Skip to main content
www.kallianpur.com | Email : kallianpur7@gmail.com | Mob : 9741001849

ಷಷ್ಠ್ಯಬ್ದಿಪೂರ್ತಿ ಪೇಜಾವರಶ್ರೀ ೩೭ನೇ ಪೀಠಾರೋಹಣ ವರ್ಧಂತೋತ್ಸವ ದೇಶಪ್ರೇಮವೇ ರಾಮಸೇವೆಯಾಗಿದೆ: ಪೇಜಾವರ ವಿಶ್ವಪ್ರಸನ್ನಶ್ರೀ.

By March 12, 2024Mumbai News
kallianpurdotcom: 9741001849
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಮಾ.೧೨: ಯಾರು ರಾಮನನ್ನು ಒಮ್ಮೆ ನೋಡಿ ಬಂದಿಲ್ಲ ಅವರಿಗೆ ಧಿಕ್ಕಾರ. ಅಂತೆಯೇ ಯಾರನ್ನು ರಾಮನು ನೋಡಿಲ್ಲವೋ ಅವನಿಗೂ ನಿತ್ಯ ಧಿಕ್ಕಾರ. ಈ ಧಿಕ್ಕಾರ ಹಾಕು ವವರು ಯಾರೂ ಊರವರು, ಮತ್ತೊಬ್ಬರಲ್ಲ ಬದಲಾಗಿ ಅವರವರ ಒಳ ಮನಸ್ಸೇ ಧಿಕ್ಕಾರಿಸುತ್ತಿದೆ. ನಾವು ಈಗ ರಾಮ ರಾಜ್ಯದಲ್ಲಿ ಇದ್ದೇವೆ. ಆದ್ದರಿಂದ ರಾಮನ ದೃಷ್ಠಿಗೆ ಬೀಳುವ ಹಾಗೆ ಬಾಳಬೇಕಾಗಿದೆ. ಯಾರು ಊರಲ್ಲಿ ಒಳ್ಳೆಯ ಕೆಲಸ ಮಾಡ್ತಾರೆ ಇದು ರಾಮನ ದೃಷ್ಠಿಗೆ ಬರುತ್ತದೆ. ರಾಮನ ಗಮನಕ್ಕೆ ಬರುವ ಒಂದು ಒಳ್ಳೆಯ ಕೆಲಸ ಮಾಡಿಲ್ಲಂದ್ರೆ ಅವನಿಗೆ ರಾಮ ನನ್ನೂ ಕಾಣಲು ಅಸಾಧ್ಯ ಎಂದು ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾ ಸಂಸ್ಥಾನದ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ, ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ಟ್ರಸ್ಟಿ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮಿಜಿ ತಿಳಿಸಿದರು.

ಅಯೋಧ್ಯೆಯ ಶ್ರೀ ದೇವರ ಸನ್ನಿಧಾನದ ಭವ್ಯ ಶ್ರೀ ರಾಮ ಮಂದಿರದ ಗರ್ಭಗುಡಿಯಲ್ಲಿ ಕಳೆದ ೪೮ ದಿನಗಳಲ್ಲಿ ತಮ್ಮ ಅಭಯಾಸ್ತಗಳಿಂದ ತತ್ವಹೋಮ, ಮಂಡಲೋತ್ಸವ ಪೂರೈಸಿ ಸಹಸ್ರ ಕಲಶಾಭಿಷೇಕ, ಬ್ರಹ್ಮಕಲಶೋತ್ಸವ ನೆರವೇರಿಸಿದ ಬಳಿಕ ಬೃಹನ್ಮುಂಬಯಿಗೆ ಪ್ರಥಮ ಬಾರಿಗೆ ಆಗಮಿಸಿದ್ದು ಮಹಾಭಕ್ತರರು ಭಕ್ತಿಪೂರ್ವಕವಾಗಿ ಸುಖಾಗಮನ ಬಯಸಿ ಷಷ್ಠಬ್ದಿ ಸಂಭ್ರಮ ದಲ್ಲಿನ ೩೭ನೇ ಪೀಠಾರೋಹಣ ದಿನಾಚರಣಾ ಶುಭಾ ಸರದಿ ನೀಡಿದ ಸನ್ಮಾನಕ್ಕೆ ಗೌರವಪೂರ್ವಕವಾಗಿ ಉತ್ತರಿಸಿ ಸದ್ಭಕ್ತರಿಗೆ ಅನುಗ್ರಹಿಸಿ ಪೇಜಾವರಶ್ರೀ ವಿಶ್ವಪ್ರಸನ್ನರು ಮಾತನಾಡಿ ದರು.

ತನ್ನ ಪೂಜ್ಯನೀಯ ಗುರುವರ್ಯ ಶ್ರೀ ಕೃಷ್ಣೆಕ್ಯಯತಿಕುಲ ಚಕ್ರವರ್ತಿ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರನ್ನು ಸ್ಮರಿಸಿದ ವಿಶ್ವಪ್ರಸನ್ನರು ರಾಮಸೇವೆಗಾಗಿ ದೇಶಸೇವೆ ಮಾಡಿದಾಗ ಇವೆರಡೂ ಕೂಡಿಬರುವುದು. ನಮ್ಮ ಸುತ್ತಮುತ್ತಲಲ್ಲಿ ಯಾರು ದುಃಖದಲ್ಲಿದ್ದಾರೆ ಅವರಿಗೆ ಏನಾದರೂ ಸಹಾಯ ಮಾಡುತ್ತೆ ವೆಯೋ ಅದೇ ದೇಶಪ್ರೇಮ ವಾಗಿದೆ. ಆದ್ದರಿಂದ ನಮಗೆ ಏನು ಸಾಧ್ಯವೋ ಅಂತಹ ಸೇವೆ ಮಾಡಿ ಕಷ್ಟ ದಲ್ಲಿರುವವರ ದುಃಖಕ್ಕೆ ಸ್ಪಂದಿಸೋಣ. ಆ ಮೂಲಕ ರಾಮದೇವರ ಕೃಪೆಗೆ ಪಾತ್ರರಾ ಗೋಣ. ಮತ್ತೊಬ್ಬರಿಂದಲ್ಲ ನಮ್ಮ ಸ್ವಮನಸ್ಸು ನಮಗೆ ಮೊದಲು ತಿಳಿದಿರಲಿ. ಅದಕ್ಕೆ ಬೇಕಾದ ಸಾತ್ವಿಕ ತತ್ವಗಳನ್ನೆಲ್ಲ ದೇವರು ಕೊಡುತ್ತಾನೆ. ನೆರೆದಿರುವ ಎಲ್ಲರಿಗೂ ರಾಮ ದೇವರು ಅನುಗ್ರಹಿಸಲಿ ಎಂದರು.

ಬೆಳಿಗ್ಗೆ ಮುಂಬಯಿ ಸಾಂತಕ್ರೂಜ್‌ನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಚರಣಸ್ಪರ್ಶಗೈದ ಪೇಜಾವರಶ್ರೀ ಅವರನ್ನು ಸಮಸ್ತ ಮುಂಬಯಿ ಮಹಾಭಕ್ತರ ಪರವಾಗಿ ಡಾ| ಎಂ.ಎಸ್ ಆಳ್ವ ಮತ್ತು ಶ್ರೀ ಪೇಜಾವರ ಮಠದ ಪ್ರಧಾನ ವ್ಯವಸ್ಥಾಪಕ ವೇ| ಮೂ| ಡಾ| ರಾಮದಾಸ ಉಪಾಧ್ಯಾಯ ರೆಂಜಾಳ ತುಳಸೀಹಾರವನ್ನಿತ್ತು ಭಕ್ತಿಪೂರ್ವಕವಾಗಿ ಬರಮಾಡಿದ್ದು ಬಳಿಕ ಭಕ್ತರೊಂದಿಗೆ ಪೇಜಾವರ ಮಠಕ್ಕೆ ಚಿತ್ತೆಸಿದ ಶ್ರೀಪಾದರನ್ನು ಮಠಕ್ಕೆ ಬರಮಾಡಿ ಕೊಂಡರು.

ಅರ‍್ವತ್ತರ ಷಷ್ಠ್ಯಬಿಯ ವಿಶ್ವಪ್ರಸನ್ನರ ೩೭ನೇ ಪೀಠಾರೋಹಣಾ ವರ್ಧಂತೋತ್ಸವದ ಶುಭಾಸರದಿ ಮಧ್ವ ಭವನದಲ್ಲಿನ ಶ್ರೀಕೃಷ್ಣ ಹನುಮಾನ್ ಮಂದಿರದಲ್ಲಿ ಆಯೋಜಿಸಲಾಗಿದ್ದ ವಿರಾಜ ಹೋಮದಲ್ಲಿ ಶ್ರೀಪಾದರು ಪಾಲ್ಗೊಂಡು ಮಹಾರ ತಿಗೈದರು. ವಿದ್ವಾನ್ ಗುರುರಾಜ ಕಲ್ಕೂರ ತನ್ನ ಪೌರೋಹಿತ್ಯದಲ್ಲಿ ಹೋಮ, ಪೂಜಾಧಿಗಳನ್ನು ನೆರವೇರಿಸಿದರು.

ಬಳಿಕ ವಿಶ್ವೇಶತೀರ್ಥ ಸಭಾಗೃಹದಲ್ಲಿ ನಡೆಸಲಾದ ಸರಳ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀಗಳವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ ಅಧ್ಯಕ್ಷ ಡಾ| ಎ.ಎಸ್.ರಾವ್, ಗೌರವ ಕಾರ್ಯದರ್ಶಿ ಬಿ.ಆರ್ ಗುರುಮೂರ್ತಿ, ಗೌರವ ಕೋಶಾಧಿಕಾರಿ ಅವಿನಾಶ್ ಶಾಸ್ತ್ರಿ, ಡಾ| ಎಂ.ಎಸ್ ಆಳ್ವ ಮತ್ತಿತರ ಭಕ್ತರು ಶ್ರೀಪಾದರನ್ನು ಸಾಂಪ್ರದಾಯಿಕವಾಗಿ ಗೌರವಿಸಿ ಗುಲಾಬಿ ಪುಷ್ಪದಳಗಳ ಸಿಂಚನದೊಂದಿಗೆ ಅಭಿನಂದಿಸಿ ದರು. ಪೂರ್ಣಪೂರ್ವ ಪ್ರಾಚಾರ್ಯ ವೇ| ಮೂ| ಹರಿದಾಸ ಭಟ್ ಸಂಸ್ಕ್ರತದಲ್ಲಿ ಪ್ರಸ್ತಾವನೆಗೈದ ಸ್ವಾಗತ ಕೋರಿ ದರು. ಡಾ| ರಾಮದಾಸ ಉಪಾಧ್ಯಾಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಈ ಸಂದರ್ಭದಲ್ಲಿ ಶ್ರೀ ಪೇಜಾವರ ಮಠದ ವಿದ್ವಾನ್ ಹರಿ ಭಟ್, ಪ್ರಕಾಶ ಆಚಾರ್ಯ ರಾಮಕುಂಜ, ನಿರಂಜನ್ ಗೋಗ್ಟೆ, ವೇ| ಮೂ| ಪ್ರದೀಪ್ ಸಿಂಹಾಚಾರ್ಯ, ವೇ| ಮೂ| ಹರಿದಾಸ ಭಟ್ ಅದ್ಯಪಾಡಿ, ವೇ| ಮೂ| ವಿಜಯೇದ್ರ ಆಚಾರ್ಯ, ಪವನ್ ಭಟ್ ಅಣ್ಣಿಂಗೆೆರಿ, ಮುಕುಂದ್ ಬೈತಮಂಗಳ್ಕರ್, ವಿಷ್ಣುತೀರ್ಥ ಸಾಲಿ, ರಮೇಶ್ ಭಟ್, ರಾಘ ವೇಂದ್ರ ಭಟ್, ರಾಧಾಕೃಷ್ಣ ಭಟ್, ಸೂರ್ಯ ಆಚಾರ್ಯ ಎಲ್ಲೂರು, ಮಠದ ಪುರೋಹಿತ ವರ್ಗ, ಪೇಜಾವರ ಯತಿಗಳ ಶಿಷ್ಯವೃಂದ, ಸೀತಾರಾಮ ಎಂ.ಶೆಟ್ಟಿ ವಾಮಂಜೂರು, ನ್ಯಾಯವಾದಿ ರವಿ ಕೋಟ್ಯಾನ್, ಸದಾನಂದ ಆಚಾರ್ಯ ಕಲ್ಯಾಣ್ಫುರ ಸೇರಿದಂತೆ ಸ್ಥಾನೀಯ ಆರ್‌ಎಸ್‌ಎಸ್, ಬಜರಂಗ ದಳ ಹಾಗೂ ಮುಂಬಯಿ ಅಲ್ಲಿನ ವಿವಿಧ ಮಠ-ಮಂದಿರ, ಧಾರ್ಮಿಕ ಸಂಸ್ಥೆಗಳ ಮುಖ್ಯಸ್ಥರು ಹಾಜರಿದ್ದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.