಟ್ಟಿ ನೇತೃತ್ವದಲ್ಲಿ ನೆರವೇರಿಸಲ್ಪಟ್ಟ ಭವ್ಯ ಸಮಾರಂಭದಲ್ಲಿ ನ್ಯಾಕ್ ಸಲಹೆಗಾರ ಡಾ| ನರೇಂದ್ರ ಚೊಟಾಲಿಯಾ, ಎಸ್.ಎಂ ಶೆಟ್ಟಿ ಸಮೂಹ ಹಾಗೂ ಎಸ್.ಎಂ ಶೆಟ್ಟಿ ಪೊವಾಯಿ ಎಜ್ಯುಕೇಶನ್ ಸಮಿತಿಯ (ಪಿಇಸಿ) ಮಾಜಿ ಕಾರ್ಯಾಧ್ಯಕ್ಷ ಎಸ್.ಎಂ ಶೆಟ್ಟಿ, ಬಂಟ್ಸ್ ಸಂಘ ಮುಂಬಯಿ ಮಾಜಿ ಅಧ್ಯಕ್ಷ ಹಾಗೂ ಪಿಇಸಿ ಮಾಜಿ ಕಾರ್ಯಾಧ್ಯಕ್ಷ ಮನಮೋಹನ್ ಆರ್.ಶೆಟ್ಟಿ, ಪಿಇಸಿ ಉಪ ಕಾರ್ಯಾಧ್ಯಕ್ಷರುಗಳಾದ ವಸಂತ್ ಎನ್.ಶೆಟ್ಟಿ ಪಲಿಮಾರು ಮತ್ತು ಉಳ್ತೂರು ಮೋಹನ್‌ದಾಸ್ ಶೆಟ್ಟಿ, ಕಾರ್ಯದರ್ಶಿ ಸಿಎಸ್| ಉತ್ತಮ್ ಶೆಟ್ಟಿ, ಕೋಶಾಧಿಕಾರಿ ಸಿಎ| ಜಗದೀಶ್ ಬಿ.ಶೆಟ್ಟಿ, ಸಂಯೋಜಕ ಸಿಎ| ಹರೀಶ್ ಡಿ.ಶೆಟ್ಟಿ, ಎಸ್.ಎಂ ಶೆಟ್ಟಿ ಕಾಲೇಜು ಪ್ರಾಂಶುಪಾಲ ಡಾ| ಶ್ರೀಧರ ಶೆಟ್ಟಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ| ಸಂದೀಫ್ ಸಿಂಗ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಎಸ್. ಎಂ ಶೆಟ್ಟಿ ಮಾತನಾಡಿ ಈ ಕಾಲೇಜ್‌ಗೆ ಡಾ| ಶ್ರೀಧರ್ ಶೆಟ್ಟಿ ಅವರ ಶ್ರಮದಾಯಕ ಕೊಡುಗೆ ಅನನ್ಯವಾದುದು. ಶ್ರೀಧರ ಶೆಟ್ಟಿ ಅವರು ತೀರಾ ಸರಳ ಸ್ವಭಾವದವರು. ಆದರೆ ಅವರು ನೋಡುವಷ್ಟು ಸರಳವಲ್ಲ. ಓರ್ವ ಸಜ್ಜನಿಕೆಯ ಮೇಧಾವಿ. ಈ ಕಾಲೇಜ್ ನ ಎಲ್ಲಾ ಸಾಧನೆಗೆ ಡಾ| ಶ್ರೀಧರ್ ಶೆಟ್ಟಿ ಮತ್ತು ತಂಡವು ಅದ್ಭುತವಾದ ಕೆಲಸ ಮಾಡಿದೆ. ನಾನು ಅವರಿಗೆ ಅಭಿವಂದಿಸುತ್ತೇನೆ. ಗ್ರಾಮೀಣ ಹಿನ್ನೆಲೆಯಿಂದ ಬಂದು ಹೊಸ ಪರಿಸ್ಥಿತಿಗೆ ತನ್ನನ್ನು  ಅಳವಡಿಸಿ ಕೊಂಡು ಬೃಹನ್ಮುಂಯಿಯ ಕಾಲೇಜ್‌ನ್ನು ಈ ಮಟ್ಟಕ್ಕೆ ಬೆಳೆಸಿರುವುದೇ ಮಹಾತ್ಸಾ ಧನೆಯಾಗಿದೆ ಎಂದರು.

ಮನಮೋಹನ್ ಶೆಟ್ಟಿ ಮಾತನಾಡಿ ಮುಂಬಯಿ ವಿವಿ ಪ್ರಶಸ್ತಿಗೆ ಭಾಜನವಾದ ನಮ್ಮ ಸಂಸ್ಥೆ ಭವಿಷ್ಯದ ಸ್ಥಾನವನ್ನು ಬಲಪಡಿಸುತ್ತದೆ. ನಮ್ಮ ಕಾಲೇಜು ಕೇವಲ ವೈಯಕ್ತಿಕ ಯಶಸ್ಸಿನ ಕಥೆಯಲ್ಲ, ಆದರೆ ಪ್ರತಿ ವಿದ್ಯಾರ್ಥಿ, ಶಿಕ್ಷಕರು, ಸಿಬ್ಬಂದಿಗಳಿಂದ ಸಾಮೂಹಿಕ ಬೆಳವಣಿಗೆಯ ವಾತಾವರಣ ಸೃಷ್ಟಿಸುವ ಮೂಲಕ ಇದು ಸಾಧ್ಯವಾಗಿದೆ. ಪ್ರಶಸ್ತಿಗಳು ಮತ್ತು ಶ್ರೇಣಿಗಳನ್ನು ಆಚರಿಸುವುದರ ಜೊತೆಗೆ ನಮ್ಮ ಜವಾಬ್ದಾರಿಯ ಜ್ಞಾಪನೆ ಮತ್ತು ಪರಂಪರೆಯನ್ನು ಗುರಿ ಹೊಂದಿದ್ದೇವೆ. ಈ ಪುರಸ್ಕಾರಗಳು ನಮ್ಮ ಹಿಂದಿನ ಪ್ರಯತ್ನಗಳ ಪ್ರತಿಬಿಂಬವಲ್ಲ, ಆದರೆ ನಮ್ಮ ಮುಂದಿನ ಹಾದಿಯನ್ನು ಮಾರ್ಗದರ್ಶಿಸುವ ದಾರಿದೀಪವಾಗಿದೆ. ಇಂದಿನ ಮನ್ನಣೆಯು ಚೈತನ್ಯಕ್ಕೆ ಸಾಕ್ಷಿಯಾಗಿದೆ. ಮುಂದೆ ಇನ್ನಷ್ಟು ಗೌರವಗಳಿಗೆ ಪಾತ್ರರಾಗಬೇಕು ನಮ್ಮ ಸಾಧನೆಗಳನ್ನು ಪ್ರತಿಬಿಂಬಿಸಲು ಮತ್ತು ನಮ್ಮ ದೃಷ್ಟಿಯನ್ನು ಇನ್ನಷ್ಟು ಎತ್ತರಕ್ಕೆ ಹೊಂದಿಸಲು ಇದು ಸೂಕ್ತ ಕಾಲವಾಗಿದೆ ಎಂದರು.

ಡಾ| ನರೇಂದ್ರ ಚೊಟಾಲಿಯಾ ಅರ್ಧ ಸತ್ಯದ ಸಹಾಯದಿಂದ ಸತ್ಯವನ್ನು ತೋರಿಸಲು, ಪ್ರಪಂಚದಾದ್ಯಂತ ಮಾಡಿದ ಕೆಲಸ ಎಸ್ ಎಂ.ಶೆಟ್ಟಿ ಸಂಸ್ಥೆ ಮಾಡುತ್ತಿದೆ. ನಿಜವಾಗಿ ಸತ್ಯವನ್ನು ತೋರಿಸಬೇಕಾಗುತ್ತೆ, ಸತ್ಯವನ್ನು ಹೊರಗೆ ತರಬೇಕಾಗುತ್ತೆ, ಅಧ್ಯಕ್ಷರು, ಸದಸ್ಯರು ಮತ್ತು ಶಿಕ್ಷಣ ಸಮಿತಿ ಎಲ್ಲರ ಪರಿಶ್ರಮದ ಫಲ ಈ ಸಾಧನೆಯಾಗಿದೆ. ನಾವು ಕ್ರಿಕೆಟ್ ಕ್ಷೇತ್ರದಲ್ಲಿ ಎಂಎಸ್ ಧೋನಿ ಹೆಸರನ್ನು ತೆಗೆದುಕೊಂಡಾಗಲೆಲ್ಲಾ, ಕ್ಯಾಪ್ಟನ್ ಕುಲ್ ಎಂಬ ಪದವು ಅದರೊಂದಿಗೆ ಸಂಭೋದಿತವಾಗಿದೆ. ಅದೇ ರೀತಿ ಇಲ್ಲಿನ ಕ್ಯಾಪ್ಟನ್ ಕುಲ್ ಶ್ರೀಧರ್ ಶೆಟ್ಟಿ. ಅವರಲ್ಲಿ ಯಾವುದೇ ಆಲೋಚನೆಗಳು ಮನಸ್ಸಿಗೆ ಬಂದರೂ, ಅವರು ಅದನ್ನು ಸಿದ್ಧಿ ಮಾಡಿ ತೋರಿಸುತ್ತಾರೆ ಎಂದರು.

ಬಿ.ಆರ್ ಶೆಟ್ಟಿ ಮಾತನಾಡಿ ಇಂದು ನಮ್ಮ ಸಾಧನೆಗಳಿಗಾಗಿ ಕೇವಲ ಸಂಭ್ರಮದ ದಿನವಲ್ಲ, ಆದರೆ ೨೦೨೧ ರಲ್ಲಿ ನಾವು ನಾಯಕತ್ವವನ್ನು ವಹಿಸಿ ಕೊಂಡಾಗ ನಮ್ಮ ಪ್ರಮುಖ ಗುರಿಗಳಲ್ಲಿ ಒಂದನ್ನು ಸಾಕ್ಷಾತ್ಕರಿಸಿ ಕೊಳ್ಳುವ ಮತ್ತು ಆಚರಿಸುವ ದಿನವಾಗಿದೆ. ನಮ್ಮ ಮೊದಲ ನ್ಯಾಕ್ ಮೌಲ್ಯಮಾಪನದಲ್ಲಿ, ನಾವು ಎ ಗ್ರೇಡ್ ಸಾಧಿಸಿದ್ದೇವೆ. ನಮ್ಮ ಹಿಂದಿನ ಸಾಧನೆಗಳನ್ನು ಮೀರಿಸುವುದು ಮತ್ತು ದ್ವಿತೀಯ ಆವೃತ್ತಿಯಲ್ಲಿ ಉನ್ನತ ದರ್ಜೆಯನ್ನು ಪಡೆದುಕೊಳ್ಳುವುದು ನಿಜಕ್ಕೂ ಸವಾಲಾಗಿತ್ತು. ನಮ್ಮ ಕಾಲೇಜು ತಂಡದ ಅವಿರತ ಪ್ರಯತ್ನಗಳಿಗೆ ಧನ್ಯವಾದಗಳು. ಕಲೆ ಮತ್ತು ವಿಭಾಗದಲ್ಲಿ ಮುಂಬಯಿ ವಿಶ್ವವಿದ್ಯಾನಿಲಯದಿಂದ ನಾವು ಅತ್ಯುತ್ತಮ ಕಾಲೇಜು ಪ್ರಶಸ್ತಿಯನ್ನು ಪಡೆದಾಗ ನಮ್ಮ ಹರ್ಷ ಮುಗಿಲು ಮುಟ್ಟಿತ್ತು. ಇದು ಮತ್ತೆಮತ್ತೆ ಮರುಕಳಿಸುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಬಂಟ್ಸ್ ಸಂಘದ ಮಾಜಿ ಅಧ್ಯಕ್ಷರುಗಳಾದ ಆರ್. ಸಿ ಶೆಟ್ಟಿ, ಬಿ.ವಿವೇಕ್ ಶೆಟ್ಟಿ, ಪದ್ಮನಾಭ ಎಸ್.ಪಯ್ಯಡೆ, ನಿಕಟಪೂರ್ವ ಪದಾಧಿಕಾರಿಗಳಾದ ಹರೀಶ್ ವಾಸು ಶೆಟ್ಟಿ, ಪ್ರವೀಣ್ ಬಿ.ಶೆಟ್ಟಿ (ಪಿಇಸಿ ಸಮಿತಿ ಸದಸ್ಯರು), ಬಂಟ್ಸ್ ಸಂಘ ಮುಂಬಯಿ ಉಪಾಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರು, ಜತೆ ಕಾರ್ಯದರ್ಶಿ ದಿವಾಕರ್ ಶೆಟ್ಟಿ ಇಂದ್ರಾಳಿ, ಜತೆ ಕೋಶಾಧಿಕಾರಿ ಮುಂಡಪ್ಪ ಎಸ್. ಪಯ್ಯಡೆ, ಉನ್ನತ ಶಿಕ್ಷಣ ಸಮಿತಿ ಕಾರ್ಯಧ್ಯಕ್ಷ ಸಿಎ| ಐ.ಆರ್ ಶೆಟ್ಟಿ, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿ ಕಾರ್ಯಧ್ಯಕ್ಷ ಶಾಂತರಾಮ ಬಿ.ಶೆಟ್ಟಿ, ಪಿಇಸಿ ಸಮಿತಿ ಸದಸ್ಯರಾದ ಡಾ| ಮನೋಹರ್ ಎಸ್.ಹೆಗ್ಡೆ, ಶಾಂತಾ ಜಿ.ಶೆಟ್ಟಿ, ಅಪ್ಪಣ್ಣ ಎಂ.ಶೆಟ್ಟಿ, ನಿಶಿತ್ ಶೆಟ್ಟಿ, ಎನ್.ಸಿ ಶೆಟ್ಟಿ ವೃತ್ತಿ ನಿರತ ಸಲಹೆಗಾರರಾದ ನ್ಯಾಯವಾದಿ ಬಿ.ಬಿ ಶೆಟ್ಟಿ, ಗುಣಪಾಲ್ ಆರ್.ಶೆಟ್ಟಿ ಐಕಳ, ಭರತ್ ಶೆಟ್ಟಿ, ಮಹೇಶ್ ಶೆಟ್ಟಿ ಬಾಬಾಸ್ ಉಪಸ್ಥಿತರಿದ್ದರು.

ಬಂಟ್ಸ್ ಸಂಘ ಪದಾಧಿಕಾರಿಗಳಿಗೆ, ಪಿಇಸಿ ಸಂಸ್ಥೆಯ ವಿವಿಧ ವಿಭಾಗಗಳ ಬೋಧಕರು, ಬೋಧಕೇತರ ಸಿಬ್ಬಂದಿ ಗಳು, ಗಣ್ಯರನೇಕರು ಉಪಸ್ಥಿತರಿದ್ದು ಉಪಸ್ಥಿತ ಮಹಾನೀಯರನ್ನು ಸ್ಮರಣಿಕೆಗಳನ್ನಿತ್ತು ಗೌರವಿಸಲಾಯಿತು.

ಪಿಇಸಿ ವಿದ್ಯಾ ನಡಿಗೆ, ಎಸ್.ಎಂ ಶೆಟ್ಟಿ ಶಿಕ್ಷಣ ಸಂಸ್ಥೆಯ ಸಾಧನಾನಡೆ ಗ್ರೋಥ್ ಓವ್ಹರ್ ಈಯರ್ಸ್ ಸಾಕ್ಷ್ಯಚಿತ್ರ ಭಿತ್ತರಿಸಲಾಯಿತು. ಸಾಂಸ್ಕ್ರತಿಕ ಕಾರ್ಯಕ್ರಮವಾಗಿಸಿ ವಿದ್ಯಾರ್ಥಿಗಳಿಂದ ಪಂಜಾಬಿ ಜಾನಪಾದ ನೃತ್ಯ ಮತ್ತು ಗರ್ಬಾ ಗುಜರಾತಿ ಜಾನಪಾದ ವೈಭವ ಪ್ರದರ್ಶಿಸಿದರು.

ಶಾಲಾ ವಿದ್ಯಾರ್ಥಿಗಳ ಭಜನೆಯಿಂದ ಸಮಾರಂಭಕ್ಕೆ ಚಾಲನೆಯನ್ನಿತ್ತರು. ಶಾಲಾ ಗೀತೆ, ಸ್ವಾಗತ ನೃತ್ಯದೊಂದಿಗೆ ಸಮಾರಂಭ ಆದಿಗೊಂಡಿತು. ಎಸ್.ಎಂ ಶೆಟ್ಟಿ ಕಾಲೇಜು ಪ್ರಾಂಶುಪಾಲ ಡಾ| ಶ್ರೀಧರ ಶೆಟ್ಟಿ ಸ್ವಾಗತಿಸಿದರು. ವಸಂತ್ ಎನ್.ಶೆಟ್ಟಿ ಮತ್ತು ಸಿಎ| ಜಗದೀಶ್ ಬಿ.ಶೆಟ್ಟಿ ಸನ್ಮಾನಿತರನ್ನು ಪರಿಚಯಿಸಿದರು. ಶರ್ವರಿ ಶೆಟ್ಟಿ ಮತ್ತು ಜೋನ್ ಮಿನೇಜಸ್ ಸಭಾ ಕಾರ್ಯಕ್ರಮ ನಿರೂಪಿಸಿದರು. ಸಿಎಸ್| ಉತ್ತಮ್ ಶೆಟ್ಟಿ, ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಗಣಸಿರಿ ಸಮಾರಂಭವು ಸಮಾಪನಗೊಂಡಿತು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.