Skip to main content
www.kallianpur.com | Email : kallianpur7@gmail.com | Mob : 9741001849

*ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಶ್ರೇಷ್ಠತಾ ಪ್ರಮಾಣ ಪತ್ರ* ಪುರಸ್ಕೃತ *ಡಾ. ರೋನಾಲ್ಡ್ ಕುಲಾಸೊ* ರವರಿಗೆ *ಮಂಗಳೂರಿನ ನಾಗರಿಕ ಸನ್ಮಾನ*

By February 24, 2023February 28th, 2023Kannada News
ಇಂದು ಮಂಗಳೂರಿನ ಫಾದರ್ ಮುಲ್ಲರ್ಸ್ ಕನ್ವೆನ್ಷನ್ ಸಭಾಭವನದಲ್ಲಿ *ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಶ್ರೇಷ್ಠತಾ ಪ್ರಮಾಣ ಪತ್ರ* ಪುರಸ್ಕೃತ *ಡಾ. ರೋನಾಲ್ಡ್ ಕುಲಾಸೊ* ರವರಿಗೆ ನಡೆಸಿದ *ಮಂಗಳೂರಿನ ನಾಗರಿಕ ಸನ್ಮಾನ* ಕಾರ್ಯಕ್ರಮವು ವಿಶಿಷ್ಟತೆಯಿಂದ ಇತಿಹಾಸದ ಪುಟದಲ್ಲಿ ಸೇರಿತು.
 *ನಿರೀಕ್ಷೆಗೂ ಮೀರಿದ ಜನಸಾಗರ.* ಸಂಘಟಕರ ಮನತಣಿಸಿದ್ದು  ಮಾತ್ರ ಸುಳ್ಳಲ್ಲ.ಜಾತಿ ಧರ್ಮ ಭೇದವಿಲ್ಲದೆ ಜೊತೆಗೆ ಯಾವುದೇ ರಾಜಕೀಯದ ಪರಿಮಳವು ಸುಳಿಯದೆ, ನಾವೆಲ್ಲರೂ ಒಂದು ಎಂಬ ಸಂದೇಶವು ಈ ಕಾರ್ಯಕ್ರಮದ ಮೂಲಕ ಮಂಗಳೂರಿಗೆ ಜೊತೆಗೆ ಜಗತ್ತಿಗೆ ಸಾರಿತು. ಒಂದುವರೆ ಸಾವಿರದಿಂದ ಎರಡು ಸಾವಿರ ಜನರ ನಿರೀಕ್ಷೆಯಲ್ಲಿದ್ದ ಸಂಘಟಕರಿಗೆ, ಹೆಚ್ಚುಕಮ್ಮಿ ಮೂರುವರೆ ಸಾವಿರ ಜನ ನೋಡಿ ಆಶ್ಚರ್ಯದ ಜೊತೆಗೆ ಸಂತೃಪ್ತಿಯು ಆಗಿತ್ತು.
ಯಾವುದೇ ಗೊಂದಲವಿಲ್ಲದೆ  ವ್ಯವಸ್ಥಿತ ಮತ್ತು ಅಚ್ಚುಕಟ್ಟಾದ ಸಭಾ ಕಾರ್ಯಕ್ರಮ. ಜೊತೆಗೆ ಶುಭ ಹಾರೈಸುವ ವಿವಿಧ ಭಾಷೆಯ ಸಂಗೀತ.. ನೀಡಿದ ಸಮಯವನ್ನು ಮೀರದೆ ಅತಿಥಿಗಳ ಸರಳತೆಯ ಮತ್ತು ಗೌರವದ ಮಾತು.. *ವೇದಿಕೆಯಲ್ಲಿದ್ದ ಅತಿಥಿಗಳಲ್ಲೂ ಸೌಹಾರ್ದತೆ..* ವೇದಿಕೆಯ ಬಲ ಹಾಗೇನೇ ಎಡ ಭಾಗದಲ್ಲಿ ಕ್ರೈಸ್ತ ಸಮಾಜದ ರಾಜಕೀಯದ *ಎರಡು ಕಣ್ಣು* ಗಳಾಗಿರುವ ಜೆ ಆರ್ ಲೋಬೊ ಮತ್ತು ಐವನ್ ಡಿಸೋಜಾ ಕಾರ್ಯಕ್ರಮದ ಯಶಸ್ವಿಯಲ್ಲಿ ತಾವು ನೇರವಾದರು.
ಅಭಿಮಾನ ಮತ್ತು ಗೌರವದ ಸನ್ಮಾನ ಸ್ವೀಕರಿಸಿದ ಶ್ರೀ ರೊನಾಲ್ಡ್ ಕುಲಾಸೋ ರವರ ಸ್ಪೂರ್ತಿದಾಯಕ ಮಾತುಗಳು ಮೆರೆದವರೆಲ್ಲರಿಗೂ ಹೃದಯಕ್ಕೆ ಹತ್ತಿರವಾಗಿತ್ತು. ಅತಿಥಿಗಳಲ್ಲಿ ಓರ್ವ ರಾಗಿದ್ದ ಧರ್ಮಾದ್ಯಕ್ಷರು ತನ್ನ ಮಾತಿನಲ್ಲಿ ರೋನಾಲ್ಡ್ ಕುಲಾಸೊರವರನ್ನು *”ವಿಶ್ವಮಾನವ”* ಎಂದು ಬಣ್ಣಿಸಿದ್ದರು. ಆದರೂ ತನ್ನ ಮಾತಿನ ಮೂಲಕ ತಾನೋರ್ವ ಅತ್ಯಂತ ಸರಳ ವ್ಯಕ್ತಿ ಎಂಬುದನ್ನು ಕುಲಾಸೊ ತೋರಿಸಿಕೊಟ್ಟರು. ಹೆಚ್ಚು ಕಮ್ಮಿ ಹತ್ತು ನಿಮಿಷ ತನ್ನ ಅನಿಸಿಕೆಯನ್ನು ವ್ಯಕ್ತಪಡಿಸಿದ್ದ ಕುಲಾಸೋ, ಎಲ್ಲರಿಗೂ ಮಾದರಿ ಮತ್ತು ಸ್ಪೂರ್ತಿಯಾದರು. ತನ್ನ ಯಶಸ್ಸಿನಲ್ಲಿ ತನ್ನ ಪತ್ನಿಯ ಬಹುಪಾಲು ಇದೆ ಎಂದು ಬಣ್ಣಿಸಿದರು. ಮದುವೆಯ ದಿನ ತಾನು ತನ್ನ ಉದ್ಯಮದಲ್ಲಿ ಬಂದ ಯಶಸ್ಸಿನ ಪಾಲಿನಲ್ಲಿ ಸ್ವಲ್ಪ ಭಾಗವನ್ನು ಸಮಾಜಸೇವೆಗೆ ಮತ್ತು ಸ್ವಲ್ಪ ಭಾಗವನ್ನು ದೀನ ದಲಿತರ ಸೇವೆಗೆ ಉಪಯೋಗಿಸುತ್ತೇನೆ ಎಂದು ಹರಕೆ ಹಾಕಿದ್ದೆ. ಅದನ್ನು ಈಗಲೂ ಅಚ್ಚುಕಟ್ಟಾಗಿ ಪಾಲಿಸುತ್ತಿದ್ದೇನೆ. ಇಂತಹ ಸೇವಾ ಕಾರ್ಯದ ಮೂಲಕ ನಾನು ತೃಪ್ತನಾಗಿದ್ದೇನೆ. ಜೊತೆಗೆ ದೇವರ ಆಶೀರ್ವಾದದಿಂದ ಆರೋಗ್ಯವಾಗಿದ್ದೇನೆ. ಕೇವಲ ಸಮಾಜವನ್ನು ಸ್ವಚ್ಛತೆ ಮಾಡುವುದು ಮುಖ್ಯವಲ್ಲ, ಮೊದಲು ನಮ್ಮ ಹೃದಯವನ್ನು ಸ್ವಚ್ಛತೆ ಮಾಡಬೇಕು ಎಂಬ ಮಾತುಗಳ ಜೊತೆಗೆ ತನ್ನ ಮಾತಿನಲ್ಲಿ ಹಾಸ್ಯ ಚಟಾಕಿಯ ಮೂಲಕ ಜನರ ಗಮನಸೆಳೆದರು. ಸಂಘಟಕರು ಇಂತಹ ದೊಡ್ಡ ಕಾರ್ಯಕ್ರಮ ನನಗೋಸ್ಕರ  ಮಾಡುವುದರ ಬದಲು, ಜಿಲ್ಲೆಯಲ್ಲಿರುವ ಬಡವರ ಸೇವೆಗೆ ಏನಾದರೂ ಮಾಡಿದ್ದರೆ ನಾನು ಇನ್ನಷ್ಟು ತೃಪ್ತನಾಗುತಿದ್ದೆ ಎಂದ ಹೃದಯವಂತಿಕೆಯ ಮಾತುಗಳು ತಾನು ಸರಳತೆಯ ವ್ಯಕ್ತಿ ಎಂಬುದನ್ನು ತೋರಿಸಿಕೊಟ್ಟಿತ್ತು.
 ಕಾರ್ಯಕ್ರಮದ ಕೊನೆಯ ಭಾಗದಲ್ಲಿ ಸಂಘಟಕರು ವಿವಿಧ ಸಂಘ ಸಂಸ್ಥೆಗಳಿಗೆ ಮತ್ತು ಹಾಜರಿದ್ದ ಎಲ್ಲರಿಗೂ ಶ್ರೀ ಕುಲಾಸೋ ರವರಿಗೆ ಅಭಿನಂದಿಸಲು ಅವಕಾಶ ಮಾಡಿಕೊಟ್ಟಿದ್ದರು. ಜೊತೆಗೆ ವ್ಯವಸ್ಥಿತವಾದ ಸಸ್ಯಹಾರಿ ಊಟದ ವ್ಯವಸ್ಥೆ. ಸಂಭ್ರಮದ ಕಾರ್ಯಕ್ರಮದ ಭೋಜನದಲ್ಲಿ ಸ್ಟಾರ್ಟರ್, ಮೇನ್ ಕೋರ್ಸ್, ಮೀಲ್ಸ್, ಸಿಹಿ, ಹೀಗೆ 32 ಬಗ್ಗೆಯ ಭಕ್ಷ ಹಾಜರಿದ್ದ ಎಲ್ಲರಿಗೂ ವ್ಯವಸ್ಥಿತ ಕೌಂಟರ್ಗಳ ಮೂಲಕ ಯಾವುದೇ ಗೊಂದಲ ವಿಲ್ಲದೆ ಸ್ವೀಕಾರ ಮಾಡಲು ಸಾಧ್ಯವಾಯಿತು.
 ಇಷ್ಟು ದಿನ ತಮ್ಮ ದುಡಿಮೆಯ ಮೂಲಕ ಜಾತಿ ಮತ ಧರ್ಮ ಭೇದವಿಲ್ಲದೆ ರಾಜ್ಯದ ಮೂಲೆ ಮೂಲೆಗಳಲ್ಲಿ ತನ್ನ ಸಹಾಯ ಹಸ್ತ ಚಾಚಿರುವ ಜೊತೆಗೆ ರಸ್ತೆ, ಪೊಲೀಸ್ ಸ್ಟೇಷನ್ ಮತ್ತು ವಿವಿಧ ಸರಕಾರದ ಕಾರ್ಯಕ್ರಮಗಳಿಗೆ ತನ್ನ ಸಂಪೂರ್ಣ ನೆರವನ್ನು ನೀಡಿರುವಂತಹ ರೊನಾಲ್ಡ್ ಕುಲಾಸೊ ರವರಿಗೆ ಅವರೇ ಸಾಟಿ.. ತನ್ನ ಹಾಗೆ ಹಾಜರಿದ್ದ ಎಲ್ಲರೂ ತಮ್ಮ ಯಶಸ್ಸಿನ ಸ್ವಲ್ಪ ಪಾಲು ಸಮಾಜಕ್ಕೆ ಮತ್ತು ನೊಂದವರಿಗೆ ನೀಡಿ ಎಂಬ ಹರಕೆಯನ್ನು ಸಭೆಯಲ್ಲಿಯೇ ಹಾಕಲು ತಿಳಿಸಿದ್ದು, ಜೊತೆಗೆ ಹಾಜರಿದ್ದ ಎಲ್ಲಾ ಸಭಿಕರು ಅದಕ್ಕೆ ಸ್ಪಂದನೆ ನೀಡಿದ್ದು ವಿಶೇಷವಾಗಿತ್ತು.
 ಇಷ್ಟು ದಿನದ ಸಂಘಟಕರ ಪ್ರಯತ್ನಕ್ಕೆ ಇಂದು ಅದ್ಭುತ ಫಲ ಸಿಕ್ಕಿದೆ.. ಮಂಗಳೂರಿನಲ್ಲಿ ಕಾರ್ಯಕ್ರಮವಾದರೂ, ಉಡುಪಿ ಜಿಲ್ಲೆಯ ವಿವಿಧ ಭಾಗಗಳಿಂದ ಜನರು ಆಗಮಿಸಿ ಶ್ರೀ ರೊನಾಲ್ಡ್ ಕುಲಾಸೊ ರವರಿಗೆ ಅಭಿನಂದನೆ ಸಲ್ಲಿಸಿದ್ದು ವಿಶೇಷವಾಗಿತ್ತು. ಸಮಾರಂಭದ ಕೊನೆಯ ಭಾಗದಲ್ಲಿ ವಿವಿಧ ಸಂಘ-ಸಂಸ್ಥೆಗಳು ಅಭಿನಂದನೆ ಸಲ್ಲಿಸುವಾಗಲು ಶ್ರೀ ರೊನಾಲ್ಡ್ ಕುಲಾಸೊ ರವರಲ್ಲಿದ್ದ ಸರಳತೆ ಎಲ್ಲರಿಗೂ ಮಾದರಿ.
ಜೊತೆಯಲ್ಲಿ ಈ ಇಬ್ಬರು ನಾಯಕರುಗಳ ಜೊತೆಗೆ ಉಡುಪಿ, ಮಂಗಳೂರಿನ ಪ್ರಮುಖ ಘಟಾನುಘಟಿ ಸಂಘ ಸಂಸ್ಥೆಗಳ ಪ್ರಮುಖರು ಕಾರ್ಯಕ್ರಮದ ಯಶಸ್ಸಿನಲ್ಲಿ ಸಹಕರಿಸಿದ್ದರು. ಶ್ರೀ ಕುಲಾಸೊ ರವರ ಆಪ್ತ ಶ್ರೀ ಡೆನ್ನಿಸ್ ಡಿಸಿಲ್ವಾ ರವರ ನೇತೃತ್ವವು ಕಾರ್ಯಕ್ರಮದ ಯಶಸ್ವಿನಲ್ಲಿ ಬಹುಪಾಲಿತ್ತು. ಸದಾ ತನ್ನ ಉದ್ಯಮದಲ್ಲಿ ಬ್ಯುಸಿ ಇರುತ್ತಿದ್ದ ಉಡುಪಿಯ ಯಶಸ್ವಿ ಉದ್ಯಮಿ ಮಾಂಡವಿ ಬಿಲ್ಡರ್ಸ್ ಪ್ರವರ್ತಕ ಶ್ರೀ ಜೇರಿ ವಿನ್ಸೆಂಟ್ ಡಾಯಸ್ ರವರು ಕಾರ್ಯಕ್ರಮದ ಯಶಸ್ಸಿನ ಜೊತೆಗೆ ವೇದಿಕೆಯಲ್ಲಿ ಉಪಸ್ಥಿತರಿದ್ದದ್ದು ಉಡುಪಿಗೂ ಹೆಮ್ಮೆ ತಂದಿತ್ತು.
 ವ್ಯವಸ್ಥಿತ, ಅಚ್ಚುಕಟ್ಟಾದ ಮತ್ತು ಯಾವುದೇ ಗೊಂದಲವಿಲ್ಲದೆ ನಡೆಸಿದ ಕಾರ್ಯಕ್ರಮ ಎಲ್ಲರಿಗೂ ಮಾದರಿ. ಯಶಸ್ಸಿನ ರುವಾರಿಗಳಾಗಿರುವ ಉಡುಪಿ ಮಂಗಳೂರಿನ ಎಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯರಿಗೆ *ಅಭಿನಂದನೆಗಳು.*
( ವರದಿ : ಸ್ಟೀವನ್ ಕುಲಾಸೋ ಉದ್ಯಾವರ )

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.