Skip to main content
www.kallianpur.com | Email : kallianpur7@gmail.com | Mob : 9741001849

ಸಂತ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆ ಕಲ್ಯಾಣಪುರ – ಗಣರಾಜ್ಯೋತ್ಸವ ದಿನಾಚರಣೆ

By January 26, 2024Kannada News
kallianpurdotcom: 9741001849

ಉಡುಪಿ : ಶಾಲಾ ಸಂಚಾಲಕರ ಅಧ್ಯಕ್ಷತೆಯಲ್ಲಿ 75 ನೇ ಗಣರಾಜ್ಯೋತ್ಸವ ಆಚರಣೆಯಲ್ಲಿ ಸಂಚಾಲಕರಾದ ರೆ. ಫಾ. ವಲೇರಿಯನ್ ಮೆಂಡೋನ್ಸಾ ಇವರು ಧ್ವಜಾರೋಹಣ ಕಾರ್ಯಕ್ರಮ ನಡೆಸಿ ಗಣರಾಜೋತ್ಸವದ ಮಹತ್ವವನ್ನು ಮಕ್ಕಳಿಗೆ ತಿಳಿಸಿ ಶುಭ ಹಾರೈಸಿ, ಶಾಲಾ ಹಳೆ ವಿದ್ಯಾರ್ಥಿನಿಯಾದ ಕುಮಾರಿ ಪ್ರನಿತಾ ಇವರು ಸ್ನಾತಕೋತ್ತರ ಪದವಿ (M. Com ) ನಲ್ಲಿ 10 ನೇ ಸ್ಥಾನವನ್ನು ಗಳಿಸಿದ ಸಾಧನೆಯನ್ನು ಗುರುತಿಸಿ ಅವರಿಗೆ ಸನ್ಮಾನವನ್ನು ಮಾಡಿ  ಅಭಿನಂದನೆ ಸಲ್ಲಿಸಿದರು.  ಮಕ್ಕಳಿಂದ ದೇಶಭಕ್ತಿ ಗೀತೆ ಹಾಗೂ ದೇಶ ನಮನ ನೃತ್ಯ ಮಾಡಿಸಲಾಯಿತು.

ಕಾರ್ಯಕ್ರಮದಲ್ಲಿ ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷರು ಹಾಗೂ ಸದಸ್ಯರು, ಮಕ್ಕಳ ಪೋಷಕರು ಹಾಗೂ ಶಾಲಾ ಮುಖ್ಯೋಪಾ ಧ್ಯಾಯಿನಿ ಹಾಗೂ ಶಿಕ್ಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಕುಮಾರಿ ಸಂಜನಾ ಧನ್ಯವಾದ ಸಲ್ಲಿಸಿ ಪೂರ್ವಿ ಕಾರ್ಯಕ್ರಮ ನಿರೂಪಿಸಿದರು.