
kallianpurdotcom: Mob 9741001849
Official release from Mount Rosary School, Santhekatte.
ಸಂತೆಕಟ್ಟೆ: ಇಂದಿನ ಸ್ವರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಬಹಳ ಪ್ರತಿಭಾನ್ವಿತರಾಗಿತ್ತಾರೆ. ಹಾಗಾಗಿ ಶಿಕ್ಷಕರು ಪ್ರತಿವರ್ಷ ವೃತ್ತಿ ಪ್ರವೃತ್ತಿ ಯಲ್ಲಿ ಕ್ರಿಯಾಶೀಲರಾಗಿ ಮಕ್ಕಳ ಮನೋಭಾವನೆಯನ್ನು ಅರಿತು ಬೋಧಿಸಬೇಕಾಗುತ್ತದೆ. ಅದೇ ಹಳೇಯ ಉದಾಹರಣೆಗಳ ಬದಲಿಗೆ ಪ್ರಚಲಿತ ವಿಷಯಗಳ ಉದಾಹರಣೆ ನೀಡಿ ಪಾಠಮಾಡಬೇಕಾಗುತ್ತದೆ. ಯಾಕೆಂದರೆ ವಿದ್ಯಾರ್ಥಿಗಳು ಲವಲವಿಕೆ ಪಾಠವನ್ನು ಇಷ್ಟಪಡುತ್ತಾರೆ. ಎಂದು ಮಣಿಪಾಲದ ಮಾಹೆ ಸಂಸ್ಥೆಯ ಔದ್ಯೋಗಿಕ ಪ್ರಕ್ರಿಯ ವಿಭಾಗದ ಸಹಾಯಕ ಪ್ರೋಫೆಸರ್ ಡಾ| ಶಾಲಿನಿ ಕ್ವಾಡ್ರಸ್ ಹೇಳಿದರು.
ಅವರು ಸಂತೆಕಟ್ಟೆ ಮೌಂಟ್ ರೋಸರಿ ಶಾಲಾ ಶಿಕ್ಷಕರಿಗೆ ಏರ್ಪಡಿಸಿದ ಪುನಶ್ಚೇತನ ಕಾರ್ಯಗಾರದಲ್ಲಿ ಮುಖ್ಯ ಸಂಪನ್ಮೂಲ ವೆಕ್ತಿಯಾಗಿ ತರಬೇತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಾಲಾ ಮುಖ್ಯಸ್ಥೆ ಸಿ| ಆನ್ಸಿಲ್ಲಾ ಡಿಮೆಲ್ಲೊ ಮಾತನಾಡಿ ಶಿಕ್ಷಕರು ಸದಾ ವಿದ್ಯಾರ್ಥಿಗಳಂತೆ ಸದಾ ತಮ್ಮ ವಿಷಯದಲ್ಲಿ ಹೊಸತನವನ್ನು ಅಳವಡಿಸಿಕೊಳ್ಳಲು ಉತ್ಸುಕರಾಗಬೇಕು ಎಂದು ಕರೆ ಕೊಟ್ಟರು.
ಶಿಕ್ಷಕಿ ಅಮೃತಾ ಸ್ವಾಗತಿಸಿದರು, ಮಾರ್ತ ಅತಿಥಿಗಳ ಪರಿಚಯವನ್ನು ಸಭೆಗೆ ಮಾಡಿಕೊಟ್ಟರು. ದಿವ್ಯಾಜೋತಿ ನಿರೂಪಿಸಿ ಸಾರಾ ವಂದಿಸಿ ದರು.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.