
kallianpurdotcom: Mob 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಜು.05: ಸಂತ ಪೀಟರ್ ಓರ್ವ ಬೆಸ್ತನಾಗಿದ್ದು ಅವರ ಪ್ರೇರಣೆಯಂತೆ, ನಾವೆಲ್ಲರೂ ಸಮಾಜದಲ್ಲಿ ಒಗ್ಗಟ್ಟು, ಕರುಣೆ ಮತ್ತು ಪರಸ್ಪರ ಸಹಕಾರವನ್ನು ಬೆಳೆಸುವ ಸಾಮಾಜಿಕ ಜವಾಬ್ದಾರಿಯನ್ನು ಅರಿಯಬೇಕಾಗಿದೆ. ಅವರ ನಿರಂತರ ಕಲಿಕೆ ಮತ್ತು ಜ್ಞಾನದ ಹಾದಿಯು ನಮ್ಮ ಸಂಸ್ಥೆಯ ಶೈಕ್ಷಣಿಕ ಉನ್ನತಿಗೆ ದಾರಿದೀಪವಾಗಿದ್ದು, ಯುವಮನಸ್ಸುಗಳನ್ನು ಸನ್ಮಾರ್ಗದಲ್ಲಿ ರೂಪಿಸಲು ನಮಗೆ ಸದಾ ಪ್ರೇರಣೆ ನೀಡುವಂತಾಗಲಿ. ಭಾವೀ ಪೀಳಿಗೆಗೆ ನೈತಿಕ ಮೌಲ್ಯಗಳ ಆಧಾರದ ಮೇಲೆ ಪ್ರಗತಿಪರ ಭವಿಷ್ಯವನ್ನು ನಿರ್ಮಿಸಿಕೊಡುವ ದೃಢ ಸಂಕಲ್ಪವು ಇಂತಹ ಉತ್ಸವಗಳಿಂದ ಆಗಬೇಕು. ಮನುಜರಿಗೆ ಸಾಧನೆಗಳಿಕ್ಕಿಂತ ಸಂಬಂಧಗಳೇ ಶಾಶ್ವತವಾಗಿರುತ್ತದೆ. ಆದ್ದರಿಂದ ನಮ್ಮ ವಿಶ್ವಾಸವೇ ನಮ್ಮ ಸಾಧನೆಯಾಗಲಿ ಎಂದು ಪಿಲಾರ್ ಥಿಯೋಲಾಜಿಕಲ್ ಕಾಲೇಜ್ ಪಿಲಾರ್-ಗೋವಾ ಇದರ ಪ್ರಾಚಾರ್ಯ ರೆ| ಫಾ| ಡಾ| ಐವಾನ್ ಡಿಅಲ್ಮೇಡಾ (ಎಸ್‌ಎಫ್‌ಎಕ್ಸ್) ಅಭಿಪ್ರಾಯ ಪಟ್ಟರು.
ಸೈಂಟ್ ಪೀಟರ್’ಸ್ ಅಸೋಸಿಯೇಶನ್ ಬಾರ್ಕೂರು (ಮುಂಬಯಿ) ಸಂಸ್ಥೆಯು ತನ್ನ ಪೋಷಕಸಂತ ಸೈಂಟ್ ಪೀಟರ್ ಅವರ 38ನೇ ವಾರ್ಷಿಕ ಉತ್ಸವವನ್ನು ಇಂದಿಲ್ಲಿ ಭಾನುವಾರ ಉಪನಗರ ಅಂಧೇರಿ ಮರೋಲ್ ಇಲ್ಲಿನ ಸೈಂಟ್ ಜೋನ್ ಎವಾಂಜಲಿಸ್ಟ್ ಇಗರ್ಜಿ ಸಭಾಗೃಹ ದಲ್ಲಿ ಅದ್ದೂರಿಯಾಗಿ ಆಚರಿಸಿದ್ದು ಶುಭಶಂಸನೆಗೈ ದು ಫಾ| ಐವಾನ್ ಡಿಅಲ್ಮೇಡಾ ತಿಳಿಸಿದರು.
ಆರಂಭದಲ್ಲಿ ಅಭಿವಂದನಾಪೂಜೆ ನಡೆಸಲಾಗಿದ್ದು ಫಾ| ಡಾ| ಐವಾನ್ ಡಿಅಲ್ಮೇಡಾ ಪ್ರಸಂಗವನ್ನಿತ್ತು ಸಂಭ್ರಮಿಕ ಪೂಜೆ ನೆರವೇರಿಸಿ ಅನುಗ್ರಹಿಸಿದರು. ರೆನ್ನೀ ಐವಾನ್ ಸುವಾರೆಸ್, ಜಾನೆಟ್ ಕರ್ವಾಲೋ, ಜೋನ್ ಗೋನ್ಸಾಲ್ವಿಸ್, ಫ್ರೀಡಾ ಮೋರಸ್ ಹಾಗೂ ವೀರಾ ಗೋನ್ಸಾಲ್ವಿಸ್, ಪ್ರಮೀಳಾ ಫೆರ್ನಾಂಡಿಸ್, ರೀಟಾ ಸುವಾರೆಸ್, ಸಿ| ಜ್ಯೋತಿ ಡಿಅಲ್ಮೇಡಾ, ರೋಸಿ ಡಿಅಲ್ಮೇಡಾ, ಫೆಲ್ಸಿ ಸುವಾರೆಸ್ ಪೂಜೆಯ ವಿವಿಧ ಪ್ರಾರ್ಥನೆಗಳನ್ನು ಪಠಿಸಿದರು. ಎಡ್ವಿನ್ ಆಗಸ್ಟಿನ್ ಸುವಾರೆಸ್, ಸುನೀತಾ ಎ.ಸುವಾರೆಸ್, ಟೆಲ್ಮಾ ಜೇಮ್ಸ್ ಡೆಸಾ, ಪ್ರಶಾಂತ್ ಸೆರಾವೋ ಭಕ್ತಿಗೀತೆಗಳನ್ನಾಡಿದರು.
ಬಳಿಕ ಇಗರ್ಜಿಯ ಸಭಾಗೃಹದಲ್ಲಿ ಅಸೋಸಿಯೇಶನ್‌ನ ಅಧ್ಯಕ್ಷ ಎರಿಕ್ ಕರ್ವಾಲೋ ಅಧ್ಯಕ್ಷತೆಯಲ್ಲಿ ನಡೆಸಲಾದ ಸಂಭ್ರಮ ಕಾರ್ಯಕ್ರಮ ದಲ್ಲಿ ಫಾ| ಐವಾನ್ ಡಿಅಲ್ಮೇಡಾ ಮುಖ್ಯ ಅತಿಥಿಯಾಗಿದ್ದು, ಎಸ್‌ಪಿಎ ಮಾಜಿ ಅಧ್ಯಕ್ಷರುಗಳಾದ ರಿಚಾರ್ಡ್ ಕರ್ವಾಲೋ, ಐವಾನ್ ರೆಬೆಲ್ಲೊ, ಬೋನಿಫಸ್ ಸಿಕ್ವೇರಾ ಹಾಗೂ ಪ್ರಸಕ್ತ ಉಪಾಧ್ಯಕ್ಷರುಗಳಾದ ವಿಲ್ಫ್ರೆಡ್ ಸಿಕ್ವೇರಾ ಮತ್ತು ಜೋನ್ ಎಲ್.ಗೊನ್ಸಾಲ್ವ್ವಿಸ್, ಕಾರ್ಯದರ್ಶಿ ಆರ್ಥರ್ ಮೆಂಡೋನ್ಸಾ, ಖಜಾಂಚಿ ವಿನ್ಸೆಂಟ್ ಫುರ್ಟಾಡೊ ವೇದಿಕೆಯನ್ನು ಅಲಂಕರಿಸಿ ಹಬ್ಬದ ಸಂದೇಶವನ್ನಿತ್ತರು.
ನಮ್ಮ ಪೋಷಕಸಂತರಾದ ಸೈಂಟ್ ಪೀಟರ್ ಅವರ ವಾರ್ಷಿಕ ಮಹೋತ್ಸವದ ಶುಭ ಸಂದರ್ಭದಲ್ಲಿ ಎಸ್‌ಪಿಎ ಸಂಸ್ಥೆಯ ಪರವಾಗಿ ಎಲ್ಲರಿಗೂ ಹಾರ್ದಿಕ ಶುಭಾಶಯಗಳನ್ನು ಕೋರುವೆ. ಸೈಂಟ್ ಪೀಟರ್ ಅವರ ಅಚಲವಾದ ನಂಬಿಕೆ ಮತ್ತು ಸತ್ಯದ ಹಾದಿ ನಮ್ಮಲ್ಲಿ ಧಾರ್ಮಿಕ ಜಾಗೃತಿ ಹಾಗೂ ಆಧ್ಯಾತ್ಮಿಕ ಶಕ್ತಿಯನ್ನು ಸದಾ ತುಂಬಲಿ ಎಂದು ಪ್ರಾಥಿಸುತ್ತೇವೆ. ವಾರ್ಷಿಕ ಸಡಗರವು ಎಲ್ಲರ ಮನೆ-ಮನಗಳಲ್ಲಿ ಸಂತೋಷವನ್ನು ತರಲಿ ಹಾಗೂ ಪೋಷಕಸಂತ ಸೈಂಟ್ ಪೀಟರ್ ಅವರ ಆಶೀರ್ವಾದ ಈ ಸಂಸ್ಥೆ ಮತ್ತು ನಿಮ್ಮ ಕುಟುಂಬಗಳ ಮೇಲೆ ಸದಾ ಇರಲಿ ಎಂದು ಅಧ್ಯಕ್ಷ ಎರಿಕ್ ಕರ್ವಾಲೋ ನುಡಿದರು.
ಎಸ್‌ಪಿಎ ಸಕ್ರೀಯ ಸದಸ್ಯರಾಗಿದ್ದು ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಸ್ವರ್ಣ ಪದಕ ವಿಜೇತ ಜೊಯ್ಲಾನ್ ಫೆರ್ನಾಂಡಿಸ್ ಅವರಿಗೆ ಇವರಿಗೆ ಶಾಲು ಹೊದಿಸಿ, ಪುಷ್ಪಗುಚ್ಫ, ಸ್ಮರಣಿಕೆಯನ್ನೀಡಿ ವಿಶೇಷ ಸಾಧಕ ಸನ್ಮಾನಗೈದು ಅಭಿನಂದಿಸಲಾಯಿತು. ಎಸ್‌ಪಿಎ ಸಂಸ್ಥಾಪಕ ರಲ್ಲೊರ್ವರಾದ ದಿ| ಸಿಂಪ್ಲೆನ್ ಸಿಕ್ವೇರಾ ಸ್ಮರಣಾರ್ಥ ಗ್ಲಾಡಿಸ್ ಎಸ್.ಸಿಕ್ವೇರಾ, ಆರ್ಚಿಬಾಲ್ಡ್ ಫುರ್ಟಾಡೊ, ದಿ| ಹೆನ್ರಿ ರೋಚ್ ಸ್ಮರಣಾರ್ಥ ಐಡಾ ಹೆನ್ರಿ ರೋಚ್, ಆಂಟನಿ ಗೊನ್ಸಾಲ್ವಿಸ್, ದಿ| ನೋರ್ಬರ್ಟ್ ಮಿನೇಜಸ್ ಸ್ಮರಣಾರ್ಥ ಹಿಲ್ಡಾ ಎನ್.ಮಿನೇಜಸ್, ದಿ| ವಿಲ್ಮಾ ಸಿಕ್ವೇರಾ ಸ್ಮರಣಾರ್ಥ ಬೋನಿಫೇಸ್ ಸಿಕ್ವೇರಾ ಮತ್ತು ಪರಿವಾರಗಳ ಪ್ರಾಯೋಜಕತ್ವದಲ್ಲಿ ಎಸ್‌ಪಿಎ ಸದಸ್ಯರ ಮಕ್ಕಳಿಗೆ ವಾರ್ಷಿಕವಾಗಿ ಕೊಡಮಾಡುವ ಶೈಕ್ಷಣಿಕ ಪ್ರೋತ್ಸಾಹಧನ, ಪ್ರತಿಭಾ ಪುರಸ್ಕಾರಗಳನ್ನು ಪ್ರಾಯೋಜಕರುಗಳನ್ನು ಒಳಗೊಂಡು ನಿತಿನ್ ಸಿಕ್ವೇರಾ, ಐಡಾ ಹೆಚ್.ರೋಚ್ ಮತ್ತು ಪದಾಧಿಕಾರಿಗಳು ಜೋಯಲ್ ವಿವಿಯನ್ ಸಿಕ್ವೇರಾ, ಏಂಜೆಲ್ ಜೋಕಿಮ್ ಡಿಸೋಜಾ, ಜಿಸೆಲ್ ಜೋಯ್ಲಾನ್ ಫೆರ್ನಾಂಡಿಸ್, ಕರ್ಟ್ ಆಂಥೋನಿ ಗೊನ್ಸಾಲ್ವ್ವಿಸ್, ಅರ್ಡೆನ್ ಆರ್ಥರ್ ಮೆಂಡೋನ್ಸಾ, ಸಲೋನಿ ನಿತಿನ್ ಧಂಡ್ ಇವರಿಗೆ ಪುಷ್ಪಗುಚ್ಫ, ಪ್ರಮಾಣ ಪತ್ರಗಳನ್ನಿತ್ತು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಮೋಡೆಲ್ ಬ್ಯಾಂಕ್‌ನ ನಿರ್ದೇಶಕ ಕ್ಲೇಮೆಂಟ್ ಎ.ಲೊಬೋ, ನಿವೃತ್ತ ಪ್ರಾಂಶುಪಾಲೆ ಫಿಲೋಮೆನಾ ಸಿ. ಲೊಬೋ, ಉದ್ಯಮಿ ಹ್ಯಾರಿ ಕರ್ವಾಲೋ ಬಾರ್ಕೂರು, ಎಸ್‌ಪಿಎ ಜತೆ ಕಾರ್ಯದರ್ಶಿ ಜೋಸೆಫ್ ಡಿಅಲ್ಮೇಡಾ, ಸಂಯೋಜಕ ತಿಮೋಥಿ ಡಿಸೋಜಾ, ಆಂತರಿಕ ಲೆಕ್ಕ ಪರಿಶೋಧಕ ಮೈಕೆಲ್ ಡಿಅಲ್ಮೇಡಾ, ಐವಾನ್ ಸುವಾರಿಸ್ ಮುಲುಂಡ್, ಕಿರಣ್ ಆರ್.ಕರ್ವಾಲೋ ಸೇರಿದಂತೆ ಎಸ್‌ಪಿಎ ಮಾಜಿ, ಹಾಲಿ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಮತ್ತು ಸದಸ್ಯರನೇಕರು ಹಾಜರಿದ್ದರು.
ಸಂತ ಪೀಟರ್ ಅವರ ಸ್ತುತಿಗೈಯೊಂದಿಗೆ ಸಂಭ್ರಮ ಆದಿಗೊಂಡಿತು. ನಿರ್ಮಲಾ ಐವಾನ್ ರೆಬೆಲ್ಲೊ ಅವರ ಪ್ರಾರ್ಥನೆಯೊಂದಿಗೆ ಕಾರ್ಯ ಕ್ರಮ ಆದಿಗೊಂಡಿತು. ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಅತಿಥಿಗಣ್ಯರಿಗೆ ಪುಷ್ಫಗುಪ್ಛವನ್ನಿತ್ತು ಗೌರವಿಸಿದರು. ವಿನ್ಸೆಂಟ್ ಫುರ್ಟಾಡೊ ಪ್ರತಿಭಾನ್ವಿತರ ಯಾದಿ ವಾಚಿಸಿಸಿದರು. ಆರ್ಥರ್ ಮೆಂಡೋನ್ಸಾ ವಾರ್ಷಿಕ ಕಾರ್ಯಚಟುವಟಿಕೆಗಳು ಮತ್ತು ಭವಿಷ್ಯದ ಯೋಜನೆ ಬಗ್ಗೆ ಮಾಹಿತಿಯನ್ನಿತ್ತರು. ಜೋನ್ ಗೊನ್ಸಾಲ್ವ್ವಿಸ್ ಪುಅರಸ್ಕೃತರನ್ನು ಪರಿಚಯಿಸಿದರು. ಜೊಯ್ಲಾನ್ ಫೆರ್ನಾಂಡಿಸ್ ಸ್ವಾಗತಿಸಿ, ಪ್ರಸ್ತಾವನೆಗೈದು ಕಾರ್ಯಕ್ರಮ ನಿರೂಪಿಸಿದರು. ವಿಲ್ಫ್ರೇಡ್ ಸಿಕ್ವೇರಾ ಧನ್ಯವದಿಸಿದರು. ಸಂಸ್ಥೆಯ ಸದಸ್ಯರು ಮತ್ತು ಮಕ್ಕಳು ನೃತ್ಯ, ಹಾಡುಗಳನ್ನಾಡಿ ಪ್ರಹಸನಗಳೊಂದಿಗೆ ಮನೋರಂನೆ ನೀಡಿದರು. ಕು| ಅನೊಲಾ ಮಾರ್ಟಿಸ್ ಮನೋರಂಜನಾ ಕಾರ್ಯಕ್ರಮ ನಿರ್ವಾಹಿಸಿದರು.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.