Skip to main content
www.kallianpur.com | Email : kallianpur7@gmail.com | Mob : 9741001849

ವಿಶ್ವ ಪರಿಸರ ದಿನಾಚರಣೆ -ಸಂತೆಕಟ್ಟೆ ಮೌಂಟ್ ರೋಜರಿ ಆಂಗ್ಲ ಶಾಲೆ.

By June 6, 2023Kannada News

kallianpurdotcom : 06/06/2023

ನಾವು ಪ್ರಕೃತಿಯ ವಿರುದ್ಧ ಅದಲ್ಲಿ ಪ್ರಕೃತಿ ನಮ್ಮ ವಿರುದ್ಧ ಬರಲಿದೆ

ಈ ಭೂಮಿ ದೇವರು ಮಾನವನಿಗೆ ಕೊಟ್ಟ ವರದಾನ. ಅದನ್ನು ಉಳಿಸಿ, ಬೆಳೆಸಿ ಮುಂದಿನ ಜನಾಂಗಕ್ಕೆ ನೀಡುವುದು ನಮ್ಮ ಜವಾಬ್ದಾರಿ. ಮಳೆಗಾಲ ಆರಂಭವಾದರೂ, ಮಳೆ ಮರೀಚಿಕೆಯಾಗಿದೆ. ಮಳೆಗಾಗಿ ಪ್ರಾರ್ಥಿಸಿದರೆ ಸಾಲದು. ಗಿಡಮರ ಬೆಳೆಸಿ,ಪ್ಲಾಸ್ಟಿಕ್ ಮುಕ್ತ ಪರಿಸರ ಮಾಡಬೇಕು. ಪ್ರಕೃತಿಯ ವಿರುದ್ಧ ಹೋದಲ್ಲಿ ಪ್ರಕೃತಿಯು ನಮ್ಮ ವಿರುದ್ಧ ಬರಲಿದೆ. ಆ ಲಕ್ಷಣಗಳು ಕಾಣುತ್ತಿವೆ ಎಂದು ಮುಖ್ಯ ಶಿಕ್ಷಕಿ ಧರ್ಮಭಗಿನಿ ಸಿ ಅನ್ಸಿಲ್ಲಾ ಡಿ’ಮೆಲ್ಲೊ ಹೇಳಿದರು.

ಸಂತೆಕಟ್ಟೆ ಮೌಂಟ್ ರೋಜರಿ ಆಂಗ್ಲ ಶಾಲೆಯಲ್ಲಿ ಸ್ಕೌಟ್ಸ್ ಗೈಡ್ಸ್ ತಂಡ ಆಯೋಜಿಸಿದ ವಿಶ್ವ ಪರಿಸರ ದಿನಾಚರಣೆಯನ್ನು ಗಿಡ ನೆಡೆವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳಾದ ಆಶೀಸ್, ಕಾರ್ತಿಕೇಯ, ಭಾನ್ವಿ ಶೆಣೈ, ಸಿಂಧೂರಿ ಪರಿಸರದ ಮಹತ್ವವನ್ನು ಹೇಳಿದರು. ವಿದ್ಯಾರ್ಥಿಯರು ಸಾಮೂಹಿಕವಾಗಿ ಪರಿಸರ ಗೀತೆಗಳನ್ನು ಹಾಡಿದರು.

ಸ್ಕೌಟ್ಸ್ ಗೈಡ್ಸ್, ಕಬ್ಸ್ ಬುಲ್ ಬುಲ್ ವಿದ್ಯಾರ್ಥಿಗಳು ಪರಿಸರ ಪೂರಕ ಫಲಕಗಳೊಂದಿಗೆ ಘೋಷಣೆಗಳನ್ನು ಕೂಗುತ್ತಾ, ಸಂತೆಕಟ್ಟೆ ಪರಿಸರದಲ್ಲಿ ಜಾಥವನ್ನು ತೆಗೆದು ಸಾರ್ವಜನಿಕರಲ್ಲಿ ಪರಿಸರವನ್ನು ಕಾಪಾಡುವ ಜಾಗೃತಿಯನ್ನು ಮೂಡಿಸಿದರು. ಶಿಕ್ಷಕಿಯಾರದ ಮಾಗ್ದೆಲೀನ್, ಪುಷ್ಪಾ, ನೀಮಾ, ಸತ್ಯವತಿ, ವಿದ್ಯಾಲತ ಸಹಕರಿಸಿದರು.

ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಸುರಕ್ಷಾ ನಿರೂಪಿಸಿ ವಂದಿಸಿದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.